Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ರಾತ್ರಿ ಬೇಗ ಊಟ ಮಾಡುವುದಕ್ಕೂ, ತೂಕ ಇಳಿಸುವುದಕ್ಕೂ ಏನ್ ಸಂಬಂಧ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಆಹಾರದ ಬಗ್ಗೆ ಸಾಕಷ್ಟು ಕಾಳಜಿ (Care) ಇರುವವರು ತಮ್ಮ ರಾತ್ರಿಯ ಊಟವನ್ನು ಬೇಗನೆ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ರಾತ್ರಿಯ ಊಟವನ್ನು ಬೇಗ ತಿನ್ನೋದ್ರಿಂದ ಸಾಕಷ್ಟು ಪ್ರಯೋಜನಳಿವೆ ಗೊತ್ತಾ.?

ಮುಂಜಾನೆ ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಕ್ಯಾಲೊರಿಗಳನ್ನು ಸುಡಲು (Calorie burn) ಸಾಕಷ್ಟು ಸಮಯವನ್ನು ಒದಗಿಸುವುದಿಲ್ಲ, ಇದು ನಿಮ್ಮ ಅತ್ಯಧಿಕ ಹಾರ್ಮೋನುಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ಇದನ್ನು ಓದಿ : Mother : ಈ ರೀತಿ ಮಗು ಹುಟ್ಟಲು ಗರ್ಭಿಣಿಯಾಗಿದ್ದಾಗ ತಾಯಿ ಮಾಡಿದ ತಪ್ಪೇನು ಗೊತ್ತೇ.!

ಅಂದರೆ ಸಂಜೆ 5 ಅಥವಾ 6 ಗಂಟೆಗೆ ತಿನ್ನುವುದು ನಿಮ್ಮ ಅನಾರೋಗ್ಯಕರ ಕಡು ಬಯಕೆಗಳನ್ನು ಕಮ್ಮಿ ಮಾಡಿ, ಕೊಬ್ಬು ಸಂಗ್ರಹವಾಗುವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ಅಭ್ಯಾಸವು ತೂಕ ನಷ್ಟಕ್ಕೆ (weight loss) ಸಹಾಯ ಮಾಡುವುದಲ್ಲದೇ ಚಯಾಪಚಯವನ್ನು ಪ್ರಚೋದಿಸುತ್ತದೆ. ಈ ಅಭ್ಯಾಸವು ಸ್ವಯಂಚಾಲಿತವಾಗಿ ಮಧ್ಯಂತರ ಉಪವಾಸಕ್ಕೆ ಕಾರಣವಾಗುತ್ತದೆ.

ರಾತ್ರಿ ಮಲಗೋಕ್ಕಿಂತ ಮುಂಚೆ 3 ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು. ಅಂದರೆ, ವ್ಯಕ್ತಿಯು 10 ಗಂಟೆಗೆ ಮಲಗಲು ಹೋದರೆ, ಆ ವ್ಯಕ್ತಿಯು ರಾತ್ರಿಯ ಊಟ ಮಾಡಬೇಕಾದ ಸರಿಯಾದ ಸಮಯ 7:00 ರಿಂದ 7:30 ಒಳಗೆ. ಇದಕ್ಕಿಂತ ತಡವಾಗಿ ಆಹಾರವನ್ನು ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು.

ರಾತ್ರಿ ಬೇಗ ಊಟ ಮಾಡುವುದರಿಂದ ರಾತ್ರಿ ಬೇಗನೆ ನಿದ್ರಿಸಬಹುದು‌ (sleep). ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ನಿದ್ದೆ ಮಾಡುವುದರಿಂದ ದೇಹದ ಆಯಾಸ ದೂರವಾಗುತ್ತದೆ. ಚೆನ್ನಾಗಿ ನಿದ್ದೆ ಬರುತ್ತದೆ. ನಿದ್ದೆ ಆರೋಗ್ಯಕ್ಕೆ ಬಹಳ ಮುಖ್ಯ. ಬೇಗನೇ ಮಲಗಿದ್ರೆ ಬೆಳಗ್ಗೆ ಬೇಗನೇ ಏಳಬಹುದು ಹಾಗೂ ಫ್ರೆಶ್‌ ಆಗಿರಬಹುದು. ಆ ಮೂಲಕ ವ್ಯಕ್ತಿಯ ದೇಹದಲ್ಲಿ ಶಕ್ತಿ ಉಳಿಯುತ್ತದೆ.

ಇನ್ನೂ ತಡ ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೇವೆ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಬೇಗ ಆಹಾರ ಸೇವಿಸಿದರೆ ಮಲಬದ್ಧತೆ (Constipation) ಸಮಸ್ಯೆಯ ಜೊತೆಗೆ ಹೊಟ್ಟೆ ಉರಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ರಾತ್ರಿ ತಡವಾಗಿ ಊಟ ಮಾಡುವುದರಿಂದ ಕೆಲವರು ಸಾಮಾನ್ಯವಾಗಿ ಎದೆಯುರಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಸಿಡಿಟಿಯಿಂದ ಈ ಸಮಸ್ಯೆ ಬರಬಹುದು. ಒಬ್ಬ ವ್ಯಕ್ತಿಯು ಬೇಗನೆ ಆಹಾರವನ್ನು ಸೇವಿಸಿದರೆ ಅವನು ಎದೆಯುರಿ, ಆಮ್ಲೀಯತೆಯನ್ನು (Acidity) ತಪ್ಪಿಸಬಹುದು. ರಾತ್ರಿ ಬೇಗ ಊಟ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಉಪಯುಕ್ತ.

ಇದನ್ನು ಓದಿ : ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ಐವರ ಸಾವು.!

ನಾವು ಮಲಗುವ 2 ರಿಂದ 3 ಗಂಟೆಗಳ ಮೊದಲು ತಿನ್ನುವುದರಿಂದ ನಮ್ಮ ದೇಹವು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತಿಸುವ (Transforming) ಮೂಲಕ ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳುತ್ತದೆ.

ಸರಿಯಾದ ಇನ್ಸುಲಿನ್ ಮಟ್ಟವನ್ನು ನಿರ್ವಹಿಸುವ ಮೂಲಕ, ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ಬೇಗ ರಾತ್ರಿಯ ಊಟವನ್ನು (Have an early dinner) ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img