Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರ ಸೇವನೆಯಿಂದಾಗುವ ಉಪಯೋಗಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಅಡುಗೆಯಿಂದ (cook) ಹಿಡಿದು ಕುಡಿಯುವ ನೀರನ್ನು ಸಂಗ್ರಹಿಸಿಡಲು ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದ ಕಾಲವೊಂದಿತ್ತು. ಮಣ್ಣಿನ ಪಾತ್ರೆಗಳು ಸಾಂಪ್ರದಾಯಿಕ (traditional) ಪಾತ್ರೆಗಳಲ್ಲಿ ಒಂದಾಗಿದೆ.

ಬೇಯಿಸಿದ ಅಡುಗೆಗಳು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದೇ ಕಾರಣಕ್ಕೆ ಇದೀಗ ಹೆಚ್ಚಿನವರು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವತ್ತ ಮುಖ ಮಾಡಿದ್ದಾರೆ.

ಇದನ್ನು ಓದಿ : Warning : ಪದೇ ಪದೇ ಮೂತ್ರ ವಿಸರ್ಜನೆ ಈ ರೋಗಗಳ ಲಕ್ಷಣವಾಗಿರಬಹುದು.!

ಬನ್ನಿ ಹಾಗಾದರೆ ಮಣ್ಣಿನ ಪಾತ್ರೆಗಳಿಂದ ಅಡುಗೆ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು (health benefits) ಅಂತ ತಿಳಿಯೋಣ.

ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಿದರೆ ಅದು ಪಿ.ಹೆಚ್ ಮಟ್ಟವನ್ನು ಸಮತೋಲನಗೊಳಿಸಲು (balance) ಸಹಾಯ ಮಾಡುತ್ತದೆ. ವಾಸ್ತವವಾಗಿ ಮಣ್ಣೀನ ಕ್ಷಾರೀಯ ಸ್ವಭಾವವು ಆಹಾರದಲ್ಲಿರುವ ಆಮ್ಲದೊಂದಿಗೆ ಪ್ರತಿಕ್ರಿಯಿಸುತ್ತದೆ. ಇದರಿಂದಾಗಿ ಪಿ.ಹೆಚ್ ಮಟ್ಟ ನಿರ್ವಹಿಸಲ್ಪಡುತ್ತದೆ.

ಮಣ್ಣಿನ ಪಾತ್ರೆಯಲ್ಲಿ ಮಧುಮೇಹಿಗಳು ಬೇಯಿಸಿದ ಆಹಾರವನ್ನು ತಿನ್ನಬೇಕು ಎನ್ನಲಾಗುತ್ತದೆ. ಏಕೆಂದರೆ ಮಣ್ಣಿನ ಪಾತ್ರೆಯಲ್ಲಿ ಆಹಾರವನ್ನು ನಿಧಾನವಾಗಿ (slowly) ಮತ್ತು ಸರಿಯಾದ ರೀತಿಯಲ್ಲಿ ಬೇಯಿಸಲಾಗುತ್ತದೆ. ಇಂತಹ ಆಹಾರವನ್ನು ಸೇವನೆ ಮಾಡುವುದರಿಂದ ಇನ್ಸುಲಿನ್ ಉತ್ಪಾದನೆಯು ಸಮತೋಲನದಲ್ಲಿರುತ್ತದೆ. ಇದಲ್ಲದೆ ಇದು ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಅಲ್ಯೂಮಿನಿಯಂ, ನಾನ್ ಸ್ಟಿಕ್ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಹೆಚ್ಚು ಸುರಕ್ಷಿತ (safe). ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು ಮೆಗ್ನೇಸಿಯಂ ನಂತಹ ಖನಿಜಗಳು ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರದಲ್ಲಿ ಕಂಡುಬರುತ್ತವೆ. ಇಂತಹ ಪೋಷಕಾಂಶಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುವುದಿಲ್ಲ.

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಅದರ ರುಚಿ ಸಂಪೂರ್ಣವಾಗಿ ಬದಲಾಗುತ್ತದೆ. ವಾಸ್ತವವಾಗಿ ಮಣ್ಣು ಕ್ಷಾರೀಯ ಗುಣವನ್ನು (Alkaline quality) ಹೊಂದಿದೆ. ಮಣ್ಣಿನ ಮಡಿಕೆಗಳು ಆಹಾರದ ಪೋಷಕಾಂಶಗಳನ್ನು ಹಾಗೆಯೇ ಇರಿಸುತ್ತವೆ. ಆದ್ದರಿಂದ ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ.

ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಲು ಕಡಿಮೆ ಎಣ್ಣೆಯನ್ನು (oil) ಬಳಸಲಾಗುತ್ತದೆ. ಈ ಕಾರಣದಿಂದ ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : Health : ಹತ್ತರಕಿ ಸೊಪ್ಪು ತಿನ್ನುವುದರಿಂದ ಆಗುವ ಹತ್ತು ಹಲವು ಆರೋಗ್ಯ ಪ್ರಯೋಜನಗಳು.!

ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಅಥವಾ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಮತ್ತು ಅಸಿಡಿಟಿ (Constipation and acidity) ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ಪ್ರಕ್ರಿಯೆಯನ್ನೂ ಆರೋಗ್ಯಕರವಾಗಿರಿಸುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img