Tuesday, September 17, 2024
spot_img
spot_img
spot_img
spot_img
spot_img
spot_img
spot_img

ಬೆಳಗಾವಿ : ಠಾಣೆಗೆ ಬಂದ ಮಹಿಳೆ ಮೇಲೆ ಹಲ್ಲೆ ಮಾಡಿದ ಮಹಿಳಾ PSI.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಖಡಕಲಾಟ ಠಾಣೆಯ ಮಹಿಳಾ ಪಿಎಸ್‌ಐ ವಿರುದ್ಧ ಮಹಿಳೆಯೊಬ್ಬರನ್ನು ಜಾಡಿಸಿ ಒದ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಹಿಳಾ ಪಿಎಸ್‌ಐ ಅನಿತಾ ರಾಠೋಡ ಎಂಬುವವರು ಹೊಟ್ಟೆಗೆ ಜಾಡಿಸಿ ಒದ್ದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇದನ್ನು ಓದಿ : ಮದುವೆಯೇ ಆಗಿಲ್ಲ ಎಂದ ಸಂಸದರು KAS ಅಧಿಕಾರಿ ಹಣೆಗೆ ಕುಂಕುಮ ಇಟ್ಟರು ; ಪೋಟೋ ವೈರಲ್.!

ಪೂನಂ ಮಾಯಣ್ಣವರ ಎಂಬಾಕೆ ಅಣ್ಣ-ತಮ್ಮಂದಿರ ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ಬಂದಿದ್ದರು.

ಈ ವೇಳೆ ಖಡಕಲಾಟ ಪಿಎಸ್‌ಐ ಅನಿತಾ ರಾಠೋಡ ಪೂನಂ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ತೀವ್ರ ಅಸ್ವಸ್ಥಳಾಗಿದ್ದ ಪೂನಂ ಮಾಯಣ್ಣಳನ್ನು ಕುಟುಂಬಸ್ಥರು ಕೂಡಲೇ ನಿಪ್ಪಾಣಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನು ಓದಿ : Special news : ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆಯಂತೆ ಈ ರಕ್ತದ ಗುಂಪು ಹೊಂದಿರುವವರಿಗೆ.!

ಆಸ್ಪತ್ರೆಯಲ್ಲಿ ಪೂನಂ ನರಳಾಡುತ್ತಿದ್ದು, ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಬೆಳಗಾವಿ ಎಸ್ಪಿ ಭೀಮಶಂಕರ್ ಗುಳೇದ್, ಮಹಿಳೆಯ ಮೇಲೆ ಪಿಎಸ್ಐ ಕಪಾಳ ಮೋಕ್ಷ ಮಾಡಿರುವುದು ದೃಢಪಟ್ಟಿದೆ. ಹೊಟ್ಟೆಯ ಭಾಗಕ್ಕೆ ಒದ್ದಿಲ್ಲ. ಇಲಾಖೆಯ ವತಿಯಿಂದ ಮಹಿಳಾ ಪಿಎಸ್ಐ ವಿಚಾರಣೆ ನಡೆಸಲಾಗುತ್ತಿದೆ. ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img