ಜನಸ್ಪಂದನ ನ್ಯೂಸ್, ಬೆಳಗಾವಿ : ರಾಜ್ಯದಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದ್ದರೂ, ಬೆಳಗಾವಿಯಲ್ಲಿ ಈ ಸಂಭ್ರಮದ ನಡುವೆ ಮೊಬೈಲ್ (Mobile) ಹೊಡೆಯಲು ಕಳ್ಳರ ತಂಡ ತನ್ನ ಕೈಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ (ನ.01) ರಾತ್ರಿ ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಸುತ್ತಮುತ್ತ ನಡೆದ ರಾಜ್ಯೋತ್ಸವ ಮೆರವಣಿಗೆಯ ಸಮಯದಲ್ಲಿ ಸುಮಾರು 300ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಕಳವುಗೊಂಡಿರುವ ಘಟನೆ ವರದಿಯಾಗಿದೆ.
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”
ಮೆರವಣಿಗೆಯ ಸಂದರ್ಭದಲ್ಲಿ ಸಾವಿರಾರು ಜನರು ಕನ್ನಡ ಬಾವುಟಗಳು ಮತ್ತು ಘೋಷಣೆಗಳೊಂದಿಗೆ ಭಾಗವಹಿಸುತ್ತಿದ್ದರು. ಈ ಜನಸಮೂಹದ ನಡುವೆ ಅಡಗಿ ಕುಳಿತಿದ್ದ ಕಳ್ಳರ ಗ್ಯಾಂಗ್ ಯುವಕರು ಹಾಗೂ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಈ ಕೃತ್ಯ ಎಸಗಿದೆಯೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಳ್ಳರು ಪಾಕೆಟ್ ಕತ್ತರಿಸುವ ರೀತಿಯಲ್ಲಿ ಮೊಬೈಲ್ (Mobile) ಗಳನ್ನು ಕಳವು ಮಾಡಿ, ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.
Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!
ಘಟನೆ ನಿನ್ನೆ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯೊಳಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೊಬೈಲ್ (Mobile) ಗಳು ಕಾಣೆಯಾದ್ದನ್ನು ಗಮನಿಸಿದ ಅನೇಕರು ಆಪ್ ಮೂಲಕ ದೂರನ್ನು ದಾಖಲಿಸಿ, ನಂತರ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳಿ ಅಧಿಕೃತ ದೂರು ಸಲ್ಲಿಸಿದ್ದಾರೆ.
ಬೆಳಗ್ಗಿನಿಂದಲೇ ಖಡೆಬಜಾರ್, ಮಾರ್ಕೆಟ್, ಹಾಗೂ ಕ್ಯಾಂಪ್ ಪೊಲೀಸ್ ಠಾಣೆಗಳಲ್ಲಿ ಜನರು ಕಳೆದುಕೊಂಡ ಮೊಬೈಲ್‌ಗಳ ಕುರಿತು ದೂರು ನೀಡುತ್ತಿದ್ದಾರೆ.
“ವಿಚಿತ್ರ ಘಟನೆ : Temple ದೊಳಗೆ ವಿವಾದಕ್ಕೆ ಕಾರಣವಾಯ್ತು ಯುವಕನ ವರ್ತನೆ .!”
ಕಳವಾದ ಮೊಬೈಲ್ (Mobile) ಗಳ ಪೈಕಿ ಅನೇಕವು ಐಫೋನ್, ಸ್ಯಾಮ್‌ಸಂಗ್, ವಿವೋ, ಮೋಟೊ ಮುಂತಾದ ದುಬಾರಿ ಕಂಪನಿಗಳವು ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಕೈಗೊಂಡಿದ್ದು, ಕಳ್ಳರ ಗುರುತಿನ ಕಾರ್ಯ ಚುರುಕುಗೊಳಿಸಲಾಗಿದೆ.
ರಾಜ್ಯೋತ್ಸವದ ಸಂಭ್ರಮದಲ್ಲಿ ನಡೆದ ಈ ಕಳುವಿನಂತಹ ಕಹಿ ಘಟನೆ ಜನರಲ್ಲಿ ಅಸಮಾಧಾನ ಮೂಡಿಸಿದ್ದು, ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ. ಇದೇ ವೇಳೆ, ಪೊಲೀಸರು ಶೀಘ್ರದಲ್ಲೇ ಕಳ್ಳರ ಪತ್ತೆಹಚ್ಚಿ ಕಳವಾದ ಮೊಬೈಲ್ (Mobile) ಗಳನ್ನು ಹಿಂತಿರುಗಿಸುವ ಭರವಸೆ ನೀಡಿದ್ದಾರೆ.
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯಾಗುವ ಹುಚ್ಚು ಕೆಲವರನ್ನು ಅಪಾಯಕಾರಿ ಮಟ್ಟದ ಕ್ರಮಗಳತ್ತ ಎಳೆದುಕೊಂಡು ಹೋಗುತ್ತಿದೆ. ಕೆಲವು ಸೆಕೆಂಡ್‌ಗಳ “ವೈರಲ್ ವಿಡಿಯೋ”ಗಾಗಿ ಜೀವವನ್ನೇ ಪಣಕ್ಕಿಡುವ ಘಟನೆಗಳು ಹೆಚ್ಚಾಗುತ್ತಿವೆ.
ಇತ್ತೀಚಿನ ಘಟನೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ಅಪಾಯಕಾರಿ ರೀತಿಯಲ್ಲಿ “ಬೈಕ್ ವ್ಹೀಲಿಂಗ್ (Bike Wheeling)” ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ಬೈಕ್ (Bike) ಸವಾರನೊಬ್ಬ ರಸ್ತೆಯ ಮಧ್ಯೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದಾನೆ. ಆತನ ಹಿಂದೆ ಯುವತಿಯೊಬ್ಬಳು ಕುಳಿತಿದ್ದಾಳೆ. ಕೆಲ ಕ್ಷಣಗಳ ಬಳಿಕ ಸವಾರನು ಸ್ಟಂಟ್ ಮಾಡಲು ಯತ್ನಿಸುತ್ತಾನೆ.
ಬೈಕ್‌ನ ಮುಂಭಾಗದ ಚಕ್ರವನ್ನು ನೆಲದಿಂದ ಎತ್ತಿ, ಕೇವಲ ಹಿಂಬದಿ ಚಕ್ರದ ಮೇಲೆ ಚಲಾಯಿಸಲು ಆರಂಭಿಸುತ್ತಾನೆ. ಯುವತಿಯು ಸಹ ಖುಷಿಯಿಂದ ಆತನ ಕೃತ್ಯಕ್ಕೆ ಸಹಕರಿಸುತ್ತಾ ಕೈಯನ್ನು ಮೇಲಕ್ಕೆತ್ತುತ್ತಾಳೆ, ಆದರೆ ಕ್ಷಣಾರ್ಧದಲ್ಲೇ ಪರಿಸ್ಥಿತಿ ಬದಲಾಗುತ್ತದೆ.
ಸಮತೋಲನ ಕಳೆದುಕೊಂಡ ಬೈಕ್ (Bike) ಇಬ್ಬರನ್ನೂ ಬಿಸಾಡಿ ಬಿಡುತ್ತದೆ. ಯುವಕ ಮತ್ತು ಯುವತಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರ ಹಿಂದೆ ಬರುತ್ತಿದ್ದ ಮತ್ತೊಂದು ಬೈಕ್‌ಗೂ (Bike) ಡಿಕ್ಕಿ ಸಂಭವಿಸಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಗೊಂಡಿದ್ದಾರೆ.
ಈ ವಿಡಿಯೋ ಈಗ ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿಯುತ್ತಿದೆ. “ಈ ರೀತಿಯ ಮೂರ್ಖತನಕ್ಕೆ ಯಾವುದೇ ಪುರಾವೆ ಬೇಕಿಲ್ಲ” ಎಂಬ ಶೀರ್ಷಿಕೆಯಲ್ಲಿ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ ನೆಟ್ಟಿಗರು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ,
- “ಜನರ ಜೀವವನ್ನು ಪಣಕ್ಕಿಟ್ಟು ಕೆಲವು ಕ್ಷಣಗಳ ಖ್ಯಾತಿಗಾಗಿ ಇಂತಹ ಸ್ಟಂಟ್ ಮಾಡುವುದು ನಿಷೇಧಿಸಬೇಕು”,
- “ಪೊಲೀಸರು ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಮೆಂಟ್‌ಗಳ ಸುರಿಮಳೆ ಹರಿದಿದೆ.
ಈ ಘಟನೆ ಮತ್ತೊಮ್ಮೆ ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಮಾಧ್ಯಮದ ‘ವೈರಲ್ ಸಂಸ್ಕೃತಿ’ ಕುರಿತಂತೆ ಗಂಭೀರ ಚಿಂತನೆಗೆ ಕಾರಣವಾಗಿದೆ. ಖ್ಯಾತಿಗಾಗಿ ಜೀವದ ಬೆಲೆಯಾಟ ಆಡುತ್ತಿರುವ ಯುವ ಜನತೆ ಇಂತಹ ಘಟನೆಗಳಿಂದ ಪಾಠ ಕಲಿಯಬೇಕೆಂಬ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗಿದೆ.
ಬೈಕ್ (Bike) ವ್ಹೀಲಿಂಗ್ ವಿಡಿಯೋ :
https://twitter.com/i/status/1984268448172736616







