Thursday, September 19, 2024
spot_img
spot_img
spot_img
spot_img
spot_img
spot_img
spot_img

ತರಕಾರಿಯಂತೆ ಜೀವಂತ ಹಾವನ್ನೇ ಕಚ್ಚಿ ಕಚ್ಚಿ ತಿನ್ನುವ ಬೆಡಗಿ ; ವಿಡಿಯೊ ನೋಡುವ ಮುನ್ನ ಯೋಚಿಸಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಿರಳೆ ತಿನ್ನುವುದು, ಕಪ್ಪೆ ತಿನ್ನುವುದು ಮತ್ತು ಹಲ್ಲಿ ತಿನ್ನುವುದು ಗೊತ್ತು. ಆದರೆ ಬಹಳಷ್ಟು ಜನರಿಗೆ ಜೀವಂತ ಹಾವನ್ನು ತರಕಾರಿಯಂತೆ ತಿನ್ನುತ್ತಾರೆಂಬ ವಿಷಯ ಗೊತ್ತಿಲ್ಲದೆ ಇರಬಹುದು. ಹಾವು ಎಂದರೆ ಸಾಕು ಮಾರುದ್ಧ ಹಾರುತ್ತೇವೆ, ಅಂತದರಲ್ಲಿ ಜೀವಂತ ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತನ್ನುವುದು ಎಂದರೆ.?

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ದಕ್ಷಿಣ ಕೊರಿಯಾದ ಯುವತಿಯೊಬ್ಬಳು ಜೀವಂತ ಹಾವನ್ನು ತಿನ್ನುತ್ತಿರುವ ವಿಡಿಯೋವೊಂದು ನೆಟ್ಟಿಗರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟೆ ಅಲ್ಲಾ ನೋಡುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕೆಲವರಲ್ಲಿ ಅಸಹ್ಯ ಹುಟ್ಟಿಸುತ್ತಿದೆ.

ಇದನ್ನು ಓದಿ : PGCIL : ವಿದ್ಯುತ್ ಇಲಾಖೆಯಲ್ಲಿ 400+ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಪ್ಲೇಟ್ ತುಂಬಾ ಜೀವಂತ ಹಾವುಗಳನ್ನು ಇಟ್ಟುಕೊಂಡು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತಿನ್ನುತ್ತಿರುವ ದೃಶ್ಯವು ಮೈ ಜುಮ್ಮ್ ಎನ್ನುವಂತೆ ಮಾಡುತ್ತದೆ.

ವಿಡಿಯೋದಲ್ಲಿ ದಕ್ಷಿಣ ಕೊರಿಯಾದ ಯುವತಿ ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡಿದ್ದಾಳೆ. ನಂತರ ಅದರಲ್ಲಿ ಒಂದು ಹಾವನ್ನು ತನ್ನ ಎರಡು ಕೈಗಳಿಂದ ಹಿಡಿದು ತಿನ್ನಲು ಶುರುಮಾಡಿದ್ದಾಳೆ. ಒಮ್ಮೆ ಹಾವಿನ ತಲೆ, ಒಮ್ಮೆ ಮಧ್ಯಭಾಗ, ಒಮ್ಮೆ ಬಾಲದ ಹಸಿ ಮಾಂಸವನ್ನು ಜಗಿದು ಸವಿಯುವ ಅವಳ ಮುಖವನ್ನು ನೋಡಿದ್ದರೆ ವೀಕ್ಷಕರಿಗೆ ದಿಗ್ಭ್ರಮೆಯಾಗುತ್ತದೆ.

ಇದನ್ನು ಓದಿ : ಹುಲಿ ಜೊತೆ ವಾಕಿಂಗ್‌ ಮಾಡುವುದನ್ನು ಎಲ್ಲಿಯಾದರೂ ನೋಡಿದ್ದೀರಾ.? ಇಲ್ವಾ ಹಾಗಾದ್ರೆ ಈ video ನೋಡಿ.!

ಈ ವಿಡಿಯೊ @asmrmukbangworld ಎಂಬ ಪ್ಲಾಟ್ ಫಾರ್ಮ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋಗೆ 15 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದ್ದು, ಒಂದು ದಶಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಈ ವಿಡಿಯೋದ ನೆಟ್ಟಿಗರು ಮಾತ್ರ ಶಾಕ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರನೊಬ್ಬ, ‘ನಾವು ಭಾರತದಲ್ಲಿ ಜನಿಸಿರುವುದು ಒಳ್ಳೆಯದು ‘ ಎಂದು ಸಮಾಧಾನ ಪಟ್ಟುಕೊಂಡಿದ್ದಾನೆ. ಮತ್ತೊಬ್ಬನು,’ ಚೀನೀ ಜನರು ತೃಪ್ತರಾಗಲು ಇವುಗಳನ್ನು ತಿನ್ನುತ್ತಾರೆ. ಆದರೆ ಅವರ ಈ ಹೊಸ ಆಹಾರ ಪದ್ಧತಿಯಿಂದ ಹೊಸ ವೈರಸ್‌ಗಳು ಜಗತ್ತಿಗೆ ಬರುತ್ತಿವೆ’ ಎಂದು ಟೀಕಿಸುವ ಮೂಲಕ ಕಾಮೆಂಟ್ ಮಾಡಿದ್ದಾನೆ.

ವಿಡಿಯೋ ನೋಡಿ :

 

View this post on Instagram

 

A post shared by asmrmukbang (@asmrmukbangworld)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img