Tuesday, September 17, 2024
spot_img
spot_img
spot_img
spot_img
spot_img
spot_img
spot_img

ಕೇಂದ್ರ ಸರ್ಕಾರದ ವಿವಿಧ ಇಲಾಖೆಯ 17,727 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಸಿಬ್ಬಂದಿ ನೇಮಕಾತಿ ಆಯೋಗ (Staff Recruitment Commission) ದಿಂದ ಖಾಲಿ ಇರುವ ವಿವಿಧ ಇಲಾಖೆಯ 17,727 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಎನ್‌ಎಂಡಿಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ : ನೇರ ಸಂದರ್ಶನದ ಮೂಲಕ ನೇಮಕಾತಿ.!

ಸಂಪೂರ್ಣ ವೇಳಾಪಟ್ಟಿ :

ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಗೆ ಅರ್ಜಿ ಸ್ವೀಕಾರ ಆರಂಭ ದಿನಾಂಕ : 24-06-2024
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಗೆ ಅರ್ಜಿ ಹಾಕಲು ಕೊನೆ ದಿನಾಂಕ : 24-07-2024 ರ ರಾತ್ರಿ 11 ಗಂಟೆವರೆಗೆ.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 25-07-2024 ರ ರಾತ್ರಿ 11 ಗಂಟೆವರೆಗೆ.
ಅಪ್ಲಿಕೇಶನ್‌ ಮಾಹಿತಿಗಳನ್ನು ತಿದ್ದಲು ವಿಂಡೊ ಓಪನ್‌ ಆಗುವ ದಿನಾಂಕ : 2024ರ ಆಗಸ್ಟ್‌ 10 ರಿಂದ 11 ರ ರಾತ್ರಿ 11 ಗಂಟೆವರೆಗೆ.
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ -1 ಸಿಬಿಟಿ ಪರೀಕ್ಷೆ ಸಂಭಾವ್ಯ ದಿನಾಂಕ : 2024 ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್.
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ -2 ಸಿಬಿಟಿ ಪರೀಕ್ಷೆ ದಿನಾಂಕ : 2024 ರ ಡಿಸೆಂಬರ್.

 

ಇದನ್ನು ಓದಿ : ಇಂಡಿಯನ್ ಏವಿಯೇಷನ್ ಸರ್ವೀಸಸ್ 3,500 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಹುದ್ದೆಗಳು :

ಇನ್‌ಕಮ್‌ಟ್ಯಾಕ್ಸ್‌ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಆಡಿಟರ್, ಅಸಿಸ್ಟಂಟ್ ಆಡಿಟ್ ಆಫೀಸರ್, ಇನ್ಸ್‌ಪೆಕ್ಟರ್, ಜೆಎಸ್‌ಒ ಮತ್ತು ಸ್ಪೆಷಲಿಸ್ಟ್‌ ಆಫೀಸರ್ ಸೇರಿದಂತೆ 36 ಪದನಾಮಗಳ ಹುದ್ದೆಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳಲ್ಲಿ ಭರ್ತಿ ಮಾಡಲಾಗುತ್ತದೆ.

ವಯೋಮಿತಿ : ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ತೆಗೆದುಕೊಳ್ಳಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಹುದ್ದೆಗಳ ಆಧಾರದಲ್ಲಿ 27 ರಿಂದ 32 ವರ್ಷದ ವರೆಗೆ ನಿಗದಿಪಡಿಸಲಾಗಿರುತ್ತದೆ.

ವಯೋಮಿತಿ ಸಡಿಲಿಕೆ : ಅರ್ಜಿ ಹಾಕಲು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂ ಅಭ್ಯರ್ಥಿಗಳಿಗೆ 10 ವರ್ಷದಂತೆ ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯಿಸುತ್ತದೆ.

ವಿದ್ಯಾರ್ಹತೆಗಳು :
  • ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ/ಸಂಸ್ಥೆಗಳಲ್ಲಿ ಯಾವುದೇ ಪದವಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
  • ಆಡಿಟ್ ಆಫೀಸರ್ ಹುದ್ದೆಗೆ ಸಿಎ/ಎಂಬಿಎ/ಕಾಸ್ಟ್‌ ಅಂಡ್‌ ಮ್ಯಾನೇಜ್ಮೆಂಟ್ ಅಕೌಂಟಂಟ್‌/ಮಾಸ್ಟರ್ ಇನ್ ಕಾಮರ್ಸ್‌/ಮಾಸ್ಟರ್ ಇನ್ ಬ್ಯುಸಿನೆಸ್ ಸ್ಟಡೀಸ್‌ ಪಾಸ್‌ ಆದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

ವೇತನ : ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಮೂಲಕ ಸರ್ಕಾರಿ ಹುದ್ದೆ ಪಡೆಯುವ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಪೇ ಲೆವೆಲ್ 4 ಪ್ರಕಾರ ರೂ.25,500-81100 ದಿಂದ ಪೇ ಲೆವೆಲ್ 7 ಪ್ರಕಾರ ರೂ.44,900-1,42,400 ವರೆಗೆ ಇರಲಿದೆ.

ಇದನ್ನು ಓದಿ : RRB Recruitment : ರೈಲ್ವೆ ಇಲಾಖೆಯಲ್ಲಿ 18,799 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಅರ್ಜಿ ಸಲ್ಲಿಸುವ ವಿಧಾನ : ಸಿಬ್ಬಂದಿ ನೇಮಕಾತಿ ಆಯೋಗದ ವೆಬ್‌ಸೈಟ್‌ https://ssc.gov.in/ ಗೆ ಭೇಟಿ ನೀಡಿ.

  • ಓಪನ್ ಆದ ಪೇಜ್‌ನಲ್ಲಿ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ‘Combined Graduate Level Examination,2024’ ಎಂದಿರುವ ಮುಂದೆ ‘Apply’ ಎಂದಿರುತ್ತದೆ. ಈ ಬಟನ್‌ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ‘New User? Register Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಈಗಾಗಲೇ ರಿಜಿಸ್ಟ್ರೇಷನ್‌ ಪಡೆದವರು ನೇರವಾಗಿ ಲಾಗಿನ್ ಆಗುವ ಮೂಲಕ ಅರ್ಜಿ ಹಾಕಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ / ಚಲನ್‌ ಮೂಲಕ ಪಾವತಿಸಬಹುದು.
  • ಅಭ್ಯರ್ಥಿಗಳು ಅರ್ಜಿ ಪೂರ್ಣಗೊಂಡ ನಂತರ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಪರೀಕ್ಷೆ ವಿಧಾನ : ಕಂಬೈನ್ಡ್‌ ಗ್ರಾಜುಯೇಟ್ ಲೆವೆಲ್‌ ಪರೀಕ್ಷೆಯನ್ನು 4 ಹಂತಗಳಲ್ಲಿ ನಡೆಸಲಾಗುತ್ತದೆ. ಟೈಯರ್-1, ಟೈಯರ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಟೈಯರ್ -3 ಮತ್ತು ಟೈಯರ್-4 ವಿವರಣಾತ್ಮಕ ಪೇಪರ್‌ಗಳಾಗಿವೆ. ಕಂಪ್ಯೂಟರ್ ಜ್ಞಾನ, ಸ್ಕಿಲ್ ಟೆಸ್ಟ್‌ ನಡೆಸಿ ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ಇದನ್ನು ಓದಿ : ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಗ್ರೂಪ್ A & B ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ.!

ಪ್ರಮುಖ ಲಿಂಕ್‌ಗಳು : 

ಉದ್ಯೋಗ ವಿವರ :

ಹುದ್ದೆಯ ಹೆಸರು ಕಂಬೈನ್ಡ್‌ ಗ್ರಾಜುಯೇಟ್ ಲೆವೆಲ್‌ ಪರೀಕ್ಷೆ
ವಿವರ ಸಿಬ್ಬಂದಿ ನೇಮಕಾತಿ ಆಯೋಗದ ನೋಟಿಫಿಕೇಶನ್
ಪ್ರಕಟಣೆ ದಿನಾಂಕ 2024-06-24
ಕೊನೆ ದಿನಾಂಕ 2024-07-24
ಉದ್ಯೋಗ ವಿಧ ಪೂರ್ಣಾವಧಿ
ಉದ್ಯೋಗ ಕ್ಷೇತ್ರ ಕೇಂದ್ರ ಸರ್ಕಾರಿ ಉದ್ಯೋಗ
ವೇತನ ವಿವರ INR 25500 to 141996 /Month

 

ಉದ್ಯೋಗ ಸ್ಥಳ :

ವಿಳಾಸ ಕೇಂದ್ರ ಸರ್ಕಾರದ ಇಲಾಖೆ / ಕಚೇರಿಗಳು
ಸ್ಥಳ ಎಲ್ಲ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಇಲಾಖೆ / ಕಚೇರಿಗಳಲ್ಲಿ ಉದ್ಯೋಗ.
ಪ್ರದೇಶ ನವದೆಹಲಿ
ಅಂಚೆ ಸಂಖ್ಯೆ 110003
ದೇಶ IND

 

ಸಂಪೂರ್ಣ ವೇಳಾಪಟ್ಟಿ :

ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಗೆ ಅರ್ಜಿ ಸ್ವೀಕಾರ ಆರಂಭ ದಿನಾಂಕ : 24-06-2024.
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಗೆ ಅರ್ಜಿ ಹಾಕಲು ಕೊನೆ ದಿನಾಂಕ : 24-07-2024 ರ ರಾತ್ರಿ 11 ಗಂಟೆವರೆಗೆ.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 25-07-2024 ರ ರಾತ್ರಿ 11 ಗಂಟೆವರೆಗೆ.
ಅಪ್ಲಿಕೇಶನ್‌ ಮಾಹಿತಿಗಳನ್ನು ತಿದ್ದಲು ವಿಂಡೊ ಓಪನ್‌ ಆಗುವ ದಿನಾಂಕ : 2024ರ ಆಗಸ್ಟ್‌ 10 ರಿಂದ 11 ರ ರಾತ್ರಿ 11 ಗಂಟೆವರೆಗೆ.
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ -1 ಸಿಬಿಟಿ ಪರೀಕ್ಷೆ ಸಂಭಾವ್ಯ ದಿನಾಂಕ : 2024 ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್.
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ -2 ಸಿಬಿಟಿ ಪರೀಕ್ಷೆ ದಿನಾಂಕ : 2024 ರ ಡಿಸೆಂಬರ್.

 

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img