ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ (Rakesh Rathod) ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಪೊಲೀಸ್ (Police) ಭದ್ರತೆಯಲ್ಲಿ ಉತ್ತರ ಪ್ರದೇಶದ ಸೀತಾಪುರ ಲೋಕಸಭಾ ಸಂಸದ (MP) ರಾಥೋಡ್ ಶರಣಾಗತರಾದ ನಂತರ ಬಂಧಿಸಿ ನ್ಯಾಯಾಲಯ (Court) ಕ್ಕೆ ಕರೆದೊಯ್ಯಲಾಯಿತು.
ಇದನ್ನು ಓದಿ : ಪ್ರೀತಿಯಿಂದ ರೊಟ್ಟಿ ಕೊಡುತ್ತಿದ್ದ ಅಜ್ಜಿ ತೀರಿಕೊಂಡಾಗ ಹಸು ಮಾಡಿದ್ದೇನು ಗೊತ್ತೇ ; ಈ Vedio ನೋಡಿ.!
ಉತ್ತರ ಪ್ರದೇಶ ಕಾಂಗ್ರೆಸ್ (UO Congress) ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಥೋಡ್ ವಿರುದ್ಧ ಜನವರಿ 17 ರಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಸಂಸರು ತನ್ನನ್ನು ಲೈಂಗಿಕ (sexual) ವಾಗಿ ಶೋಷಿಸುತ್ತಿದ್ದಾನೆ ಮತ್ತು ಮದುವೆಯಾಗಿ ರಾಜಕೀಯ ವೃತ್ತಿಜೀವನವನ್ನು ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ CCB ಪೊಲೀಸರ ದಾಳಿ : ಮಹಿಳೆಯರ ರಕ್ಷಣೆ ; ಇಬ್ಬರ ಬಂಧನ.!
ಮಹಿಳೆ ಕರೆ ವಿವರಗಳು ಮತ್ತು ಕರೆ ರೆಕಾರ್ಡಿಂಗ್ (call history and call recording) ಗಳನ್ನು ಸಹ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ.
ಬಂಧನಕ್ಕೂ ಮುನ್ನ (ದಿ.29) ಬುಧವಾರ ಅಲಹಾಬಾದ್ ಹೈಕೋರ್ಟ್ (High Court) ನ ಲಕ್ನೋ ಪೀಠವು ಸಂಸದರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು, ಅಲ್ಲದೆ ಶರಣಾಗುವಂತೆ ಕೇಳಿಕೊಂಡಿತು.
ಇದನ್ನು ಓದಿ : ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ CCB ಪೊಲೀಸರ ದಾಳಿ : ಮಹಿಳೆಯರ ರಕ್ಷಣೆ ; ಇಬ್ಬರ ಬಂಧನ.!
ಸಂಸದ ರಾಥೋಡ್ ಕಾಂಗ್ರೆಸ್ ಸೇರುವ ಮೊದಲು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿಯಾಗಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಉತ್ತರ ಪ್ರದೇಶದ ಮಾಜಿ CM ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (BSP) ದೊಂದಿಗೂ ಸಂಬಂಧ ಹೊಂದಿದ್ದರು.
ಇದೀಗ ಸಂಸದರು ಪೊಲೀಸರಿಗೆ ಶರಣಾಗದೇ ತಮ್ಮ ಮನೆಯಲ್ಲಿಯೇ ಪತ್ರಿಕಾಗೋಷ್ಠಿಯನ್ನು ನಡೆಸಲು ಮುಂದಾದಾಗ ಪೊಲೀಸರು ದಾಳಿ (Police Attach) ನಡೆಸಿ ಪತ್ರಿಕಾಗೋಷ್ಠಿಯ ನಡುವೇಯೇ ರಾಥೋಡ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.