Wednesday, May 22, 2024
spot_img
spot_img
spot_img
spot_img
spot_img
spot_img

SSLC ಪಾಸಾದ ವಿದ್ಯಾರ್ಥಿನಿ ಕೊಂದು ರುಂಡದೊಂದಿಗೆ ಪರಾರಿಯಾದ ಆರೋಪಿ.!

spot_img

ಜನಸ್ಪಂದನ ನ್ಯೂಸ್, ಕೊಡಗು : ಕೊಡಗಿನ ಸೂರ್ಲಬ್ಬಿಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು 30 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಹತ್ಯೆಗೀಡಾದ ಬಾಲಕಿ ಸೂರ್ಲಬ್ಬಿ ಪ್ರೌಢಶಾಲೆಯಲ್ಲಿ (highschool) ಓದುತ್ತಿರುವ ವಿದ್ಯಾರ್ಥಿನಿ ಯು.ಎಸ್.ಮೀನಾ ಎಂದು ತಿಳಿದು ಬಂದಿದೆ.

ಇದನ್ನು ಓದಿ : Double murder : ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದ ಯುವಕ ಹಾಗೂ ಆತನ ಸಹೋದರನ ಬರ್ಬರ ಹತ್ಯೆಗೈದ ತಂದೆ.!

ನಿನ್ನೆ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿ ಪಾಸ್ ಆಗಿದ್ದ ಆಕೆ ಖುಷಿಯಲ್ಲಿದ್ದಳು. ಆಕೆಯ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ (result) ಬಂದಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಘೋರ ದುರಂತ ನಡೆದುಹೋಯಿತು.

ಅದೇ ಗ್ರಾಮದ ನಿವಾಸಿ ಓಂಕಾರಪ್ಪ ಎಂಬಾತ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆರೋಪಿ ಬಾಲಕಿಯ ಮನೆಗೆ ಬಂದು ಆಕೆಯ ಪೋಷಕರ ಮುಂದೆಯೇ ಮನೆಯಿಂದ ಹೊರಗೆಳೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ : ಕೋಳಿಯೊಂದಿಗೆ ಯುವತಿಯ ಯುದ್ಧ ; ಸೋತವರ್ಯಾರು, ಗೆದ್ದವರ್ಯಾರು? ; Video ನೋಡಿ.!

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೀನಾಳ ವಿವಾಹವನ್ನು ಆರೋಪಿಯೊಂದಿಗೆ ಈ ಮೊದಲೇ ನಿಗದಿಪಡಿಸಲಾಗಿತ್ತು. ನಂತರ ಅದನ್ನು ಪೊಲೀಸರ ಮಧ್ಯಸ್ಥಿಕೆಯಿಂದ ನಿಲ್ಲಿಸಲಾಯಿತು. ಇದರಿಂದ ಆಕ್ರೋಶಗೊಂಡಿದ್ದ ಓಂಕಾರಪ್ಪ ಈ ನೀಚ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

spot_img
spot_img
spot_img
- Advertisment -spot_img