Wednesday, May 22, 2024
spot_img
spot_img
spot_img
spot_img
spot_img
spot_img

Video : ಟೋಲ್ ಪ್ಲಾಜಾದಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಮಹಿಳೆ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ :‌ ಮಹಿಳೆಯೊಬ್ಬಳು ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಹಿನ್ನಲೆಯಲ್ಲಿ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ವಾಹನವನ್ನು ನಿಲ್ಲಿಸಿದ್ದಾರೆ. ಪರಿಣಾಮ ಸಿಟ್ಟಿಗೆದ್ದ ಮಹಿಳೆ ಅವಾಚ್ಯ ಶಬ್ದಗಳಿಂದ ಬೈದು ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆ ಪಾಕಿಸ್ತಾನದ ಇಸ್ಲಾಮಾಬಾದ್​​ನಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವ ಪೊಲೀಸ್​​ ಅಧಿಕಾರಿಯೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸದ್ಯ ಪೊಲೀಸರು ಫರಾಹ್ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ಏಪ್ರಿಲ್ 24 ರಂದು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

News : ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಕಾಮಾಂಧರು.!

ವಿಡಿಯೋದಲ್ಲಿ ಕಾರಿನಲ್ಲಿ ಮಹಿಳೆಯೊಬ್ಬರು ಟ್ರಾಫಿಕ್ ಪೋಲೀಸ್ ಜೊತೆ ವಾಗ್ವಾದದಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಹಾಗೆಯೇ ಟೋಲ್ ಪ್ಲಾಜಾದಿಂದ ಹೊರಹೋಗುವುದನ್ನು ತಡೆಯಲು ಆಕೆಯ ವಾಹನದ ಮುಂದೆ ಇನ್ನೊಬ್ಬ ಪೋಲೀಸ್ ನಿಂತಿದ್ದಾನೆ.

ವಾಗ್ವಾದ ಭಯಾನಕ ತಿರುವು ಪಡೆಯುತ್ತಿದಂತೆಯೇ ಮಹಿಳೆ ಇದ್ದಕ್ಕಿದ್ದಂತೆ ತನ್ನ ಕಾರಿನ ಮುಂದೆ ಪೊಲೀಸರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಘಟನೆ ಕಳೆದ ಜನವರಿ 1, 2024 ರಂದು ಸಂಭವಿಸಿದೆ ಎಂದು ಇಸ್ಲಾಮಾಬಾದ್ ಟ್ರಾಫಿಕ್ ಪೊಲೀಸರು ದೃಢಪಡಿಸಿದ್ದಾರೆ ಮತ್ತು ಆರೋಪಿ ಚಾಲಕಿಯ ಮೇಲೆ ಈಗಾಗಲೇ ಕೇಸು ದಾಖಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ವರನ ಮೇಲೆ ಆ್ಯಸಿಡ್ ಎರಚಿದ ಮಾಜಿ ಪ್ರೇಯಸಿ ; ವಿಡಿಯೋ Viral.!

ಜನವರಿ 2 ರಂದು ನಸೀರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಬಂಧನವನ್ನು ತಪ್ಪಿಸಲು ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ರಾವಲ್ಪಿಂಡಿ ಪೊಲೀಸರು ತಿಳಿಸಿದ್ದರು.

“ಎಕ್ಸ್” ಬಳಕೆದಾರ ರುಬಾಬ್ ಹಯಾತ್ ಅವರು ಉರ್ದು ಭಾಷೆಯಲ್ಲಿ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ, “ಪ್ರಭಾವಶಾಲಿ ಮಹಿಳೆಯು ಟ್ರಾಫಿಕ್ ವಾರ್ಡನ್ ಅನ್ನು ನಿಲ್ಲಿಸಿದ್ದಕ್ಕಾಗಿ ಮತ್ತು ಮಿತಿಮೀರಿದ ವೇಗಕ್ಕಾಗಿ ಚಲನ್ ನೀಡಿದ್ದಕ್ಕಾಗಿ ದಬ್ಬಾಳಿಕೆ ಮಾಡಿದರು” ಎಂದು ಬರೆದುಕೊಂಡಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

راولپنڈی پولیس کی کاروائی، موٹروے پولیس کے اہلکار کو گاڑی سے کچلنے والی خاتون گرفتار،

spot_img
spot_img
spot_img
- Advertisment -spot_img