ಜನಸ್ಪಂದನ ನ್ಯೂಸ್, ಡೆಸ್ಕ್ : ರಾಮಲೀಲಾ ಪ್ರದರ್ಶನದಲ್ಲಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ವೇದಿಕೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Health : ಬಿದ್ದ ಜಾಗದಲ್ಲಿ ಮತ್ತೆ ಹುಟ್ಟುತ್ತೆ ಹೊಸ ಹಲ್ಲು ; ಅದ್ಭುತ ಔಷಧ ಕಂಡುಹಿಡಿದ ಸಂಶೋಧಕರು.!
ದೆಹಲಿಯ ಶಹದಾರದ ವಿಶ್ವಕರ್ಮ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮಲೀಲಾದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುವಾಗ ವೇದಿಕೆಯಲ್ಲಿ ಹೃದಯಾಘಾತದಿಂದ 45 ವರ್ಷದ ಸುಶೀಲ್ ಕೌಶಿಕ್ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿ ವೈದರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮೃತ ಸುಶೀಲ್ ಕೌಶಿಕ್ ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ 1.72 ಲಕ್ಷ ಫಲಾನುಭವಿಗಳ ಅರ್ಜಿ ವಜಾ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ?
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವೇದಿಕೆಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದ ಕೌಶಿಕ್ಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರು ವೇದಿಕೆಯಿಂದ ತೆರೆ ಮರೆಗೆ ತೆರಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ತಕ್ಷಣ ವೇದಿಕೆಯಲ್ಲಿರುವವರು ಗಾಬರಿಗೊಂಡು ಹಿಂದಕ್ಕೆ ಹೋಗಿ ನೋಡಿದಾಗ ಕೌಶಿಕ್ ಕುಸಿದು ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು.
A 45-year-old man suffered a massive heart attack on stage while performing the role of Lord Ram at #Ramleela in #Delhi after which he was taken to a hospital where doctors declared him dead. The deceased Sushil Kaushik worked as a property dealer.@NewIndianXpress pic.twitter.com/VRMyWNhF1H
— Ujwal Jalali (@ujwaljalali) October 6, 2024