ಜನಸ್ಪಂದನ ನ್ಯೂಸ್, ಡೆಸ್ಕ್ : ಅಂಚೆ ಕಚೇರಿಯಲ್ಲಿ ಬ್ಯಾಂಕ್‌ಗಳಿಗಿಂತಲೂ ಅತಿ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲವು ಸಹಕಾರಿ ಸಂಸ್ಥೆಗಳು ಬಡ್ಡಿಯನ್ನು ಹೆಚ್ಚಿಗೆ ನೀಡಿದರೂ ಅದರಲ್ಲಿ ಹೂಡಿಕೆ ಮಾಡುವುದು ಅಷ್ಟೇ ತೊಂದರೆ ಇದೆ. ಮೋಸ, ವಂಚನೆಗಳ ಹೆಚ್ಚಾಗುತ್ತವೆ.
ಆದ್ದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ.
ಇದನ್ನು ಓದಿ : Health : ಬಿದ್ದ ಜಾಗದಲ್ಲಿ ಮತ್ತೆ ಹುಟ್ಟುತ್ತೆ ಹೊಸ ಹಲ್ಲು ; ಅದ್ಭುತ ಔಷಧ ಕಂಡುಹಿಡಿದ ಸಂಶೋಧಕರು.!
ಅಂಚೆ ಕಚೇರಿಯಲ್ಲಿ ನೀವು ಒಂದು ವರ್ಷದಿಂದ ಐದು ವರ್ಷಗಳವರೆಗೆ ಎಫ್‌ಡಿ ಇಡಬಹುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಇರುತ್ತದೆ.
ನೀವು ಒಂದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳವರೆಗೆ ಎಫ್‌ಡಿ ಇಟ್ಟರೆ, ನಿಮಗೆ ಒಂದು ಲಕ್ಷದ ಜೊತೆಗೆ ಹೆಚ್ಚುವರಿಯಾಗಿ 44,995 ರೂಪಾಯಿಗಳು ಸಿಗುತ್ತವೆ. ಒಂದು ವೇಳೆ ನೀವು ಐದು ಲಕ್ಷ ರೂಪಾಯಿ ಐದು ವರ್ಷಕ್ಕೆ ಇಟ್ಟಿದ್ದೇ ಆದಲ್ಲಿ ನಿಮಗೆ 2 ಲಕ್ಷದ 26 ಸಾವಿರದ 647 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ನಿಮ್ಮ ಕೈಗೆ ಐದು ವರ್ಷಕ್ಕೆ ₹7,26,647 ಸಿಗುತ್ತದೆ.
* ಮೂರು ವರ್ಷದ ಅವಧಿಗೆ ನೀವು ಒಂದು ಲಕ್ಷ ರೂಪಾಯಿ ಎಫ್‌ಡಿ ಇಟ್ಟರೆ ನಿಮಗೆ ₹ 1,23,661 ಹಾಗೂ ಐದು ವರ್ಷಕ್ಕೆ ₹ 1,45,329 ಸಿಗುತ್ತದೆ.
ಇದನ್ನು ಓದಿ : ಹಳೆ ಸ್ಮಾರ್ಟ್ ಪೋನ್ ನಿಂದ ಫ್ರೀಯಾಗಿ CCTV ಕ್ಯಾಮೆರಾ ಆಗಿ ಹೀಗೆ ಬದಲಾಯಿಸಿ.!
* ಎರಡು ಲಕ್ಷ ರೂಪಾಯಿಗಳನ್ನು ಇಟ್ಟರೆ ಮೂರು ವರ್ಷಕ್ಕೆ ₹ 2,47,322 ಮತ್ತು ಐದು ವರ್ಷಕ್ಕೆ ₹ 2,90,659 ಸಿಗುತ್ತದೆ.
* ಐದು ಲಕ್ಷ ರೂಪಾಯಿ ಇಟ್ಟರೆ, ಮೂರು ವರ್ಷಕ್ಕೆ ₹ 6,18,304 ಮತ್ತು ಐದು ವರ್ಷಕ್ಕೆ ₹ 7,26,647 ಸಿಗುತ್ತದೆ.
* 10 ಲಕ್ಷ ರೂಪಾಯಿ ಠೇವಣಿ ಇಟ್ಟರೆ ನಿಮಗೆ ಐದು ವರ್ಷಕ್ಕೆ 14,53,294 ರೂಪಾಯಿ ಸಿಗುತ್ತದೆ.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ 1.72 ಲಕ್ಷ ಫಲಾನುಭವಿಗಳ ಅರ್ಜಿ ವಜಾ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ?
1 ವರ್ಷಕ್ಕೆ ನಿಮಗೆ ಶೇಕಡಾ 6.90, ಎರಡು ವರ್ಷಕ್ಕೆ ಶೇಕಡಾ 7, ಮೂರು ವರ್ಷಕ್ಕೆ 7.10% ಹಾಗೂ ಐದು ವರ್ಷಕ್ಕೆ 7.50% ಬಡ್ಡಿ ಸಿಗುತ್ತದೆ. ಇದನ್ನು ಗಮನಿಸಿದರೆ, ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ ನಿಮಗೆ ಎಲ್ಲಕ್ಕಿಂತಲೂ ಹೆಚ್ಚಿನ ಬಡ್ಡಿದರ ಅಂದರೆ 7.5% ಬಡ್ಡಿ ಸಿಗುತ್ತದೆ. ಇದು ಎಲ್ಲಾ ಬ್ಯಾಂಕ್‌ಗಳಿಗಿಂತಲೂ ಅಧಿಕ ದರ ಬಡ್ಡಿಯಾಗಿದೆ.