Tuesday, October 22, 2024
spot_img
spot_img
spot_img
spot_img
spot_img
spot_img
spot_img

Missing : ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್​ಗಳು ನಾಪತ್ತೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿರುವ ಅಕಾಡೆಮಿಯಿಂದ ಬಿಎಸ್​ಎಫ್​ನ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳು ನಾಪತ್ತೆಯಾಗಿದ್ದಾರೆ.

ಕಾಣೆಯಾದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಆಕಾಂಕ್ಷಾ ನಿಖರ್ ಮತ್ತು ಶಹಾನಾ ಖಾತೂನ್ ಎಂದು ಹೇಳಲಾಗುತ್ತಿದ್ದು, ಅವರು ಜೂನ್ 6 ರಂದು ನಾಪತ್ತೆಯಾಗಿದ್ದಾರೆ. ಆದರೆ ಒಂದು ತಿಂಗಳಾದರೂ ಅವರ ಪತ್ತೆ ಮಾತ್ರ ಆಗಿಲ್ಲ.

ಇದನ್ನು ಓದಿ : ಕಾರ್ಮಿಕನಿಗೆ ಕಚ್ಚಿದ ಹಾವು : ಮರಳಿ ಹಾವಿಗೆ ಕಚ್ಚಿದ ಕಾರ್ಮಿಕ ; ಕಚ್ಚಾಟದಲ್ಲಿ ಗೆದ್ದರ್ಯಾರು, ಸೋತವರ್ಯಾರು.?

ಇಲ್ಲಿ ಆಕಾಂಕ್ಷಾ ಮಧ್ಯಪ್ರದೇಶದ ಜಬಲ್‌ಪುರ ನಿವಾಸಿಯಾಗಿದ್ದರೆ, ಶಹಾನಾ ಖಾತೂನ್ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದಾರೆ.

ಈ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟೆಕನ್‌ಪುರ್ ಗ್ವಾಲಿಯರ್‌ನಲ್ಲಿ ನಿಯೋಜಿಸಲಾಗಿತ್ತು. ಅವರು ಕಾಣೆಯಾದ ಹಿನ್ನಲೆಯಲ್ಲಿ ಅವರುಗಳ ಹುಡುಕಾಟವು ಈಗ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಯನ್ನು ತಲುಪಿದೆ.

ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ಕೂಡ ರಚಿಸಲಾಗಿದೆ. ಪೊಲೀಸರೊಂದಿಗೆ ಎಸ್‌ಐಟಿ ಮತ್ತು ಬಿಎಸ್‌ಎಫ್ ಗುಪ್ತಚರ ದಳವೂ ಅವರಿಗಾಗಿ ಹುಡುಕಾಟ ನಡೆಸುತ್ತಿದೆ.

ಇದನ್ನು ಓದಿ : ಮಳೆಗಾಲದಲ್ಲಿ ಪುಂಡಿ ಪಲ್ಲೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಈ ಇಬ್ಬರು ಮಹಿಳೆಯರು ಅಕಾಡೆಮಿಯ ಹಾಸ್ಟೆಲ್ ಕೊಠಡಿಯಲ್ಲಿ ಮೊಬೈಲ್ ಬಿಟ್ಟು ಹೋಗಿದ್ದಾಳೆ.

ನಾಪತ್ತೆಯಾದ ಓರ್ವ ಮಹಿಳಾ ಪೇದೆಯ ತಾಯಿ ನೀಡಿದ ದೂರಿನ ಮೇರೆಗೆ ಬಿಲುವಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಲುವಾ ಠಾಣೆ ಪೊಲೀಸರು ಬಿಎಸ್‌ಎಫ್‌ನಿಂದ ಮಾಹಿತಿ ಪಡೆದು ತನಿಖೆ ನಡೆಸಿದಾಗ, ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರ ಚಿತ್ರಗಳೂ ಸೆರೆಯಾಗಿವೆ ಎನ್ನಲಾಗಿದೆ.

ಇದನ್ನು ಓದಿ Special news : ಸಹಿಯೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ ; ನೀವು ಯಾವ ರೀತಿ ಸಹಿ ಮಾಡ್ತೀರಾ.?

ಇನ್ನು ಈ ಇವರಿಬ್ಬರೂ ಗ್ವಾಲಿಯರ್‌ನಿಂದ ದೆಹಲಿಗೆ ರೈಲು ಪ್ರಯಾಣಿಸಿದ್ದಾರೆಂದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ ದೆಹಲಿಯ ಎಟಿಎಂನಿಂದ ಹಣ ಡ್ರಾ ಮಾಡಿ ಕೋಲ್ಕತ್ತಾಗೆ ತೆರಳಿ ಅಲ್ಲಿಂದ ಮುರ್ಷಿದಾಬಾದ್ ತಲುಪಿದ್ದಾರೆ.

ಮತ್ತೊಂದೆಡೆ, ಎಸ್‌ಐಟಿ ಮತ್ತು ಬಿಎಸ್‌ಎಫ್ ಗುಪ್ತಚರ ಘಟಕ ಕೂಡ ಹುಡುಕಾಟ ನಡೆಸುತ್ತಿದ್ದು, ಈ ಇಬ್ಬರು ವಿವಿಧ ರಾಜ್ಯಗಳಿಗೆ ಪ್ರಯಾಣ ಕೈಗೊಳ್ಳಲು ಏನು ಕಾರಣ ಎಂಬ ಅಂಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪೋಟೋ ಕೃಪೆ : Republicworld.com

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img