Saturday, July 13, 2024
spot_img
spot_img
spot_img
spot_img
spot_img
spot_img

ಮಳೆಗಾಲದಲ್ಲಿ ಪುಂಡಿ ಪಲ್ಲೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹಸಿರು ಸೊಪ್ಪುಗಳ ರಾಣಿ ಎಂದು ಕರೆಯಲ್ಪಡುವ ಪುಂಡಿ ಪಲ್ಲೆ, ಹಸಿರು ಎಲೆಯ, ಕೆಂಪು ಕಾಂಡದ ಅಂಬಾಡಿ ದಾಸವಾಳ ಸಸ್ಯಪ್ರಭೇದಕ್ಕೆ ಸೇರಿದೆ. ಅಂಬಾಡಿ ಇತರ ಸೊಪ್ಪುಗಳಿಗಿಂತ ಹೆಚ್ಚು ಉದ್ದವಾಗಿದ್ದು, ಹೆಚ್ಚು ಆಮ್ಲೀಯತೆ ಇರುತ್ತದೆ, ಆದ್ದರಿಂದ ಇದು ಮಳೆಗಾಲದಲ್ಲಿ ಸೂಕ್ಷ್ಮಾಣುಗಳಿಂದ ಬಾಧೆಗೊಳಗಾಗುವುದಿಲ್ಲ. ಇದನ್ನು ಮಳೆಗಾಲದಲ್ಲಿ ಸಹ ಸುರಕ್ಷಿತವಾಗಿ ಸೇವಿಸಬಹುದಾಗಿದೆ.

ಪುಂಡಿಪಲ್ಲೆಯನ್ನು ಪುಲಚಿಕೆರೆ , ಅಂಬಡಿ, ಮೆಸ್ತ್ ಅಂತಲೂ ಕರೆಯುತ್ತಾರೆ. ಇದು ಭಾರತದ ದಕ್ಷಿಣ ಭಾಗದ ಕೆಲವೆಡೆ ಬಳಸುತ್ತಾರೆ.

ಇದನ್ನು ಓದಿ : Special news : ಸಹಿಯೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ ; ನೀವು ಯಾವ ರೀತಿ ಸಹಿ ಮಾಡ್ತೀರಾ.?

ಇದರ ಎಲೆ ಮೂರು ಭಾಗಗಳಾಗಿದ್ದು, ಹುಳಿ ರುಚಿ ಹೊಂದಿದೆ. ಇದರಲ್ಲಿ ಅಧಿಕ ಆ್ಯಂಟಿ ಆಕ್ಸಿಡೆಂಟ್, ನಾರಿನಾಂಶ ವಿಟಮಿನ್ ಮತ್ತು ಕಬ್ಬಿಣದ ಅಂಶಗಳಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ಮಳೆಗಾಲದಲ್ಲಿ ತೂಕ ಕಳೆದು ಕೊಳ್ಳಬಯಸುವವರು ಮತ್ತು ಆರೋಗ್ಯ ಕಾಳಜಿವಹಿಸುವವರು ಈ ಪುಂಡಿ ಪಲ್ಲೆ ಉಪಯೋಗಿಸಿದರೆ ಒಳ್ಳೆಯದು.

ಇನ್ನೂ ಉತ್ತರ ಕರ್ನಾಟಕದ ಕಡೆ ಇದನ್ನು ಪುಂಡಿಪಲ್ಲೆ ಎನ್ನುತ್ತಾರೆ. ಇದನ್ನು ಜೋಳದ ರೊಟ್ಟಿ, ರಾಗಿಮುದ್ದೆ ಜೊತೆ ಪಲ್ಯ, ಗೊಜ್ಜು, ಸಾಂಬಾರ್ ಮಾಡಿ ತಿನ್ನುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಕೆಂಪುದಂಟು ಮತ್ತು ಹಸಿರು ದಂಟು ಎಂಬುದಾಗಿ ವಿಂಗಡಿಸಲಾಗಿದೆ.

ಉಪಯೋಗಗಳು :
ಈ ಎಲೆಯನ್ನು ದಿನ ನಿತ್ಯ ಸೇವಿಸಿದಲ್ಲಿ ಕೂದಲು ಉದುರುವುದು ನಿಲ್ಲುತ್ತದೆ. ಬೊಕ್ಕ ತಲೆ ಆಗದಂತೆ ತಡೆಯುತ್ತದೆ . ಕೂದಲಿಗೆ ಹೊಳಪನ್ನು ನೀಡುತ್ತದೆ.

ಪುಂಡಿ ಪಲ್ಲೆ ಶುದ್ಧ ರಕ್ತವನ್ನು ಹೆಚ್ಚಿಸಲು ಸಹಕಾರಿಯಾಗಿದೆ

ಪುಂಡಿ ಹೂಗಳ ರಸಕ್ಕೆ ಕಲ್ಲು ಸಕ್ಕರೆ, ಕರಿ ಮೆಣಸಿನ ಪುಡಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿದರೆ ಪಿತ್ತದಿಂದ ಉಂಟಾಗುವ ವಾಕರಿಕೆ ನಿವಾರಣೆಯಾಗುತ್ತದೆ

ಪುಂಡಿ ಪಲ್ಲೆ ಮೃದು ವಿರೇಚಕವಾಗಿದ್ದು, ಮಲಬದ್ಧತೆ ನಿವಾರಣೆಯಾಗುತ್ತದೆ.

ಪುಂಡಿ ಪಲ್ಲೆ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ

ಪುಂಡಿ ಪಲ್ಲೆ ಆಹಾರದ ರುಚಿ ಹೆಚ್ಚಿಸುವ ಗುಣವನ್ನು ಹೊಂದಿದೆ

ಉಗುರು ಸುತ್ತು ಹಾಗೆ ಚರ್ಮದ ಖಾಯಿಲೆಗಳಿಗೆ ರಾಮ ಬಾಣ.

ಪುಂಡಿ ಪಲ್ಲೆಯ ವಿಶೇಷ ಹುಳಿಯ ಅಂಶವು ಪಿತ್ತ ಜನಾಂಗಕ್ಕೆ ಬಲ ನೀಡುತ್ತದೆ

ಪುಂಡಿ ಪಲ್ಲೆ ಹೃದಯ ಹಾಗೂ ನರಗಳಿಗೆ ಶಕ್ತಿ ನೀಡುತ್ತದೆ

ಬಾಯಿ ಹುಣ್ಣು ಬರದಂತೆ ತಡೆಯುತ್ತದೆ.

ಪುಂಡಿ ಗಿಡದ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಆಯುರ್ವೇದಲ್ಲಿ ಇದಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಈ ಎಲೆಯಲ್ಲಿನ ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಶಿಯಂ ಮೂಳೆಗಳನ್ನು ಸದೃಢವಾಗಿಡುತ್ತದೆ.

ಇದನ್ನು ಓದಿ : Lokayukta raid : ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ.!

ಎಲೆಯ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು. ಈ ಎಲೆಯಲ್ಲಿ ಇರುವ ಆ್ಯಂಟಿ ಆ್ಯಕ್ಸಿಡೆಂಟ್ ಕ್ಯಾನ್ಸರ್ ಅನ್ನು ಉಂಟು ಮಾಡುವ ಮಲಿಗ್ನಾನ್ಟ್ ಕೋಶವನ್ನು ಬೆಳೆಯದಂತೆ ಮಾಡುತ್ತದೆ. ಅಲ್ಲದೆ ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img