Saturday, July 13, 2024
spot_img
spot_img
spot_img
spot_img
spot_img
spot_img

Lokayukta raid : ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ.!

spot_img

ಜನಸ್ಪಂದನ ನ್ಯೂಸ್, ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಭೂ ಪರಿವರ್ತನೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕಂದಾಯ ಮತ್ತು ಸರ್ವೇ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಎಡಿಎಲ್ ಆರ್. ಅಶ್ವಿನಿ ಹಾಗೂ ಆರ್. ಐ. ಮಂಜುನಾಥ್ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನು ಓದಿ : ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗರಹಾವು ; ಬೆಚ್ಚಿಬಿದ್ದ ಯುವತಿ, ವಿಡಿಯೋ viral.!

ಬಡಾವಣೆ ಭೂ ಪರಿವರ್ತನೆಗಾಗಿ ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುವಾಗ ಅಧಿಕಾರಿಗಳಿಗೆ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಈ ಇಬ್ಬರು ಅಧಿಕಾರಿಗಳು ಹೊಸಕೋಟೆ ಮೂಲದ ಮಹೇಶ್ ಎಂಬುವವರಿಂದ ಹೊಸಕೋಟೆ ಬಳಿ ಬಡಾವಣೆ ಭೂ ಪರಿವರ್ತನೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ : 7ನೇ ತರಗತಿ ಪಾಸಾದವರಿಗೆ ಗುಡ್‌ ನ್ಯೂನ್ : KSRTCಯಲ್ಲಿ 13,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ಅಶ್ವಿನಿ ಹಾಗೂ ಮಂಜುನಾಥ್ 40 ಸಾವಿರಕ್ಕೆ ಬೇಟಿಕೆ ಇಟ್ಟಿದ್ದು, 30 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

spot_img
spot_img
- Advertisment -spot_img