ಜನಸ್ಪಂದನ ನ್ಯೂಸ್, ಡೆಸ್ಕ್ : ಎಲ್ಲಿಯಾದರೂ ಅತೀ ಅವಶ್ಯವಾಗಿ ಹೋಗಬೇಕಾದಾಗ ಸಡನ್ ಆಗಿ ಟ್ರಾಫಿಕ್ ಜಾಮ್ ಆಗಿ ಬಿಟ್ಟರೇ ಹೇಗಾಗಬಾರದು. ನೀವೇನಾದರು ಇಂತ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದರೆ ಅದರ ಅರಿವು ನಿಮಗೆ ಬರುತ್ತದೆ.
ಮಹಾ ನಗರಗಳಲ್ಲಿ ದೊಡ್ಡ ಸಮಸ್ಯೆ ಎಂದರೆ ಅದುವೇ ಟ್ರಾಫಿಕ್ ಜಾಮ್. ಟ್ರಾಫಿಕ್ ಜಾಮ್ನಿಂದ ಎಷ್ಟೇ ಕೋಪ ಬಂದರೂ ಕೂಡ ಏನು ಮಾಡಲಾಗದೇ ಗಂಟೆಗಟ್ಟಲೆ ಕಾಯುವುದನ್ನು ಬಿಟ್ಟರೆ ಮತ್ತೇನು ಮಾಡಲು ಸಾಧ್ಯವಿಲ್ಲ.
ಇದನ್ನೂ ಓದಿ : ತೂಕ ಇಳಿಸಿಕೊಳ್ಳಬೇಕೆ.? ಹಾಗಿದ್ರೆ ನಿಯಮಿತವಾಗಿ ಸೇವಿಸಿ ಈ 7 ಬೀಜಗಳನ್ನ.!
ಇದೀಗ ಅಂತಹ ಟ್ರಾಫಿಕ್ ಜಾಮ್ನಿಂದಾಗಿ ವ್ಯಕ್ತಿಯೊಬ್ಬರು ತೀವ್ರ ಅಸಮಾಧಾನಗೊಂಡು ಬಾಹುಬಲಿಯಂತೆ ತನ್ನ ಬೈಕ್ನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಷ್ಟು ವಾಹನ ದಟ್ಟನೆಯ ನಡುವೆ ತನ್ನ ಬೈಕ್ ಎತ್ತಿಕೊಂಡು ನಡೆಯುತ್ತಿರುವ ದೃಶ್ಯ ಒಮ್ಮೆಗೆ ಬಾಹುಬಲಿ ಸಿನಿಮಾ ನೆನಪಿಸುತ್ತದೆ. ಸಾಕಷ್ಟು ದೂರದ ವರೆಗೆ ಟ್ರಾಫಿಕ್ ಜಾಮ್ನಲಿ ಸಿಲುಕಿರುವ ಜನರು ಏಕಾಏಕಿ ಈ ದೃಶ್ಯ ಕಂಡು ದಂಗಾಗಿ ಹೋಗಿದ್ದಾರೆ.
ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬರು ಬೈಕ್ ಎತ್ತಿಕೊಂಡು ಬರುವ ದೃಶ್ಯವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ವಿವಿಧ ಇಲಾಖೆಯ 17,727 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
@basit_ki_memes ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್ 18ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 3.5 ಮಿಲಿಯನ್ ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 2,33,656 ನೆಟ್ಟಿಗರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram