ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿಗಳ ಕಾಲಿಗೆ ಗುಂಡು (Shot) ಹಾರಿಸಿ ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ರವಿವಾರ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದ ಕೊಲೆ ಪ್ರಕರಣ ಸಂಬಂಧ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಪೊಲೀಸರ ಮೇಲೆ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಇಬ್ಬರು ಪ್ರಮುಖ ಆರೋಪಿಗಳು ದಾಳಿ ಮಾಡಿ ತಪ್ಪಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ.
ಮಾಹಿತಿ ಪ್ರಕಾರ, ಪರಿಶೀಲನೆ ವೇಳೆ ಆರೋಪಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ತಕ್ಷಣ ಪೊಲೀಸರು ಕಾರ್ಯಪ್ರವರ್ತರಾಗಿ, ಇಬ್ಬರ ಕಾಲುಗಳಿಗೆ ಗುಂಡು (Shot) ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರು ರಸ್ತೆಯಲ್ಲಿ 8-10 ಜನರ ಗುಂಪಿನಿಂದ ಕೊಲೆ ನಡೆದಿತ್ತು. ಮಾಹಿತಿಯ ಪ್ರಕಾರ, ಎಂಟರಿಂದ ಹತ್ತು ಜನರ ಗುಂಪು ಮಲಿಕ್ ಜಾನ್ (27) ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ.
ಇದನ್ನು ಓದಿ : ಆಸ್ಪತ್ರೆಯಲ್ಲಿ ಕಂಬಳಿ ಹೊದ್ದು Couple ‘ಅಸಭ್ಯ ಕೃತ್ಯ’ ; ವಿಡಿಯೋ ವೈರಲ್ – ವಿವಾದ ಸೃಷ್ಟಿ.
ಈ ಕೊಲೆ ಪ್ರಕರಣ ಸಂಬಂಧ ಪ್ರಮುಖ ಶಂಕಿತರಾದ ಬಾಲರಾಜ್ ಅಲಿಯಾಸ್ ಬಾಲು ಮತ್ತು ಮೊಹಮ್ಮದ್ ಹಫೀಜ್ ಮತ್ತು ಇತರ ಕೆಲವರನ್ನು ಪೊಲೀಸರು ಬಂಧಿಸಿದ್ದರು.
ಭಾನುವಾರ ಬೆಳಿಗ್ಗೆ, ಆರೋಪಿಗಳ ಗ್ಯಾಂಗ್ ಸದಸ್ಯರು ಒಂದು ಶೆಡ್‌ನಲ್ಲಿ ಆಗಾಗೆ ಕೂಡುತ್ತಾರೆ ಎಂಬ ಮಾಹಿತಿ ಪಡೆದ ಪೊಲೀಸರು, ಸ್ಥಳ ಪರಿಶೀಲನೆಗಾಗಿ ಮಂಟೂರು ರಸ್ತೆಗೆ ತೆರಳಿದ್ದರು. ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕಲ್ಲು ತೂರಾಟ ಮಾಡಿದರು.
ಈ ದಾಳಿ ವೇಳೆ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನು ಓದಿ : Vulgar ವರ್ತನೆ ತೋರಿದ ವ್ಯಕ್ತಿಗೆ ಪೊರಕೆಯಿಂದ ಹೊಡೆದ ನೈರ್ಮಲ್ಯ ಕಾರ್ಯಕರ್ತೆ ; ವಿಡಿಯೋ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ, ಬಾಲರಾಜ್ ಕುರಿ ಸಾಗಣೆ ಮಾಡುವ ಕೆಲಸ ಮಾಡುತ್ತಿರುವಂತೆ ನಾಟಕ ಮಾಡುತ್ತಿದ್ದರೂ, ವಾಸ್ತವದಲ್ಲಿ ಆತ ದರೋಡೆ, ಬೆದರಿಕೆ ಮತ್ತು ವಿವಿಧ ಅಪರಾಧ ಕೃತ್ಯಗಳಲ್ಲಿ ಸಹಾಯಕನಾಗಿದ್ದಾನೆ.
ಹಫೀಜ್ ವಿರುದ್ಧವೂ ಸಹ ಹಲವಾರು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಪೆಂಡಿಂಗ್ ಆಗಿದ್ದು, ಅವುಗಳಲ್ಲಿ ದರೋಡೆ, ಕೊಲೆಯತ್ನ ಮತ್ತು ಕೊಲೆ ಆರೋಪಗಳು ಸೇರಿವೆ ಎಂದು ಶಶಿಕುಮಾರ್ ಹೇಳಿದರು.
ಗುಂಡಿನ ಚಕಮಕಿ ಬಗ್ಗೆ ಅವರು ಮಾಹಿತಿ ನೀಡಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೊದಲು ಗಾಳಿಯಲ್ಲಿ ಎರಡು ಸುತ್ತು ಗುಂಡು (Shot) ಹಾರಿಸಿ ನಂತರ ಆರೋಪಿಗಳ ಕಾಲುಗಳಿಗೆ ಗುಂಡು (Shot) ಹಾರಿಸಿದ್ದಾರೆ.
ಈ ಘಟನೆಯಲ್ಲಿ ಗಾಯಾಳುಗಳಾದ ಮೂವರು ಪೊಲೀಸ್ ಅಧಿಕಾರಿಗಳನ್ನು, ಪೊಲೀಸರ ಗುಂಡೇಟಿ (Shot) ನಿಂದ ಗಾಯಗೊಂಡ ಇಬ್ಬರು ಆರೋಪಿಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಮತ್ತು ಸಂಬಂಧಿತ ಎಲ್ಲಾ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ.
ಪತ್ನಿಯೊಂದಿಗೆ ವಿಡಿಯೋ Call ನಲ್ಲಿ ಪತಿ ಆತ್ಮಹತ್ಯೆ ; ಸ್ಥಳೀಯರಲ್ಲಿ ಆತಂಕ.!

ಜನಸ್ಪಂದನ ನ್ಯೂಸ್, ಮಡಿಕೇರಿ : ಸೋಮವಾರಪೇಟೆ ತಾಲ್ಲೂಕಿನ ಪ್ರದೇಶದಲ್ಲಿ ಸೋಮವಾರ ವ್ಯಕ್ತಿ (ಪತಿ) ಯೋರ್ವ, ಪತ್ನಿಯೊಂದಿಗೆ ವಿಡಿಯೋ ಕಾಲ್ (Call) ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಡಿಯೋ ಕಾಲ್ (Call) ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಮೃತ ವ್ಯಕ್ತಿ (ಪತಿ) ಯನ್ನು ಕೀರ್ತನ್ (36) ಎಂದು ಗುರುತಿಸಲಾಗಿದೆ.
ಪೊಲೀಸರು ಮಾಹಿತಿ ನೀಡಿರುವಂತೆ, ಕೀರ್ತನ್ ಕೆಲವು ದಿನಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದರು. ಪತಿ ಜೈಲಿಗೆ ಹೋದ ಸಂದರ್ಭದಲ್ಲಿ ಪತ್ನಿ ತವರು ಮನೆ ಸೇರಿಕೊಂಡಿದ್ದರು.
ಇದನ್ನು ಓದಿ : Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!
ಕೆಲವು ದಿನಗಳ ಹಿಂದೆ ಜೈಲಿನಿಂದ ರಿಲೀಸ್ ಆದ ನಂತರ ಪತಿ ತಮ್ಮ ಪತ್ನಿಯನ್ನು ನವೆಂಬರ್ 15 ರಂದು ಮನೆಗೆ ಕರೆತರಲು ಹೋಗಿದ್ದರು. ಆದರೆ ಎಷ್ಟೇ ಕರೆದರೂ ಆದರೆ ಪತ್ನಿ ನಿರಾಕರಿಸಿದ್ದಾರೆ.
ಈ ಕಾರಣದಿಂದ ಮನನೊಂದು, ವಿಡಿಯೋ ಕಾಲ್ (Call) ನಲ್ಲಿ ಮಾತನಾಡುತ್ತಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಗುರುವಾರ ಬೆಳಿಗ್ಗೆ ಪತ್ತೆ ಮಾಡಲಾಗಿದೆ.
ಕೀರ್ತನ್ ಕಳೆದ ಕೆಲ ದಿನಗಳಲ್ಲಿಯೂ ಸಹ ಹಲವು ಬಾರಿ ಆತ್ಮಹತ್ಯೆ ಮಾಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದ ಮಾಹಿತಿ ಕುಟುಂಬದಿಂದ ಲಭ್ಯವಾಗಿದೆ. ಸದ್ಯ ಮೃತದೇಹ ಪತ್ತೆಯಾಗಿದೆ.
ಘಟನೆಯ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







