ಜನಸ್ಪಂದನ ನ್ಯೂಸ್, ಬಾಲಗಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ರೈತರು ತಮ್ಮ ಬೇಡಿಕೆಯನ್ನು ಸರಕಾರಕ್ಕೆ ತಿಳಿಸಲು ಆಕ್ರಮಣಾತ್ಮಕ ಕ್ರಮಕ್ಕೆ ಹೋಗಿದ್ದಾರೆ.
ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ (Tractors) ಟ್ರಾಲಿಗಳಿಗೆ ಬೆಂಕಿ :
ಫ್ಯಾಕ್ಟರಿಗೆ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ (Tractors) ಟ್ರಾಲಿಗಳಿಗೆ ರೈತರು ನೆಲಕ್ಕೆ ಉರುಳಿಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಧೋಳದ ರಾಯಣ್ಣ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಟ್ರಾಕ್ಟರ್ (Tractors) ಮತ್ತು ಬೈಕ್ (Bike) ಮೂಲಕ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಕಡೆಗೆ ಸಾಗಿದರು.
ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿಯ ಸೋಮಯ್ಯಾ ಶುಗಸ್೯ ಕಾರ್ಖಾನೆ ಮಾಲೀಕರು ಬಾಕಿ ಬಿಲ್ ಪಾವತಿಸದೇ ಕಾರ್ಖಾನೆ ಆರಂಭಿಸಿರುವುದು ರೈತರಲ್ಲಿ ಮತ್ತಷ್ಟು ಆಕ್ರೋಶವನ್ನು ಉಂಟು ಮಾಡಿದ ಹಿನ್ನಲೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ (Tractors) ಗಳ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?
ಹೀಗಾಗಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ನಿಂತಿದ್ದ ಸುಮಾರು 20 ಕ್ಕೂ ಅಧಿಕ ಟ್ರ್ಯಾಕ್ಟರ್ (Tractors) ಟ್ರಾಲಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರೈತರ ಮುಖ್ಯ ಬೇಡಿಕೆ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಮಾಡುವಂತೆ ಆಗಿದ್ದು, ಸರ್ಕಾರ ಈ ಮೊತ್ತವನ್ನು 3300 ರೂ. ಒಪ್ಪಿದೆ. ಆದರೆ ರೈತರು ತಮ್ಮ ವೆಚ್ಚ, ಶ್ರಮ ಮತ್ತು ಮಾರುಕಟ್ಟೆ ಬೆಲೆಗಳನ್ನು ಪರಿಗಣಿಸಿ 3500 ರೂ. ದರಕ್ಕೆ ಒತ್ತಾಯಿಸುತ್ತಿದ್ದಾರೆ.
ಮುಧೋಳದಲ್ಲಿ ನಡೆದ ಪ್ರತಿಭಟನೆ ಅಂಗಡಿ ಮತ್ತು ಮಾರುಕಟ್ಟೆ ಬಂದ್ ಮೂಲಕ ಕೂಡ ಬೆಂಬಲಿಸಲ್ಪಟ್ಟಿತು. ರೈತರು ಧರಣಿ ನಡೆಸಿ, ಸಮೀರವಾಡಿಯ ಕಾರ್ಖಾನೆ ಮೇಲೆ ಮುತ್ತಿಗೆ ಹಾಕಿದರು. ಕೆಲವು ಪ್ರತಿಭಟನಾಕಾರರು ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್‌ಗಳನ್ನು (Tractors) ಉರುಳಿಸಿ ಬೆಂಕಿ ಹಚ್ಚುವ ಮೂಲಕ ಆಕ್ರೋಶ ತೋರಿಸಿದರು.
ಈ ಪ್ರತಿಭಟನೆ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದು, ರೈತರು ಕಬ್ಬಿಗೆ ಸಮರ್ಪಕ ಬೆಲೆ ನಿಗದಿಗೆ ಒತ್ತಾಯಿಸುತ್ತಿದ್ದಾರೆ.
“Ants ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸರಳ ಮನೆಮದ್ದುಗಳ ಪರಿಹಾರ”.!

ಜನಸ್ಪಂದನ ನ್ಯೂಸ್, ಆರೋಗ್ಯ : ಮನೆಯೊಳಗೆ ಇರುವೆಗಳು (Ants) ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯ. ವಿಶೇಷವಾಗಿ ಅಡುಗೆ ಕೋಣೆಯ ಬಳಿ ಅಥವಾ ಆಹಾರ ಇಡುವ ಸ್ಥಳಗಳಲ್ಲಿ ಇವುಗಳ ಹಾವಳಿ ಇನ್ನು ಹೆಚ್ಚಿರುತ್ತದೆ.
ಪುಟ್ಟ ಜೀವಿಗಳಾದರೂ ಇವುಗಳ ಕಾಟ ಮನೆಯನ್ನು ಕಿರಿಕಿರಿಯಿಂದ ತುಂಬಿಸಿ ಬಿಡುತ್ತದೆ. ಅನೇಕರು ಇರುವೆಗಳನ್ನು ತೊಡೆದುಹಾಕಲು ಮಾರುಕಟ್ಟೆಯ ರಾಸಾಯನಿಕ ಸ್ಪ್ರೇ ಅಥವಾ ಪೌಡರ್‌ಗಳನ್ನು ಬಳಸುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಮತ್ತು ಮಕ್ಕಳಿಗೆ, ಪಶುಪಕ್ಷಿಗಳಿಗೆ ಅಪಾಯ ಉಂಟುಮಾಡಬಹುದು.
ಆದರೆ ಮನೆಯಲ್ಲಿಯೇ ಲಭ್ಯವಿರುವ ಕೆಲವು ನೈಸರ್ಗಿಕ ವಸ್ತುಗಳಿಂದ ಇರುವೆಗಳ ಕಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಇಲ್ಲಿವೆ ಇರುವೆಗಳ ಕಾಟ ತಪ್ಪಿಸಲು ಸರಳ ಹಾಗೂ ಸುರಕ್ಷಿತ ಮನೆಮದ್ದುಗಳು :
ಇದನ್ನು ಓದಿ : Kiwi ಹಣ್ಣು ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ನಿಂಬೆ ಮತ್ತು ವಿನೆಗರ್ ಮಿಶ್ರಣ :
ಇರುವೆಗಳು ಹುಳಿ ಮತ್ತು ಬಲವಾದ ವಾಸನೆಯನ್ನು ದ್ವೇಷಿಸುತ್ತವೆ. ನಿಂಬೆ ರಸ, ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿ. ಈ ಮಿಶ್ರಣವನ್ನು ಬಾಗಿಲು, ಕಿಟಕಿ, ಗೋಡೆ ಬಿರುಕುಗಳ ಬಳಿ ಸಿಂಪಡಿಸಿ. ನಿಂಬೆ-ವಿನೆಗರ್‌ನ ತೀವ್ರ ವಾಸನೆ ಇರುವೆಗಳು ಒಳಗೆ ಪ್ರವೇಶಿಸದಂತೆ ತಡೆಯುತ್ತದೆ ಮತ್ತು ಅಡುಗೆ ಮನೆಯನ್ನು ಶುದ್ಧಗೊಳಿಸುತ್ತದೆ.
ಉಪ್ಪಿನ ದ್ರಾವಣ :
ಉಪ್ಪು ಇರುವೆಗಳನ್ನು ಓಡಿಸಲು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ವಿಧಾನವಾಗಿದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಎರಡು ಚಮಚ ಉಪ್ಪು ಸೇರಿಸಿ ಚೆನ್ನಾಗಿ ಕರಗಿಸಿ. ಈ ದ್ರಾವಣವನ್ನು ಇರುವೆಗಳ ಹಾದಿಗಳ ಮೇಲೆ ಸಿಂಪಡಿಸಿ. ಕೆಲವೇ ನಿಮಿಷಗಳಲ್ಲಿ ಇರುವೆಗಳು ಅಲ್ಲಿಂದ ಓಡಿ ಹೋಗುತ್ತವೆ.
ದಾಲ್ಚಿನ್ನಿ ಮತ್ತು ಲವಂಗದ ವಾಸನೆ :
ದಾಲ್ಚಿನ್ನಿಯ ಬಲವಾದ ಪರಿಮಳವು ಇರುವೆಗಳಿಗೆ ಅಸಹನೀಯ. ಇರುವೆಗಳು ಓಡಾಡುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿ ಅಥವಾ ದಾಲ್ಚಿನ್ನಿ ಎಣ್ಣೆ ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಜೊತೆಗೆ ಲವಂಗವನ್ನು ಕೂಡ ಇರುವೆ ಹಾದಿಗಳ ಬಳಿ ಇಡುವುದರಿಂದ ಇವು ಹತ್ತಿರ ಬರೋದಿಲ್ಲ. ಈ ವಿಧಾನ ನೈಸರ್ಗಿಕವಾಗಿದ್ದು, ಸುಗಂಧದಿಂದ ಮನೆಯ ವಾತಾವರಣವನ್ನೂ ತಾಜಾಗೊಳಿಸುತ್ತದೆ.
ಪುದೀನಾ ಎಣ್ಣೆ :
ಪುದೀನಾ ಎಣ್ಣೆಯ ತಾಜಾ ವಾಸನೆ ಇರುವೆಗಳನ್ನು ದೂರವಿಡಲು ಬಹಳ ಪರಿಣಾಮಕಾರಿ. ಒಂದು ಕಪ್ ನೀರಿಗೆ 10 ಹನಿ ಪುದೀನಾ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮನೆಯ ಮೂಲೆಗಳು, ಅಡುಗೆಮನೆ ತಳಹದಿ ಮತ್ತು ಇರುವೆಗಳು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಸಿಂಪಡಿಸಿ. ಇವು ಇರುವೆಗಳನ್ನು ಮಾತ್ರವಲ್ಲ, ಇತರ ಕೀಟಗಳನ್ನೂ ತಡೆಯುತ್ತದೆ.
ಇದನ್ನು ಓದಿ : “Blood-Sugar ನಿಯಂತ್ರಣಕ್ಕೆ ಈ ಪುಡಿ ಬಿಸಿ ನೀರಿನೊಂದಿಗೆ ಕುಡಿಯಿರಿ : ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ”.
ಈರುಳ್ಳಿ ತುಂಡುಗಳು :
ಈರುಳ್ಳಿಯ ಬಲವಾದ ವಾಸನೆಯನ್ನು ಇರುವೆಗಳು ಸಹಿಸಿಕೊಳ್ಳಲಾರವು. ಇರುವೆಗಳು ಓಡಾಡುವ ಸ್ಥಳಗಳಲ್ಲಿ ಈರುಳ್ಳಿ ತುಂಡುಗಳನ್ನು ಇರಿಸಿ. ಕೆಲವೇ ಗಂಟೆಗಳಲ್ಲಿ ಇವು ಅಲ್ಲಿಂದ ಮಾಯವಾಗುತ್ತವೆ. ನಿಯಮಿತವಾಗಿ ಈರುಳ್ಳಿಯ ತುಂಡುಗಳನ್ನು ಬದಲಾಯಿಸುವುದರಿಂದ ಪರಿಣಾಮ ಹೆಚ್ಚು ಕಾಲ ಉಳಿಯುತ್ತದೆ.
ನಿಯಮಿತ ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆಗಳು :
ಮನೆಯ ಸ್ವಚ್ಛತೆ ಇರುವೆ ನಿಯಂತ್ರಣದ ಮುಖ್ಯ ಭಾಗವಾಗಿದೆ. ಅಡುಗೆಮನೆಯಲ್ಲಿ ಸಕ್ಕರೆ, ಸಿಹಿತಿಂಡಿ ಅಥವಾ ಆಹಾರ ಕಣಗಳು ಚೆಲ್ಲದಂತೆ ನೋಡಿಕೊಳ್ಳಿ. ಆಹಾರ ವಸ್ತುಗಳನ್ನು ಭದ್ರವಾಗಿ ಮುಚ್ಚಿ ಇಡಿ. ಬಿರುಕುಗಳು ಮತ್ತು ರಂಧ್ರಗಳನ್ನು ಮುಚ್ಚುವುದರಿಂದ ಇರುವೆಗಳು ಒಳಗೆ ನುಗ್ಗುವ ದಾರಿ ಕಡಿಮೆಯಾಗುತ್ತದೆ. ತೇವಭರಿತ ಸ್ಥಳಗಳು ಇರುವೆಗಳಿಗೆ ಆಕರ್ಷಕವಾಗಿರುವುದರಿಂದ ಮನೆ ಒಣದಾಗಿರಲಿ.
ಸಂಪಾದಕೀಯ :
ಮಾರುಕಟ್ಟೆಯ ರಾಸಾಯನಿಕಗಳನ್ನು ಬಿಟ್ಟು ನೈಸರ್ಗಿಕ ಮನೆಮದ್ದುಗಳನ್ನು ಬಳಸಿ ನಿಮ್ಮ ಮನೆ ಮತ್ತು ಅಡುಗೆಮನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ನಿಂಬೆ, ವಿನೆಗರ್, ಪುದೀನಾ ಎಣ್ಣೆ, ದಾಲ್ಚಿನ್ನಿ, ಈರುಳ್ಳಿ ಮುಂತಾದ ಸರಳ ವಸ್ತುಗಳಿಂದ ಇರುವೆಗಳ ಕಾಟದಿಂದ ಶಾಶ್ವತ ಪರಿಹಾರ ಪಡೆಯಬಹುದು.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







