ಜನಸ್ಪಂದನ ನ್ಯೂಸ್, ಬಿಲಾಸಪುರ : ಇತ್ತೀಚಿನ ದಿನಗಳಲ್ಲಿ ರಸ್ತೆ ಹಾಗೂ ರೈಲು (Train) ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಬಂದಿದೆ. ಅನೇಕರು ಜೀವ ಕಳೆದುಕೊಂಡು, ಹಲವರು ಗಾಯಗೊಂಡಿರುವ ಘಟನೆಗಳು ದೇಶದಾದ್ಯಂತ ಆತಂಕ ಮೂಡಿಸಿವೆ.
ಇದೀಗ ನಡೆದ ಮತ್ತೊಂದು ಭೀಕರ ಅಪಘಾತದಲ್ಲಿ ಭಾರತೀಯ ರೈಲ್ವೇಯ (68733) ಪ್ರಯಾಣಿಕರ ರೈಲು ಬಿಲಾಸಪುರ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಬಿಲಾಸಪುರದಲ್ಲಿ ಭೀಕರ ರೈಲು ಅಪಘಾತ :
ಚತ್ತೀಸಗಢದ ಬಿಲಾಸಪುರ ಜಿಲ್ಲೆಯ ಲಾಲ್‌ಖಡನಾ ಪ್ರದೇಶದ ಬಳಿ ನಡೆದ ಈ ದುರಂತದಲ್ಲಿ ಪ್ರಯಾಣಿಕರ ರೈಲು (Train) ವೇಗವಾಗಿ ಸಂಚರಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ರೈಲಿ (Train) ಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಯಿಂದ ರೈಲಿನ ಮುಂಭಾಗದ ಬೋಗಿಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಸ್ಥಳಕ್ಕೆ ಧಾವಿಸಿದ ಬಿಲಾಸಪುರ ಎಸ್‌ಪಿ ರಜನೀಶ್ ಸಿಂಗ್ ಅವರು, “ಇದುವರೆಗೆ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಹಲವಾರು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿ ಭೀಕರ ದೃಶ್ಯ :
ರೈಲು (Train) ಅಪಘಾತದ ನಂತರ ಸ್ಥಳದಲ್ಲಿ ಶೋಕ ವಾತಾವರಣದ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಪ್ರಯಾಣಿಕರು ಬೋಗಿಗಳೊಳಗೆ ಸಿಲುಕಿಕೊಂಡಿದ್ದರು. ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ರಕ್ಷಣಾ ಪಡೆಗಳು ಸ್ಥಳದಲ್ಲಿ ಶ್ರಮಪಟ್ಟು ಕಾರ್ಯಾಚರಣೆ ನಡೆಸುತ್ತಿವೆ.
ಆಯಂಬುಲೆನ್ಸ್ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಂದು ಮಗುವನ್ನು ಬೋಗಿಯ ಅಡಿಯಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂಬ ವರದಿಯೂ ಬಂದಿದೆ.
ಅಪಘಾತದ ಸಾಧ್ಯ ಕಾರಣ :
ಪ್ರಾಥಮಿಕ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವೈಯರಿಂಗ್ ಹಾಗೂ ಸಿಗ್ನಲ್ ಸಿಸ್ಟಮ್ ವೈಫಲ್ಯ ಈ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ರೈಲ್ವೇ ಅಧಿಕಾರಿಗಳು ಈಗಾಗಲೇ ಘಟನೆಯ ತನಿಖೆ ಆರಂಭಿಸಿದ್ದು, ವಿಶೇಷ ತನಿಖಾ ತಂಡ ಸ್ಥಳಕ್ಕೆ ಧಾವಿಸಿದೆ.
ರೈಲು (Train) ಸಂಚಾರದಲ್ಲಿ ಅಡಚಣೆ :
ಈ ಅಪಘಾತದ ಪರಿಣಾಮವಾಗಿ ಬಿಲಾಸಪುರ–ಕತ್ನಿ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅನೇಕ ರೈಲು (Train) ಗಳು ರದ್ದಾಗಿದ್ದು, ಕೆಲವಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ತಾಂತ್ರಿಕ ಸಿಬ್ಬಂದಿಗಳು ಹಳಿಯನ್ನು ಶೀಘ್ರ ದುರಸ್ತಿ ಮಾಡಲು ತೊಡಗಿದ್ದಾರೆ.
ಸಹಾಯವಾಣಿ ತೆರೆದ ರೈಲ್ವೇ :
ಅಪಘಾತದ ಬೆನ್ನಲ್ಲೇ ಭಾರತೀಯ ರೈಲ್ವೇ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳು ಈ ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದು:
- ಬಿಲಾಸಪುರ: 9752485499, 8602007202
- ಚಂಪಾ ಜಂಕ್ಷನ್: 808595652
- ರಾಯಿಘಡ: 975248560
- ಪಂದ್ರ ರಸ್ತೆ: 8294730162
ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಗಳು ವೇಗವಾಗಿ ಮುಂದುವರಿದಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೇ ಇಲಾಖೆ ಈ ಘಟನೆಗೆ ಆಳವಾದ ವಿಷಾದ ವ್ಯಕ್ತಪಡಿಸಿದ್ದು, ಬಾಧಿತ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆಗಳೂ ಇವೆ.
ರಾಜ್ಯದಲ್ಲಿ “Aarogya Kavacha” ಸೇವೆ ಬಲಪಡಿಸಲು 3,691 ಹೊಸ ಹುದ್ದೆಗಳ ಸೃಷ್ಟಿ.!

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದಲ್ಲಿ 108 ಆಂಬುಲೆನ್ಸ್ ಹಾಗೂ 104 ಆರೋಗ್ಯ ಸಹಾಯವಾಣಿ (Aarogya Kavacha) ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಸರ್ಕಾರವು 2025–26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ–144ರ ಘೋಷಣೆಯನ್ವಯ ಒಟ್ಟು 3,691 ಹೊಸ ಹುದ್ದೆಗಳನ್ನು ಸೃಜಿಸುವ ಆದೇಶ ಹೊರಡಿಸಿದೆ.
ಆಯವ್ಯಯ ಭಾಷಣದ ಅನ್ವಯ, ಆರೋಗ್ಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಆರೋಗ್ಯ ಕವಚ (Aarogya Kavacha) ಸೇವೆ’ಯನ್ನು ಬಲಪಡಿಸಲು ಹಾಗೂ ತುರ್ತು ವೈದ್ಯಕೀಯ ನೆರವು ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಮೇಲೆ ಓದಲಾದ ಕ್ರಮಾಂಕ (1) ರ ಆಯವ್ಯಯ ಭಾಷಣದಲ್ಲಿ, ರಾಜ್ಯದ 108 ಆಂಬುಲೆನ್ಸ್ ಸೇವೆಯನ್ನು ಸುಧಾರಿಸಲು ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ನೇರವಾಗಿ ಆರೋಗ್ಯ ಇಲಾಖೆಯ ಅಧೀನಕ್ಕೆ ತರಲಾಗುವುದು ಎಂದು ಘೋಷಣೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ, 108 ಆಂಬುಲೆನ್ಸ್ ಮತ್ತು 104 ಆರೋಗ್ಯ ಸಹಾಯವಾಣಿ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ.
Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಮೇಲೆ ಓದಲಾದ ಕ್ರಮಾಂಕ (2) ರ ಏಕ-ಕಡತದ ಪ್ರಕಾರ, ಈ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ, ಸರ್ಕಾರವು ಕ್ರಮಾಂಕ (3) ರ ಆದೇಶದ ಮೂಲಕ 108 ಮತ್ತು 104 ಸೇವೆಗಳನ್ನು ನಿರ್ವಹಿಸಲು ಒಟ್ಟು 3,691 ಹುದ್ದೆಗಳನ್ನು ಸೃಜಿಸುವಂತೆ ಅನುಮೋದನೆ ನೀಡಿದೆ.
ಇದಲ್ಲದೆ, ಈ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು 4 ಆಡಳಿತಾತ್ಮಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲು ತೀರ್ಮಾನಿಸಲಾಗಿದೆ. ಈ ಹುದ್ದೆಗಳನ್ನು ಸಂಬಂಧಪಟ್ಟ ಇಲಾಖೆಗಳಾದ ಸಾಮಾನ್ಯ ಆಡಳಿತ, ಆರ್ಥಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಶಿಫಾರಸ್ಸಿನ ಮೇರೆಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮದುವೆಯಾಗು ಎಂದ Girlfriend ; ಗುಂಡಿ ತೋಡಿ ಹೂತು ಹಾಕಿದ ಪ್ರಿಯಕರ.!
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ ಆಇ 438 ವೆಚ್ಚ–5/2025, ದಿನಾಂಕ 11.09.2025 ರ ಅನುಮೋದನೆಯ ಮೇರೆಗೆ ಹೊರಡಿಸಲಾಗಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ತುರ್ತು ವೈದ್ಯಕೀಯ ಸೇವೆಗಳು, 108 ಆಂಬುಲೆನ್ಸ್ ಹಾಗೂ 104 ಸಹಾಯವಾಣಿ (Aarogya Kavacha) ವ್ಯವಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.







