ಶುಕ್ರವಾರ, ನವೆಂಬರ್ 28, 2025

Janaspandhan News

HomeBelagavi Newsಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
spot_img
spot_img
spot_img

ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆಯ ಮೇಲೆ ಅಸಭ್ಯ ವರ್ತನೆ ತೋರಿ ಕಿರುಕುಳ (harassment) ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೆಳಗಾವಿಯ ಶೀಘ್ರಗತಿ ಪೋಕ್ಸೊ ನ್ಯಾಯಾಲಯ ಗಂಭೀರ ತೀರ್ಪು ನೀಡಿದೆ. ಆರೋಪಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಲಾಗಿದೆ.

ಈ ತೀರ್ಪು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೊ ನ್ಯಾಯಾಲಯ-1 ಸೋಮವಾರ ನೀಡಿದೆ.

ಈ ಪ್ರಕರಣದ ಆರೋಪಿಯಾಗಿರುವವರು ರಾಯಬಾಗ ತಾಲೂಕಿನ ಅನಿಲ ಕಾಂಬಳೆ (26). 2023ರ ನವೆಂಬರ್ ತಿಂಗಳಲ್ಲಿ ಅವರು ಅಪ್ರಾಪ್ತೆಯಾದ ಬಾಲಕಿಗೆ ಎರಡು ವಿಭಿನ್ನ ಸಂದರ್ಭಗಳಲ್ಲಿ ಕಿರುಕುಳ (harassment) ನೀಡಿದ್ದಾಗಿ ಪ್ರಕರಣ ದಾಖಲಾಗಿದೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, 2023ರ ನವೆಂಬರ್ 23ರಂದು ಬಾಲಕಿ ಕಾಲೇಜಿನಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಆರೋಪಿ ಆಕೆಯ ಬಳಿ ಅಸಭ್ಯ (harassment) ರೀತಿಯಲ್ಲಿ ವರ್ತಿಸಿದ್ದ.

ಅದೇ ರೀತಿ ನವೆಂಬರ್ 26ರಂದು ಸಂಜೆ, ಬಾಲಕಿ ಹಾಲು ಕೊಡಲು ಹೊರಟ ಸಂದರ್ಭದಲ್ಲಿ ಪುನಃ ಹಿಂಬಾಲಿಸಿ ಲೈಂಗಿಕ ಹಲ್ಲೆ ಮಾಡುವ ಉದ್ದೇಶದಿಂದ ಅಡ್ಡಗಟ್ಟಿ ಕೈ ಹಿಡಿದು ಎಳೆದು ನನ್ನ ಜೊತೆ ಬಾ ಎಂದು ಆರೋಪಿ  ಎಳೆದಾಡಿ ಲೈಂಗಿಕ ಹಿಂಸೆ (harassment) ನೀಡಿದ್ದ.

ಒಂದು ವೇಳೆ ನೀನು ಮನೆಯಲ್ಲಿ ಹೇಳಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಆರೋಪಿಯು ಆಕೆಯನ್ನು ಬೆದರಿಸಿದ್ದಾನೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಲಾಯಿತು.

ತನಿಖಾಧಿಕಾರಿಗಳಾದ ಐಶ್ವರ್ಯಾ ನಾಗರಾಳ, ಸಹಾಯಕ ಓ.ಎಸ್. ಒಡೆಯರ್ ಹಾಗೂ ದಾಖಲಾಧಿಕಾರಿಗಳು ಸಾಕ್ಷಿ ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಕರಣದಲ್ಲಿ ಒಟ್ಟು ಆರು ಸಾಕ್ಷಿದಾರರ ಹೇಳಿಕೆಗಳು ಮತ್ತು 30 ದಾಖಲೆಗಳು ಆಧಾರವಾಗಿ, ನ್ಯಾಯಾಧೀಶರು ಆರೋಪಿಯ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದರು.

ಆರೋಪಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಲಾಗಿದೆ. ದಂಡ ಮೊತ್ತವನ್ನು ಪಾವತಿಸದಿದ್ದರೆ, ಹೆಚ್ಚುವರಿ ಆರು ತಿಂಗಳ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಇದೇ ವೇಳೆ, ನ್ಯಾಯಾಲಯವು ನೊಂದ ಅಪ್ರಾಪ್ತೆಗೆ ಪರಿಹಾರ ಧನವಾಗಿ ರೂ.1 ಲಕ್ಷ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ. ಈ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳವರೆಗೆ ಮುದ್ದತ್ ಠೇವಣಿ ರೂಪದಲ್ಲಿ ಇರಿಸಲು ಸೂಚಿಸಲಾಗಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿ, ಆರೋಪಿಗೆ ಶಿಕ್ಷೆ ವಿಧಿಸಲು ಯಶಸ್ವಿಯಾಗಿದ್ದಾರೆ.



Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!

Belagavi

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ಯ ಸದಾಶಿವ ನಗರದಲ್ಲಿ ರಾಜ್ಯೋತ್ಸವ ಮೆರವಣಿಗೆಯ ವೇಳೆ ಚಾಕು ಇರಿತದ ಘಟನೆ ಸಂಭವಿಸಿ ಐದು ಮಂದಿ ಯುವಕರು ಗಾಯಗೊಂಡಿದ್ದಾರೆ.

ಈ ಘಟನೆ ಶನಿವಾರ ರಾತ್ರಿ ಸದಾಶಿವನಗರದ ವೈ-ಜಂಕ್ಷನ್ ಬಳಿ ನಡೆದಿದೆ.

ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!

ಗಾಯಗೊಂಡವರು ಬೆಳಗಾವಿ (Belagavi) ನೆಹರು ನಗರದ ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ಸುಂಕದ, ವಿನಾಯಕ ನರಟ್ಟಿ ಮತ್ತು ನಜೀರ್ ಪಠಾಣ ಎಂದು ತಿಳಿದುಬಂದಿದೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments