ಜನಸ್ಪಂದನ ನ್ಯೂಸ್, ಡೆಸ್ಕ್ : ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಮದ್ಯ (Drink) ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ ಶಿಕ್ಷಕನನ್ನು ಸಸ್ಪೆಂಡ್ ಮಾಡಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ (Katni District of Madhya Pradesh) ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಬರ್ವಾರಾ ಬ್ಲಾಕ್‌ನ ಖಿರ್ಹಾನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ (Govt Primary School Teacher) ಲಾಲ್ ನವೀನ್ ಪ್ರತಾಪ್ ಸಿಂಗ್ ಎಂಬ ಶಿಕ್ಷಕ ಅಮಾನತು ಮಾಡಲಾಗಿದೆ.
ಇದನ್ನು ಓದಿ : Astrology : ಎಪ್ರಿಲ್ 20 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಅವರ ಗಮನಕ್ಕೆ ಈ ವಿಡಿಯೋ ಬಂದ ಕೂಡಲೇ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿ ಒಪಿ ಸಿಂಗ್ (District Education Officer OP Singh) ಅವರಿಗೆ ಸೂಚಿಸಿದ್ದರು.
ಮಕ್ಕಳಿಗೆ ಮದ್ಯ ಕುಡಿಯಲು ಪ್ರೋತ್ಸಾಹ ನೀಡುವುದು ಮತ್ತು ಶಿಕ್ಷಕರ ಘನತೆಗೆ ಕುಂದು ತಂದ ಆರೋಪದ ಮೇಲೆ ಶಿಕ್ಷಕನನ್ನು ಮಧ್ಯಪ್ರದೇಶ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳ ಅಡಿಯಲ್ಲಿ ತಕ್ಷಣವೇ ಅಮಾನತುಗೊಳಿಸಲಾಗಿದೆ (suspended) ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಕೈದಿಗಳಿಗಾಗಿ ಮೊದಲ ಬಾರಿಗೆ “Sex Room” ಪ್ರಾರಂಭ ; ಯಾವ ದೇಶದಲ್ಲಿ ಗೊತ್ತಾ.?
ವಿಡಿಯೋದಲ್ಲಿ ಶಿಕ್ಷಕ ಚಿಕ್ಕ ಹುಡುಗರಿಗೆ ಕಪ್‌ಗಳಲ್ಲಿ ಪಾನೀಯ ನೀಡುತ್ತಿರುವುದನ್ನು ಕಾಣಬಹುದು. ಪಾನೀಯ ಕುಡಿಯುವುದಕ್ಕಿಂತ ಮುಂಚೆ ನೀರನ್ನು ಬೆರೆಸಿ ಎಂದು ಹೇಳಲಾಗಿದೆ.
ವಿಡಿಯೋ ನೋಡಿ :
मध्य प्रदेश : कटनी में शिक्षक ने बच्चों को पिलाई शराब#Katni #Teacher #latestnews pic.twitter.com/RzvU8I50oS
— Bharat Raftar TV (@BharatRaftarTV) April 19, 2025
ಹಿಂದಿನ ಸುದ್ದಿ : ಕೈದಿಗಳಿಗಾಗಿ ಮೊದಲ ಬಾರಿಗೆ “Sex Room” ಪ್ರಾರಂಭ ; ಯಾವ ದೇಶದಲ್ಲಿ ಗೊತ್ತಾ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಜೈಲುಗಳಲ್ಲಿ ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ ಸರ್ಕಾರವು ವಿಶೇಷ ಲೈಂಗಿಕ ಕೊಠಡಿಗಳನ್ನು (Special sex rooms) ಸ್ಥಾಪಿಸಲು ಪ್ರಾರಂಭಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ತಮ್ಮ ಪತ್ನಿಯರು ಅಥವಾ ಪಾಲುದಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವ ಹಾಗೆ ಕೈದಿಗಳಿಗೆ ಈ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
ಕೈದಿಗಳು ತಮ್ಮ ಪತ್ನಿಯರು ಅಥವಾ ಪಾಲುದಾರರೊಂದಿಗೆ ಎರಡು ಗಂಟೆಗಳ ಕಾಲ ಕಳೆಯಲು ಅವಕಾಶ (Prisoners are allowed to spend two hours) ಪಡೆಯುತ್ತಾರೆ. ಇನ್ನೂ ಈ ಕೊಠಡಿಗಳಲ್ಲಿ ಯಾವುದೇ ಭದ್ರತಾ ಮೇಲ್ವಿಚಾರಣೆ ಇರುವುದಿಲ್ಲ.
ಉಂಬ್ರಿಯಾ ಪ್ರದೇಶದ ಜೈಲಿನಲ್ಲಿ ಮೊದಲು ಈ ನೀತಿಯನ್ನು ಜಾರಿಗೆ ತರಲಾಯಿತು. ಕೈದಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಇದು ಸಕಾರಾತ್ಮಕ ಹೆಜ್ಜೆ (positive step) ಎಂದು ತಿಳಿಯಲಾಗಿದೆ. ಅಲ್ಲದೇ ಕೈದಿಗಳ ಘನತೆ ಮತ್ತು ಗೌಪ್ಯತೆಯನ್ನು ರಕ್ಷಿಸಲು ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!
ಕೈದಿಗಳು ತಮ್ಮ ಸಂಗಾತಿಗಳೊಂದಿಗೆ ಲೈಂಗಿಕ ಸಂಭೋಗ ನಡೆಸುವ ಹಕ್ಕನ್ನು ಹೊಂದಿದ್ದಾರೆ ಎಂದು ಇಟಲಿಯ ಅತ್ಯುನ್ನತ ನ್ಯಾಯಾಲಯವು ತೀರ್ಪು ನೀಡಿದೆ. ಈ ನಿರ್ಧಾರವನ್ನು ಇಟಲಿಯ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಾಮಾಜಿಕ ತಜ್ಞರು ಸ್ವಾಗತಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಇತರ ಯುರೋಪಿಯನ್ ರಾಷ್ಟ್ರಗಳಿಗೂ ಇಟಲಿಯ ಈ ನೀತಿಯು ಸ್ಫೂರ್ತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೈಲು ಜೀವನವು ಕಠಿಣವಾಗಿದ್ದರೂ, ಅದರಲ್ಲಿ ಮಾನವೀಯತೆಗೆ ಸ್ಥಾನವಿದೆ ಎಂದು ಸರ್ಕಾರ ಈ ಮೂಲಕ ತೋರಿಸಿದೆ.