ಜನಸ್ಪಂದನ ನ್ಯೂಸ್, ಡೆಸ್ಕ್ : ಸಮಾಜದಲ್ಲಿ ಸಹಿಷ್ಣುತೆ ಮತ್ತು ಪರಸ್ಪರ ಗೌರವದ ಅಗತ್ಯವನ್ನು ತೋರಿಸುವ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ಬುರ್ಖಾ ಧರಿಸಿದ್ದ ಯುವತಿ (Young woman / Girl) ಮತ್ತು ಆಕೆಯ ಬೇರೆ ಧರ್ಮದ ಸ್ನೇಹಿತ (ಯುವಕ) ನಿಗೆ ಕೆಲವರು ಸಾರ್ವಜನಿಕವಾಗಿ ಕಿರುಕುಳ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Train ಹಳಿ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು ; ಮುಂದೆನಾಯ್ತು.? ವಿಡಿಯೋ ನೋಡಿ.!
ಮಾಹಿತಿಯ ಪ್ರಕಾರ, ಯುವತಿ (Girl) ಮತ್ತು ಆಕೆಯ ಸ್ನೇಹಿತ ಇಬ್ಬರೂ ಟ್ಯೂಷನ್ ತರಗತಿಯಿಂದ ಮನೆಗೆ ವಾಪಸ್ಸಾಗುತ್ತಿದ್ದರು. ಆ ಸಮಯದಲ್ಲಿ, ಕೆಲವು ಮಂದಿ ರಸ್ತೆಯಲ್ಲೇ ಅವರನ್ನು ತಡೆದು ಪ್ರಶ್ನಿಸಲು ಆರಂಭಿಸಿದ್ದಾರೆ. ಗುಂಪಿನವರು ಯುವತಿಯು (Girl) ಹಿಂದೂ ಯುವಕನೊಂದಿಗೆ ನಿಂತಿರುವುದನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ದೃಶ್ಯದಲ್ಲಿ, ಯುವತಿ “ಯೇ ಮೇರಾ ಭಾಯ್ ಹೈ” (ಅವನು ನನ್ನ ಸಹೋದರ) ಎಂದು ಸ್ಪಷ್ಟವಾಗಿ ಹೇಳುವುದನ್ನು ಕೇಳಬಹುದು. ಆದರೆ, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ “ಅವನು ಹಿಂದೂ, ನೀನು ಮುಸ್ಲಿಂ.! ಹೇಗೆ ಸಹೋದರ?” ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Hospital ಶವಾಗಾರದಲ್ಲಿ ಮಹಿಳೆಯ ಶವದ ಮೇಲೆ ಅನಾಚಾರ ; ಆರೋಪಿಯ ಬಂಧನ.!
ಘಟನೆಯ ವೇಳೆ ಯುವಕನ ಬೈಕಿನ ಕೀಲಿಯನ್ನು ಕೆಲವರು ತೆಗೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ. ಜೊತೆಗೆ, ಅವರು ಟ್ಯೂಷನ್ ಶಿಕ್ಷಕರಿಗೆ ಕರೆ ಮಾಡುವುದಾಗಿ ಹೇಳಿದ್ದು, ಹುಡುಗಿ (Girl) ಯ ಪೋಷಕರ ಫೋನ್ ಸಂಖ್ಯೆಯನ್ನು ಕೇಳಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಬಿಜ್ನೋರ್ ಪೊಲೀಸರು ತಕ್ಷಣ ಪ್ರತಿಕ್ರಿಯಿಸಿದ್ದು, “ನಗೀನಾ ದೇಹತ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಘಟನೆಯ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ” ಎಂದು ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
Wife : ಪ್ರೇಯಸಿ ಜೊತೆ ಶಾಪಿಂಗ್‌ಗೆ ತೆರಳಿದ್ದ ಪತಿ ; ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಾಗ ಏನಾಯ್ತು ನೋಡಿ..!
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವರು ಯುವತಿಗೆ (Girl) ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ, ಹಲವರು ಈ ಘಟನೆಯನ್ನು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತಂದ ಘಟನೆ ಎಂದು ಖಂಡಿಸಿದ್ದಾರೆ.
ವಿಡಿಯೋ :
◆बिजनौर-ट्यूशन पढ़ लौट रहे छात्र-छात्रा से बदसलूकी, हिंदू लड़के के साथ बाइक से जा रही मुस्लिम लड़की
◆ट्यूशन से पढ़ कर दोनों साथ रहे थे लौट, लड़के की बाइक की चाभी छीन किया प्रताड़ित
◆वीडियो सोशल मीडिया पर हुआ वायरल, थाना नगीना देहात रायपुर सादात क्षेत्र का मामला#Bijnor… pic.twitter.com/r0F4pStKE1
— भारत समाचार | Bharat Samachar (@bstvlive) October 13, 2025
ಪೊಲೀಸ್ ಪ್ರತಿಕ್ರಿಯೇ :
#BijnorPolice
थाना नगीना देहात क्षेत्र से संबंधित सोशल मीडिया पर वायरल वीडियो में पुलिस द्वारा की जा रही कार्यवाही के संबंध में क्षेत्राधिकारी नगीना, जनपद बिजनौर की बाइट।
#UPPolice@dgpup@Uppolice@adgzonebareilly@digmoradabad pic.twitter.com/D1s7WxCGtf— Bijnor Police (@bijnorpolice) October 13, 2025
ಜಾತಿ ಗಣತಿ ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ Teacher ಶವವಾಗಿ ಪತ್ತೆ ; ಕೊಲೆಯೋ.? ಆತ್ಮಹತ್ಯೆಯೋ.? ಎಂಬುದು ರಹಸ್ಯ.!

ಜನಸ್ಪಂದನ ನ್ಯೂಸ್, ಕೋಲಾರ : ಜಿಲ್ಲೆಯಲ್ಲಿ ಇದೀಗ ದುಃಖಕರ ಘಟನೆ ಒಂದು ಬೆಳಕಿಗೆ ಬಂದಿದೆ. ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕಾಗಿ ತೆರಳಿದ ಶಿಕ್ಷಕಿ (Teacher) ಯೊಬ್ಬರು ಎರಡು ದಿನಗಳಿಂದ ನಾಪತ್ತೆಯಾಗಿದ್ದರೆ, ಇದೀಗ ಅವರ ಶವ ಕೆಜಿಎಫ್ ತಾಲೂಕಿನ ಕೆರೆಯಲ್ಲಿ ಪತ್ತೆಯಾಗಿದೆ.
ಮೃತರನ್ನು ಅಖ್ತರ್ ಬೇಗಂ (53) ಎಂದು ಗುರುತಿಸಲಾಗಿದ್ದು, ಅವರು ಕೋಲಾರ ತಾಲೂಕಿನ ಬಿ.ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ (Teacher) ಯಾಗಿದ್ದರು. ಅಖ್ತರ್ ಬೇಗಂ ಅವರು ಕೋಲಾರದ ಮಹಾಲಕ್ಷ್ಮೀ ಬಡವಾಣೆಯಲ್ಲಿ ವಾಸವಾಗಿದ್ದರು.
Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!
ಮಾಹಿತಿಯ ಪ್ರಕಾರ, ಅವರು ನರಸಾಪುರ ಪ್ರದೇಶದಲ್ಲಿ ಜಾತಿ ಗಣತಿ ಸಮೀಕ್ಷೆ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಯ ಮುಗಿಸಿಕೊಂಡು ವಾಪಸ್ಸಾಗಬೇಕಿದ್ದ ಅವರು ಅಕ್ಟೋಬರ್ 13ರಂದು ಮನೆಗೆ ತಲುಪದೇ ನಾಪತ್ತೆಯಾಗಿದ್ದರು. ಕುಟುಂಬದವರು ಹಲವೆಡೆ ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಕೋಲಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಎರಡು ದಿನಗಳ ನಂತರ ಕೆಜಿಎಫ್ ತಾಲೂಕಿನ ಐಪಳ್ಳಿ ಕೆರೆಯಲ್ಲಿ ಮಹಿಳೆಯ (Teacher) ಶವ ತೇಲುತ್ತಿರುವುದು ಕಂಡುಬಂದಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ತೆಗೆಯಿಸಿ ಪರಿಶೀಲನೆ ನಡೆಸಿದ್ದು, ಅದು ಶಿಕ್ಷಕಿ (Teacher) ಅಖ್ತರ್ ಬೇಗಂ ಅವರದೇ ಎಂದು ಗುರುತಿಸಿದ್ದಾರೆ.
Train ಹಳಿ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು ; ಮುಂದೆನಾಯ್ತು.? ವಿಡಿಯೋ ನೋಡಿ.!
ಘಟನೆಯ ಬಗ್ಗೆ ಕೊಲೆ ಅಥವಾ ಆತ್ಮಹತ್ಯೆ ಎಂಬ ಅನುಮಾನ ವ್ಯಕ್ತವಾಗಿದೆ. ಪೋಲಿಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಜಾತಿ ಗಣತಿ ಸಮೀಕ್ಷೆ ಕಾರ್ಯದಲ್ಲಿ ಹೆಚ್ಚಾದ ಒತ್ತಡದಿಂದಾಗಿ ಅವರು (Teacher) ಮಾನಸಿಕ ಒತ್ತಡ ಅನುಭವಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಜಿಲ್ಲೆಯ ಶಿಕ್ಷಕ (Teacher) ರಲ್ಲಿ ಆತಂಕ ಉಂಟುಮಾಡಿದೆ. ಸಮೀಕ್ಷೆ ಕಾರ್ಯದಲ್ಲಿರುವ ಶಿಕ್ಷಕರ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತ ಚರ್ಚೆಯೂ ಮುಂದುವರಿದಿದೆ. ಕೋಲಾರ ಪೊಲೀಸ್ ಇಲಾಖೆಯವರು ಪ್ರಕರಣದ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.






