Tuesday, October 14, 2025

Janaspandhan News

HomeCrime NewsKhanapur : ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪ ; ಖಾನಾಪುರದಲ್ಲಿ ಬಾಲಕಿಯ ಆತ್ಮಹತ್ಯೆ.!
spot_img
spot_img
spot_img

Khanapur : ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪ ; ಖಾನಾಪುರದಲ್ಲಿ ಬಾಲಕಿಯ ಆತ್ಮಹತ್ಯೆ.!

- Advertisement -

ಜನಸ್ಪಂದನ ನ್ಯೂಸ್‌, ಖಾನಾಪುರ (ಬೆಳಗಾವಿ ಜಿಲ್ಲೆ) : ಪ್ರೀತಿಯ ಹೆಸರಿನಲ್ಲಿ ಯುವಕನಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ ಬಾಲಕಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿರುವುದು ಬೆಳಕಿಗೆ ಬಂದಿದೆ.

ಮೃತಳನ್ನು ಖಾನಾಪುರ (Khanapur) ತಾಲೂಕಿನ ದೇವಲತ್ತಿ ಗ್ರಾಮದ ಅಶ್ವಿನಿ (17) ಎಂದು ಗುರುತಿಸಲಾಗಿದೆ. ಸ್ಥಳೀಯ ಮೂಲಗಳ ಪ್ರಕಾರ, ನಂದಳ್ಳಿ ಗ್ರಾಮದ ರತನ (26) ಎಂಬ ಯುವಕ ಕಳೆದ ಒಂದು ವರ್ಷದಿಂದ ಆಕೆಯನ್ನು ಸಂಪರ್ಕಿಸಿ ಪ್ರೀತಿಯ ಹೆಸರಿನಲ್ಲಿ ಒತ್ತಡ ಹಾಕುತ್ತಿದ್ದಾನೆಂಬ ಮಾಹಿತಿ ದೊರಕಿದೆ.

KKRTC : ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಹುದ್ದೆಗಳ ನೇಮಕಾತಿ ; ಇಂದೇ ಅರ್ಜಿ ಸಲ್ಲಿಸಿ.!

ಆರೋಪಿಯು ಅನೇಕ ಬಾರಿ ಆಕೆಗೆ ಬೆದರಿಕೆ ಹಾಕಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನಸ್ಸಿಗೆ ಆಘಾತಗೊಂಡ ಅಶ್ವಿನಿ, ಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಡಿವೈಎಸ್‌ಪಿ ವಿರೇಶ ಹಿರೇಮಠ, ಖಾನಾಪುರ (Khanapur) ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಐಪಿಸಿ 306 (ಆತ್ಮಹತ್ಯೆಗೆ ಪ್ರೇರಣೆ), 354(D) (ಸ್ತ್ರೀಯರ ಮೇಲೆ ಕಿರುಕುಳ), 506 (ಬೆದರಿಕೆ) ಹಾಗೂ ಎಸ್‌ಸಿ/ಎಸ್‌ಟಿ ತಿದ್ದುಪಡಿ ಕಾಯ್ದೆ 2015 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

School : ಶಾಲೆಯೊಳಗೆ ಶಿಕ್ಷಕನ ಅನಾಚಾರ ವರ್ತನೆ ; ವಿದ್ಯಾರ್ಥಿಗಳಿಂದ ವಿಡಿಯೋ ವೈರಲ್.!

ಶವವನ್ನು ಶವಪರೀಕ್ಷೆಗಾಗಿ ಖಾನಾಪುರ (Khanapur) ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಖಾನಾಪುರ (Khanapur) ತಾಲೂಕಿನ ಸ್ಥಳೀಯರು ಈ ಘಟನೆ ಕುರಿತು ದುಃಖ ವ್ಯಕ್ತಪಡಿಸಿದ್ದು, ಯುವತಿಯ ಜೀವಹಾನಿಗೆ ಕಾರಣರಾದ ಆರೋಪಿಗೆ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Video : ಬಟ್ಟೆಗಳ ಮೇಲಿನ ಕಠಿಣ ಕಲೆಗಳ ನಿವಾರಣೆಗೆ ಮಹಿಳೆಯ ಅದ್ಭುತ ಟ್ರಿಕ್ ; ವಿಡಿಯೋ ವೈರಲ್.!

Video

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಅನೇಕ ವಿಚಿತ್ರ ಮತ್ತು ಕುತೂಹಲಕಾರಿ ವಿಡಿಯೋ (Video) ಗಳು ವೈರಲ್ ಆಗುತ್ತವೆ. ಕೆಲವು ವಿಡಿಯೋಗಳು ಮನರಂಜನೆ ನೀಡುತ್ತಿದ್ದರೆ, ಕೆಲವು ಹೊಸ ಪ್ರಯೋಗಗಳನ್ನು ಜನರಿಗೆ ಪರಿಚಯಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ವಿಡಿಯೋ (Video) ದಲ್ಲಿ ಒಬ್ಬ ಮಹಿಳೆ “ಪ್ಯಾರಸಿಟಮಾಲ್ ಮಾತ್ರೆ”ಗಳನ್ನು ಡಿಟರ್ಜೆಂಟ್ ಆಗಿ ಬಳಸುತ್ತಿರುವುದು ಜನರನ್ನು ಅಚ್ಚರಿಗೊಳಿಸಿದೆ.

Prediabetes : ನಿಮ್ಮಲ್ಲಿ ಬೆಳಿಗ್ಗೆ ಏಳುವಾಗ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರಿಕೆ ; ಅದು ಈ ರೋಗದ ಆರಂಭಿಕ ಸೂಚನೆ ಆಗಿರಬಹುದು.!

ಮಹಿಳೆ ತನ್ನ ತೊಳೆಯುವ ಯಂತ್ರದಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಹಾಕಿ ಬಟ್ಟೆ ತೊಳೆಯುತ್ತಿರುವ ದೃಶ್ಯಗಳು ಈಗ ನೆಟ್ಟಿಗರ ಗಮನ ಸೆಳೆದಿವೆ. ವಿಡಿಯೋ (Video) ದಲ್ಲಿ, ಅವಳು ಪ್ಯಾರಸಿಟಮಾಲ್ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ ಬಟ್ಟೆ ತೊಳೆಯುತ್ತಿದ್ದಾಳೆ ಮತ್ತು ಕೆಲವೇ ಕ್ಷಣಗಳಲ್ಲಿ ಬಟ್ಟೆಗಳು ಹೊಳೆಯುವಂತಾಗುತ್ತವೆ.

ಅತ್ಯಂತ ಆಶ್ಚರ್ಯಕರ ಅಂಶವೆಂದರೆ, ಹಳದಿ ಕಾಲರ್‌ ಹೊಂದಿದ್ದ ಬಿಳಿ ಶರ್ಟ್‌ನ ಕಲೆಗಳು ಸಂಪೂರ್ಣವಾಗಿ ಮಾಯವಾಗಿ ಹೊಸದಾಗಿ ಕಾಣಿಸುತ್ತವೆ.

Dam : ಜಲಾಶಯದ ನೀರಿನಲ್ಲಿ ಕೊಚ್ಚಿಹೋದ 6 ಜನರು ; ಮೂವರ ಶವ ಪತ್ತೆ.!

ಈ ವಿಡಿಯೋ (Video) ವನ್ನು @acharyaveda_ ಎಂಬ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ (Video) ವನ್ನು ಆಶ್ಚರ್ಯದಿಂದ ಹಂಚಿಕೊಳ್ಳುತ್ತಿದ್ದರೆ, ಕೆಲವರು ಇದನ್ನು “ಮ್ಯಾಜಿಕ್ ಟ್ರಿಕ್” ಎಂದು ಕರೆಯುತ್ತಿದ್ದಾರೆ.

ಆದರೆ ಇನ್ನೂ ಹಲವರು ಇದನ್ನು ವೈದ್ಯಕೀಯ ಔಷಧಿಗಳ ದುರುಪಯೋಗ ಎಂದು ತೀವ್ರವಾಗಿ ಟೀಕಿಸುತ್ತಿದ್ದಾರೆ.

ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯನ್ನು ಎಳೆದೊಯ್ದ Crocodile ; ವಿಡಿಯೋ ವೈರಲ್.!

ಒಬ್ಬ ಬಳಕೆದಾರ ಕಾಮೆಂಟ್‌ನಲ್ಲಿ ಬರೆದಿದ್ದಾನೆ, “ಇದು ನಿಜವಾಗಿಯೂ ಕೆಲಸ ಮಾಡಿದರೆ ನಾನು ಸಹ ಪ್ರಯತ್ನಿಸುತ್ತೇನೆ.” ಮತ್ತೊಬ್ಬನು ಹೇಳಿದ್ದಾನೆ, “ನಾನು ಇದನ್ನು ಪ್ರಯತ್ನಿಸಿದ್ದೇನೆ, ನಿಜವಾಗಿಯೂ ಬಟ್ಟೆ ಚೆನ್ನಾಗಿ ಹೊಳೆಯುತ್ತವೆ.”

ಆದರೆ ಕೆಲವು ವೈದ್ಯಕೀಯ ತಜ್ಞರು ಈ ರೀತಿಯ ಪ್ರಯೋಗಗಳು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಪ್ಯಾರಸಿಟಮಾಲ್ ಒಂದು ಔಷಧಿ ಆಗಿದ್ದು, ಅದನ್ನು ಇಂತಹ ಗೃಹೋಪಯೋಗಿ ಕೆಲಸಗಳಿಗೆ ಬಳಸುವುದು ಸರಿಯಲ್ಲ ಎಂದು ಅವರ ಅಭಿಪ್ರಾಯ.

School ದಸರಾ ರಜೆ ವಿಸ್ತರಣೆ ; ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ ಹೀಗಿದೆ.!

ಈ ವಿಡಿಯೋ (Video) ಇಂಟರ್ನೆಟ್‌ನಲ್ಲಿ ದಿನದಿಂದ ದಿನಕ್ಕೆ ವೈರಲ್ ಆಗುತ್ತಿದ್ದರೂ, ತಜ್ಞರು ಮಾತ್ರ ಜನರಿಗೆ ಇಂತಹ ಸಲಹೆಗಳನ್ನು ಮತ್ತು ಅದರ ಪರಿಣಾಮಗಳನ್ನು ತಿಳಿದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಬಟ್ಟೆಗಳ ಮೇಲಿನ ಕಠಿಣ ಕಲೆಗಳ ನಿವಾರಣೆಗೆ ಮಹಿಳೆಯ ಅದ್ಭುತ ಟ್ರಿಕ್ ವಿಡಿಯೋ (Video) :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments