ಜನಸ್ಪಂದನ ನ್ಯೂಸ್, ಡೆಸ್ಕ್ : ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ (Police) ಮೇಲೆಯೇ ಗಂಭೀರ ಆರೋಪ ಕೇಳಿಬಂದಿರುವ ಘಟನೆ ತಮಿಳುನಾಡಿನ ತಿರುವಣಮಲೈ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹಣ್ಣು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 25 ವರ್ಷದ ಯುವತಿಯೊಬ್ಬಳ ಮೇಲೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಮೇಲೆ ಅ*ತ್ಯಾ*ಚಾರ ಆರೋಪ ಹೊರಬಿದ್ದಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಹಣ್ಣು ಮಾರಾಟ ಮಾಡುತ್ತಿದ್ದ ಯುವತಿ :
ಮೂಲತಃ ಆಂಧ್ರಪ್ರದೇಶದವರಾದ ಸಂತ್ರಸ್ತ ಯುವತಿ ತನ್ನ ತಾಯಿಯ ಜೊತೆ ತಮಿಳುನಾಡಿನ ತಿರುವಣಮಲೈಗೆ ಹಣ್ಣಿನ ಮಾರಾಟಕ್ಕಾಗಿ ಬಂದಿದ್ದರು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಕಣ್ಣಿಗೆ ಬಿದ್ದಿದ್ದು, ಆಗ ಅವರು ಬಲವಂತವಾಗಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬುದು ದೂರು ಕೇಳಿ ಬಂದಿದೆ.
25 ವರ್ಷದ ಯುವತಿಯ ಮೇಲಿನ ಅ*ತ್ಯಾ*ಚಾರ ವಿಚಾರ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಾದ ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ಎಂಬುವರನ್ನು ಬಂಧಿಸಿದ್ದಾರೆ.
“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!
ಪೊಲೀಸರು ಅಮಾನತು – ಕಠಿಣ ಕ್ರಮದ ಭರವಸೆ :
ಘಟನೆಯ ತೀವ್ರತೆಯನ್ನು ಮನಗಂಡ ಪೊಲೀಸ್ (Police) ಇಲಾಖೆ, ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿದ್ದು, ಕಾನೂನು ಪ್ರಕಾರ ಗರಿಷ್ಠ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಜಕೀಯ ವಲಯದಿಂದ ಖಂಡನೆ :
ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ರಾಜಕೀಯ ನಾಯಕರೂ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪಾಡಿ ಕೆ. ಪಳನಿಸ್ವಾಮಿ, “ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ (Police) ಇಂತಹ ಘಟನೆ ನಡೆಸಿರುವುದು ತಮಿಳುನಾಡಿನ ಕಾನೂನು-ಸುವ್ಯವಸ್ಥೆಗೆ ಕಪ್ಪು ಕಲೆ. ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ” ಎಂದು ಹೇಳಿದರು.
“ಬಕೆಟ್, ಮಗ್ ಕೊಳಕಾಗಿವೆಯೇ? ಕಡಿಮೆ ಖರ್ಚಿನಲ್ಲಿ ಕೆಲವೇ ನಿಮಿಷಗಳಲ್ಲಿ ಹೀಗೆ Clean ಮಾಡಿ.!”
ಜನರಿಂದ ಭಾರಿ ಆಕ್ರೋಶ :
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ವಿರುದ್ಧವಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, “ಜನರ ಭದ್ರತೆಯ ಹೊಣೆ ಹೊತ್ತಿರುವ ಅಧಿಕಾರಿಗಳೇ (Police) ಇಂತಹ ವರ್ತನೆ ತೋರಿದರೆ ಮಹಿಳೆಯರು ಹೇಗೆ ಸುರಕ್ಷಿತರಾಗುತ್ತಾರೆ?” ಎಂಬ ಪ್ರಶ್ನೆ ಎದ್ದಿದೆ. ತಿರುವಣಮಲೈಯಂತಹ ಧಾರ್ಮಿಕ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿರುವುದು ಜನರಲ್ಲಿ ಅಚ್ಚರಿ ಹಾಗೂ ಆತಂಕವನ್ನು ಉಂಟುಮಾಡಿದೆ.
SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಜನಸ್ಪಂದನ ನ್ಯೂಸ್, ನೌಕರಿ : Staff Selection Commission (SSC) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಮಟ್ಟದಲ್ಲಿ ಒಟ್ಟು 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತು ಹುದ್ದೆಗಳ ವಿವರ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.
RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಇಲಾಖೆ ಹೆಸರು :
- ಸಿಬ್ಬಂದಿ ಆಯ್ಕೆ ಆಯೋಗ (SSC).
ಒಟ್ಟು ಹುದ್ದೆಗಳ ಸಂಖ್ಯೆ :
- 509 ಹುದ್ದೆಗಳು.
ಹುದ್ದೆಗಳ ಹೆಸರು :
- ಹೆಡ್ ಕಾನ್ಸ್‌ಟೇಬಲ್ (ಪುರುಷ) : 341 ಹುದ್ದೆಗಳು.
- ಹೆಡ್ ಕಾನ್ಸ್‌ಟೇಬಲ್ (ಮಹಿಳೆ) : 168 ಹುದ್ದೆಗಳು.
Scam Alert : ಭಾರತದಲ್ಲಿ ಹಗರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಟಾಪ್ 10 ಫೋನ್ ನಂಬರುಗಳು.!
ಉದ್ಯೋಗ ಸ್ಥಳ :
- ಅಖಿಲ ಭಾರತ.
ಅಪ್ಲಿಕೇಶನ್ ಮೋಡ್ :
- ಆನ್‌ಲೈನ್.
SSC ವಯಸ್ಸಿನ ಮಿತಿ :
- ಕನಿಷ್ಠ : 18 ವರ್ಷ.
- ಗರಿಷ್ಠ : 25 ವರ್ಷ.
ವಯೋಮಿತಿ ಸಡಿಲಿಕೆ :
- OBC ಅಭ್ಯರ್ಥಿಗಳಿಗೆ : 3 ವರ್ಷಗಳು.
- SC/ST ಅಭ್ಯರ್ಥಿಗಳಿಗೆ : 5 ವರ್ಷಗಳು.
- PWD (UR/EWS) ಅಭ್ಯರ್ಥಿಗಳಿಗೆ : 10 ವರ್ಷಗಳು.
- PWD (OBC) ಅಭ್ಯರ್ಥಿಗಳಿಗೆ : 13 ವರ್ಷಗಳು.
- PWD (SC/ST) ಅಭ್ಯರ್ಥಿಗಳಿಗೆ : 15 ವರ್ಷಗಳು
Minor ಬಾಲಕಿಯರ ಶೋಷಣೆ ಪ್ರಕರಣ ಬಯಲು ; ಇಬ್ಬರು ಬಂಧನ, ಬಾಲಕಿ ರಕ್ಷಣೆ.!
SSC ಶೈಕ್ಷಣಿಕ ಅರ್ಹತೆ :
- ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್ ಆಗಿರಬೇಕು.
ವೇತನ ಶ್ರೇಣಿ:
- ರೂ.25,500 – ರೂ.81,100 (ಪ್ರತಿ ತಿಂಗಳು)
ಅರ್ಜಿ ಶುಲ್ಕ :
- SC/ST/ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು : ಶುಲ್ಕ ವಿನಾಯಿತಿ
- ಇತರ ಅಭ್ಯರ್ಥಿಗಳು : ರೂ.100/-
ಆಯ್ಕೆ ಪ್ರಕ್ರಿಯೆ :
- ಕಂಪ್ಯೂಟರ್ ಆಧಾರಿತ ಪರೀಕ್ಷೆ.
- ದೈಹಿಕ ಸಹಿಷ್ಣುತೆ ಹಾಗೂ ಅಳತೆ ಪರೀಕ್ಷೆ.
- ಕಂಪ್ಯೂಟರ್‌ನಲ್ಲಿ ಟೈಪಿಂಗ್ ಟೆಸ್ಟ್.
- ಕಂಪ್ಯೂಟರ್ ಫಾರ್ಮ್ಯಾಟಿಂಗ್ ಟೆಸ್ಟ್.
SSC : 3073 ಸಬ್-ಇನ್‌ಸ್ಪೆಕ್ಟರ್ (GD and Executive) ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ (SSC) ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
- ಫಾರ್ಮ್‌ನಲ್ಲಿ ಸರಿಯಾದ ಮಾಹಿತಿಯನ್ನು ನಮೂದಿಸಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ಅರ್ಜಿ ಸಲ್ಲಿಸುವ ಮೊದಲು ಮತ್ತೊಮ್ಮೆ ಪರಿಶೀಲಿಸಿ.
- ಸಲ್ಲಿಸಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ : 29 ಸೆಪ್ಟೆಂಬರ್ 2025.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 ಅಕ್ಟೋಬರ್ 2025.
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ PDF – ಇಲ್ಲಿ ಕ್ಲಿಕ್ ಮಾಡಿ.
- ಆನ್‌ಲೈನ್ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್‌ಸೈಟ್ : ssc.gov.in