Tuesday, September 16, 2025

Janaspandhan News

HomeCrime Newsಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!
spot_img
spot_img
spot_img

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರಪ್ರದೇಶದ ಛುತ್ಮಲ್ಪುರದ ಅಲವಲ್ಪುರ ರಸ್ತೆಯ ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ನಡೆದಿದೆ ಎಂಬ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಗಿರಣಿಯ ಮಾಲೀಕನಾದ ವೃದ್ಧನ ವಿರುದ್ಧ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ಎಸಗಿರುವ ಹಿನ್ನಲೆಯಲ್ಲಿ ಪೋಕ್ಸೊ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಮಾಹಿತಿಯ ಪ್ರಕಾರ, ಬಾಲಕಿ ಹಿಟ್ಟು ಗಿರಣಿಗೆ ಹಿಟ್ಟು ಬೀಸಲು ಹೋಗಿದ್ದ ವೇಳೆ, ಗಿರಣಿಯ ಮಾಲೀಕ ಆಕೆಯನ್ನು ಒಳಗೆ ಕರೆದೊಯ್ದು ಅಸಭ್ಯ ಕೃತ್ಯಕ್ಕೆ (Sexual-Assault) ಯತ್ನಿಸಿದ್ದಾನೆ. ಹುಡುಗಿಯ ಕಿರುಚಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಥಳಿಸಿದ್ದಾರೆ.

ಆದರೆ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ನಡೆಯುತ್ತಿರುವ ಘಟನೆಯ ದೃಶ್ಯಾವಳಿಯನ್ನು ಹತ್ತಿರದವರು  ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ಘಟನೆ ತಿಳಿದ ತಕ್ಷಣ ಬಾಲಕಿಯ ಕುಟುಂಬವು ಪೊಲೀಸರಿಗೆ ದೂರು ನೀಡಿದೆ. ಸ್ಥಳೀಯ ಠಾಣಾಧಿಕಾರಿ ವಿನಯ್ ಶರ್ಮಾ ಅವರ ಪ್ರಕಾರ, ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲು ಸೆಪ್ಟೆಂಬರ್ 9ರಂದು ಸಮಯ ನಿಗದಿ ಮಾಡಲಾಗಿತ್ತು. ಪ್ರಸ್ತುತ ಆರೋಪಿಯಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Sexual-Assault) ದ ವಿಡಿಯೋ :


Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!‌

chest-pain

ಜನಸ್ಪಂದನ ನ್ಯೂಸ್‌, ಆರೋಗ್ಯ : ಎದೆನೋವು (Chest-pain) ಬಂದಾಗ ಎಷ್ಟೋ ಜನರು ತಕ್ಷಣ ಭಯಗೊಳ್ಳುತ್ತಾರೆ. ಅದು ಸಾಮಾನ್ಯ ಗ್ಯಾಸ್ ಸಮಸ್ಯೆಯೋ ಅಥವಾ ಹೃದಯಾಘಾತದ ಮುನ್ಸೂಚನೆಯೋ ಎಂಬ ಗೊಂದಲ ಉಂಟಾಗುತ್ತದೆ.

ಇವುಗಳ ಕೆಲವು ಲಕ್ಷಣಗಳು ಒಂದೇ ರೀತಿಯಂತಿದ್ದರೂ, ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಹುದು.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಗ್ಯಾಸ್ ಎದೆ ನೋವಿನ (Chest-pain) ಲಕ್ಷಣಗಳು :
  • ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಆರಂಭವಾಗುತ್ತದೆ.
  • ನೋವು ಒಂದೇ ಸ್ಥಳದಲ್ಲಿ ಇರುವುದು ಕಡಿಮೆ; ಕೆಲವೊಮ್ಮೆ ಹೊಟ್ಟೆ, ಹೃದಯ ಭಾಗ ಅಥವಾ ಬೆನ್ನಿಗೆ ಹರಡುತ್ತದೆ.
  • ಊಟದ ನಂತರ ಅಥವಾ ಅಜೀರ್ಣದಿಂದಾಗಿ ನೋವು ತೀವ್ರವಾಗಬಹುದು.
  • ಗ್ಯಾಸ್ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ನೋವು ಕಡಿಮೆಯಾಗುತ್ತದೆ.
  • ತೀವ್ರತೆ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಇರಬಹುದು.
  • ಹೊಟ್ಟೆಗೆ ಒತ್ತಡ ಬಂದಾಗ ಅಥವಾ ಚಲನೆಯಿಂದ ನೋವು ಹೆಚ್ಚಾಗುವ ಸಾಧ್ಯತೆ ಇದೆ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೃದಯ ಎದೆ ನೋವಿನ (Chest-pain) ಲಕ್ಷಣಗಳು :
  • ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾದಾಗ ಉಂಟಾಗುತ್ತದೆ.
  • ಮುಖ್ಯವಾಗಿ ಎದೆಯ ಮಧ್ಯಭಾಗ ಅಥವಾ ಎಡಭಾಗದಲ್ಲಿ ಕಾಣಿಸುತ್ತದೆ.
  • ಎದೆ ನೋವು (Chest-pain) ತೀವ್ರ ಮತ್ತು ನಿರಂತರವಾಗಿರುತ್ತದೆ.
  • ಭುಜ, ಕುತ್ತಿಗೆ, ದವಡೆ ಅಥವಾ ಎಡಗೈಗೆ ಹರಡುವ ಸಾಧ್ಯತೆ ಇದೆ.
  • ದೈಹಿಕ ಪರಿಶ್ರಮ, ಒತ್ತಡ ಅಥವಾ ಆತಂಕದಿಂದ ನೋವು ಹೆಚ್ಚಾಗಬಹುದು.
  • ವಿಶ್ರಾಂತಿ ಅಥವಾ ವೈದ್ಯಕೀಯ ಔಷಧಿಯಿಂದ ಮಾತ್ರ ಕಡಿಮೆಯಾಗುತ್ತದೆ.
  • ಉಸಿರಾಟದ ತೊಂದರೆ, ಶೀತ ಬೆವರುವುದು, ತಲೆತಿರುಗುವುದು, ವಾಕರಿಕೆ ಮುಂತಾದ ಹೆಚ್ಚುವರಿ ಲಕ್ಷಣಗಳೂ ಕಾಣಿಸಬಹುದು.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಮುಖ್ಯ ವ್ಯತ್ಯಾಸಗಳು :
  • ನೋವಿನ ಸ್ಥಳ : ಗ್ಯಾಸ್ ನೋವು ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ, ಹೃದಯ ನೋವು ಎದೆಯ ಮಧ್ಯ/ಎಡಭಾಗದಲ್ಲಿ.
  • ನೋವಿನ ಸ್ವರೂಪ : ಗ್ಯಾಸ್ ನೋವು ಬಂದು ಹೋಗುವ ಸ್ವಭಾವದದ್ದು, ಹೃದಯ ನೋವು ನಿರಂತರ.
  • ನೋವು ಕಡಿಮೆಯಾಗುವ ವಿಧಾನ : ಗ್ಯಾಸ್ ಹಾದುಹೋದ ನಂತರ ನೋವು ಕಡಿಮೆಯಾಗುತ್ತದೆ, ಆದರೆ ಹೃದಯ ನೋವಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ.
  • ಇತರ ಲಕ್ಷಣಗಳು : ಹೃದಯ ನೋವಿಗೆ ಉಸಿರಾಟ ತೊಂದರೆ, ಶೀತ ಬೆವರು ಮುಂತಾದ ತೀವ್ರ ಲಕ್ಷಣಗಳು ಇರುತ್ತವೆ; ಗ್ಯಾಸ್ ನೋವಿಗೆ ಇವು ಇರುವುದಿಲ್ಲ.

👉 ಎದೆನೋವು (Chest-pain) ತೀವ್ರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments