Tuesday, September 16, 2025

Janaspandhan News

HomeHealth & FitnessCardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
spot_img
spot_img
spot_img

Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಶದಲ್ಲಿ ಬಹುತೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಕೆಲವರಿಗೆ ಬಲವಾದ ಚಹಾ ಇಷ್ಟವಿದ್ದರೆ, ಇನ್ನು ಕೆಲವರು ಶುಂಠಿ ಚಹಾ, ಮಸಾಲೆ ಚಹಾ ಅಥವಾ ಏಲಕ್ಕಿ (Cardamom) ಚಹಾವನ್ನು ಆಯ್ಕೆ ಮಾಡುತ್ತಾರೆ.

ವಿಶೇಷವಾಗಿ ಏಲಕ್ಕಿ (Cardamom) ಚಹಾ ತನ್ನ ಸುವಾಸನೆ ಮತ್ತು ರುಚಿಯಿಂದ ಜನಪ್ರಿಯವಾಗಿದ್ದು, ಹಲವರು ಇದನ್ನು ಆರೋಗ್ಯಕ್ಕೆ ಸಹ ಉತ್ತಮವೆಂದು ಪರಿಗಣಿಸುತ್ತಾರೆ. ಆದರೆ, ಪ್ರತಿಯೊಬ್ಬರ ದೇಹದ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ಕೆಲ ಆರೋಗ್ಯ ಸಮಸ್ಯೆಗಳಿದ್ದವರಿಗೆ ಏಲಕ್ಕಿ (Cardamom) ಚಹಾ ಅಪಾಯಕಾರಿಯಾಗಬಹುದು.

Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್‌ ಸಾವು.!
ಹಾಗಾದ್ರೆ ಯಾರು ಈ ಏಲಕ್ಕಿ (Cardamom) ಚಹಾ ಕುಡಿಯಬಾರದು.?
ಪಿತ್ತಕೋಶದ ಸಮಸ್ಯೆ  :

ಪಿತ್ತಗಲ್ಲು (Gallstone) ಸಮಸ್ಯೆ ಇರುವವರು ಏಲಕ್ಕಿ ಚಹಾವನ್ನು ತಪ್ಪಿಸಿಕೊಳ್ಳುವುದು ಉತ್ತಮ. ಏಲಕ್ಕಿ ಪಿತ್ತಕೋಶವನ್ನು ಕೆರಳಿಸುವುದರಿಂದ ನೋವು ಮತ್ತು ಅಸಹನೆ ಹೆಚ್ಚುವ ಸಾಧ್ಯತೆ ಇದೆ.

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು :

ಏಲಕ್ಕಿಯ ಅಧಿಕ ಸೇವನೆ ಗರ್ಭಿಣಿಯರಿಗೆ ಹಾನಿಕಾರಕವಾಗಬಹುದು. ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ಅದೇ ರೀತಿ, ಹಾಲುಣಿಸುವ ತಾಯಂದಿರೂ ಹೆಚ್ಚಾಗಿ ಏಲಕ್ಕಿ ಸೇವಿಸುವುದನ್ನು ತಪ್ಪಿಸಿಕೊಳ್ಳುವುದು ಉತ್ತಮ.

Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
ಮಧುಮೇಹ ಸಮಸ್ಯೆಗಳು :

ಸಂಶೋಧನೆಯ ಪ್ರಕಾರ, ಏಲಕ್ಕಿ (Cardamom) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಮಧುಮೇಹಿಗಳಿಗೆ ಇದು ಸಹಾಯಕವಾಗಬಹುದು. ಆದರೆ, ಸಕ್ಕರೆ ನಿಯಂತ್ರಿಸಲು ಈಗಾಗಲೇ ಔಷಧಿ ಸೇವಿಸುತ್ತಿರುವವರು ಹೆಚ್ಚು ಏಲಕ್ಕಿ ಚಹಾವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅತಿಯಾಗಿ ಕುಸಿಯುವ (Hypoglycemia) ಅಪಾಯವಿದೆ.

ಆದ್ದರಿಂದ, ಏಲಕ್ಕಿ ಚಹಾ ಎಲ್ಲರಿಗೂ ಒಳ್ಳೆಯದಾದರೂ, ಕೆಲವರಿಗೆ ಇದು ಅಪಾಯಕಾರಿಯಾಗಬಹುದು. ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆಯೊಂದಿಗೆ ಮಾತ್ರ ಇದರ ಸೇವನೆ ಮಾಡುವುದು ಒಳಿತು.


PGCIL ಯಲ್ಲಿ ಮೇಲ್ವಿಚಾರಕ & ಇತರೆ ಸೇರಿ 1543 ಹುದ್ದೆಗಳಿಗೆ ನೇಮಕಾತಿ.!

pgcil

ಜನಸ್ಪಂದನ ನ್ಯೂಸ್‌, ನೌಕರಿ : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ವತಿಯಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (PGCIL) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Belagavi ಸಮೀಪ ಬಸ್ ಪಲ್ಟಿ : ಇಬ್ಬರ ದುರ್ಮರಣ, 9 ಮಂದಿಗೆ ಗಾಯ.!
ಮಾಹಿತಿ :
  • ಸಂಸ್ಥೆ ಹೆಸರು :  Power Grid Corporation of India Limited (PGCIL).
  • ಒಟ್ಟು ಹುದ್ದೆಗಳ ಸಂಖ್ಯೆ :  1543.
  • ಹುದ್ದೆಗಳ ಹೆಸರು : Field Engineer & Supervisor.
  • ಉದ್ಯೋಗ ಸ್ಥಳ : All India.
  • ಅರ್ಜಿ ಸಲ್ಲಿಸುವ ವಿಧಾನ : Online.
ಸಂಬಳದ ವಿವರ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.23,000 – ರೂ.1,20,000/- ರಷ್ಟು ಮಾಸಿಕ ಸಂಬಳ ನೀಡಲಾಗುವುದು.
ವಯೋಮಿತಿ :
  • ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಗರಿಷ್ಠ 29 ವರ್ಷ ಮೀರಿರಬಾರದು.
ವಿದ್ಯಾರ್ಹತೆ :
  • ಅರ್ಹ ಅಭ್ಯರ್ಥಿಗಳು BE / B.Tech / B.Sc / Diploma (Civil, Architecture, Electrical, IT, Electronics, Telecommunication) ವಿಭಾಗದಲ್ಲಿ ವಿದ್ಯಾರ್ಹತೆ ಹೊಂದಿರಬೇಕು.
ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
ಅರ್ಜಿ ಶುಲ್ಕ :

👉 ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ (PGCIL) ವೆಬ್‌ಸೈಟ್‌ಗೆ ಭೇಟಿ ನೀಡಿ.
  2. Notification (PDF) ಅನ್ನು ಡೌನ್‌ಲೋಡ್ ಮಾಡಿ ಹಾಗೂ ಎಚ್ಚರಿಕೆಯಿಂದ ಓದಿ.
  3. Apply Online ಲಿಂಕ್ ಕ್ಲಿಕ್ ಮಾಡಿ.
  4. ಅರ್ಜಿ ಫಾರ್ಮ್‌ನಲ್ಲಿ ಅಗತ್ಯ ವಿವರಗಳನ್ನು ಸರಿಯಾಗಿ ನಮೂದಿಸಿ.
  5. ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
  6. ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದಲ್ಲಿ ಮಾತ್ರ).
  7. ಅರ್ಜಿಯನ್ನು Submit ಮಾಡಿ ಮತ್ತು ಒಂದು ಪ್ರತಿಯನ್ನು Print ಮಾಡಿಕೊಂಡಿಡಿ.
ವಸತಿ ನಿಲಯದ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ Student.!
ಪ್ರಮುಖ ದಿನಾಂಕಗಳು :
  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 27-08-2025.
  • ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ : 17-09-2025.
ಪ್ರಮುಖ ಲಿಂಕ್‌ಗಳು :
  • 👉 ಅಧಿಕೃತ ಅಧಿಸೂಚನೆ PDF – [Click Here]
  • 👉 Apply Online – [Click Here]
- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments