Sunday, September 8, 2024
spot_img
spot_img
spot_img
spot_img
spot_img
spot_img
spot_img

State news : ಸಂಸದ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಚಾಮರಾಜನಗರ : ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ವಿ. ಶ್ರೀನಿವಾಸ ಪ್ರಸಾದ್ ವಯೋಸಹಜ ಖಾಯಿಲೆಗಳಿಂದಾಗಿ ಸೋಮವಾರ ಮುಂಜಾನೆ 1.30 ಗಂಟೆ ಸುಮಾರಿಗೆ ನಿಧನರಾದರು.

5 ದಶಕಗಳ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿದ್ದು, ಮಾರ್ಚ್ ನಲ್ಲಿ ನಿವೃತ್ತಿ ಘೋಷಿಸಿದ್ದರು.

ಇದನ್ನು ಓದಿ : ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ‌ ಸೋಂಕು ಸೇರಿದಂತೆ ಇತರೆ ರೋಗ ಸಂಬಂಧದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.‌ ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಜಯಲಕ್ಷ್ಮಿಪುರಂನ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಗುತ್ತಿದ್ದು, ಬೆಳಿಗ್ಗೆ 8ರ ನಂತರ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ.

1974ರಲ್ಲಿ ಕೆ.ಆರ್. ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಮೂಲಕ ರಾಜಕಾರಣ ಪ್ರವೇಶಿಸಿದ್ದ ಪ್ರಸಾದ್ ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.

ಇದನ್ನು ಓದಿ : Video : ಸೇತುವೆಯಿಂದ 20 ಅಡಿ ಕೆಳಗೆ ಬಿದ್ದು ಛಿದ್ರ ಛಿದ್ರವಾದ ಕಾರು ; ಮೂವರು ಭಾರತೀಯ ಯುವತಿಯರ ಸಾ*ವು ; ಓರ್ವ ಗಂಭೀರ.!

1999ರಿಂದ 2004ರವರೆಗೆ ಕೇಂದ್ರದಲ್ಲಿ ಆಹಾರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img