Wednesday, September 17, 2025

Janaspandhan News

HomeViral VideoCoaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!
spot_img
spot_img
spot_img

Coaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಿಹಾರದ ಮಧುಬನಿ ಜಿಲ್ಲೆಯ ಜೈನಗರ ಪ್ರದೇಶದಲ್ಲಿ ಕೋಚಿಂಗ್ (Coaching) ಸೆಂಟರ್‌ನಲ್ಲಿ ನಡೆದ ಅಸಭ್ಯ ವರ್ತನೆಯ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಕೋಚಿಂಗ್ (Coaching) ಸೆಂಟರ್‌ನೊಬ್ಬ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಾಣಿಸಿಕೊಂಡಿದೆ.

ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!

ಈ ಘಟನೆ ಜೈನಗರದ ಭೇಲ್ವಾ ಚೌಕ್ ಸಮೀಪದ ಕೋಚಿಂಗ್ (Coaching) ಸಂಸ್ಥೆಯಲ್ಲಿ ನಡೆದಿದ್ದು, ಆರೋಪಿಯ ಹೆಸರನ್ನು ರಾಕೇಶ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಇದೇ ವ್ಯಕ್ತಿಯ ಮೇಲೆ ಇದೇ ರೀತಿಯ ಆರೋಪ ಮೊದಲು ಕೂಡ ಕೇಳಿಬಂದಿದೆ.

ಸ್ಥಳೀಯರು ಆರೋಪಿಯನ್ನು ತಕ್ಷಣ ಬಂಧಿಸುವಂತೆ ಹಾಗೂ ಸಂಬಂಧಿಸಿದ ತರಬೇತಿ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪೋಷಕರು ಮಕ್ಕಳಿಗೆ ಜಾಗೃತಿ ಮೂಡಿಸಿ, ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”

ಪೊಲೀಸರು ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಸ್ತುತ ಆರೋಪಿಯು ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಸಂಬಂಧಿತ ಕೋಚಿಂಗ್ (Coaching) ಸೆಂಟರ್ ತನ್ನ ಸ್ಥಳವನ್ನು ಬದಲಾಯಿಸಿರುವುದಾಗಿ ತಿಳಿದುಬಂದಿದೆ.

ಕೋಚಿಂಗ್ (Coaching) ಸೆಂಟರ್‌ನಲ್ಲಿ ನಡೆದ ಅಸಭ್ಯ ವರ್ತನೆಯ ವಿಡಿಯೋ :


ಬೆಳಿಗ್ಗೆ 1 ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಸಿಗುವ ಅದ್ಭುತ ಪ್ರಯೋಜನಗಳು.!

ABC Juice

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೆಳಿಗ್ಗೆ ಒಂದು ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಎಷ್ಟೊಂದು ಅದ್ಭುತ ಪ್ರಯೋಜನಗಳು ಸಿಗುತ್ತವೇ ಗೊತ್ತಾ.?. ಬನ್ನಿ ಆ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ.!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಂದ ABC ಜ್ಯೂಸ್ (Apple, Beetroot, Carrot) ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೇಬು, ಬೀಟ್‌ರೂಟ್ ಮತ್ತು ಕ್ಯಾರೆಟ್ ಮಿಶ್ರಣದಿಂದ ತಯಾರಾಗುವ ಈ ಪಾನೀಯವು ರುಚಿಕರವಾಗಿರುವುದರ ಜೊತೆಗೆ ಪೋಷಕಾಂಶಗಳಿಂದ ಕೂಡಿದೆ.

ಇದನ್ನು ಓದಿ : ISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ರೀತಿಯ ಆರೋಗ್ಯ ಲಾಭಗಳು ದೊರೆಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಯಾವ್ಯಾವ ಪ್ರಯೋಜಗಳು ಸಿಗುತ್ತವೆ ಅಂತ ತಿಳಿಯೋಣ.

ರೋಗನಿರೋಧಕ ಶಕ್ತಿ :

ಸೇಬು ಮತ್ತು ಬೀಟ್‌ರೂಟ್‌ನಲ್ಲಿರುವ ವಿಟಮಿನ್ C ಹಾಗೂ ಕ್ಯಾರೆಟ್‌ನಲ್ಲಿನ ಬೇಟಾ-ಕ್ಯಾರೋಟಿನ್ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನು ಓದಿ : ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಜೀರ್ಣಕ್ರಿಯೆ ಸುಧಾರಣೆ :

ABC ಜ್ಯೂಸ್‌ನಲ್ಲಿ ಇರುವ ಹೆಚ್ಚಿನ ಫೈಬರ್ ಜೀರ್ಣಾಂಗದ ಚಟುವಟಿಕೆಯನ್ನು ಉತ್ತೇಜಿಸಿ ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟುತ್ತದೆ. ನಿಯಮಿತ ಸೇವನೆ ಕರುಳಿನ ಚಲನೆ ಸುಗಮಗೊಳಿಸುತ್ತದೆ.

ಚರ್ಮದ ಆರೋಗ್ಯಕ್ಕೆ ಲಾಭಕಾರಿ :

ವಿಟಮಿನ್ A ಮತ್ತು C ಜೊತೆಗೆ ಆಂಟಿ-ಆಕ್ಸಿಡೆಂಟ್‌ಗಳು ಚರ್ಮಕ್ಕೆ ಹೊಳಪು ನೀಡುತ್ತವೆ, ವಯಸ್ಸಿನ ಲಕ್ಷಣಗಳನ್ನು ತಗ್ಗಿಸುತ್ತವೆ ಹಾಗೂ ಮೊಡವೆ-ಸುಕ್ಕುಗಳನ್ನು ಕಡಿಮೆ ಮಾಡುತ್ತವೆ.

ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ದೇಹದ ನಿರ್ವಿಷೀಕರಣ :

ABC ಜ್ಯೂಸ್ ಯಕೃತ್ತಿನ ಕಾರ್ಯವನ್ನು ಬೆಂಬಲಿಸಿ ಜೀರ್ಣಾಂಗ ವ್ಯವಸ್ಥೆಯಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕರಿಸುತ್ತದೆ. ಇದರಿಂದ ದೇಹ ಶುದ್ಧವಾಗಿರಲು ಸಹಾಯವಾಗುತ್ತದೆ.

ತೂಕ ನಿಯಂತ್ರಣ :

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವುದರಿಂದ ಹೊಟ್ಟೆ ತುಂಬಿದ ಭಾವನೆ ದೀರ್ಘಕಾಲ ಉಳಿಯುತ್ತದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆಮಾಡಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ತೂಕ ಇಳಿಕೆಗೆ ನೆರವಾಗುತ್ತದೆ.

ಇದನ್ನು ಓದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

ಆರೋಗ್ಯ ತಜ್ಞರ ಸಲಹೆ ಪ್ರಕಾರ, ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹದ ಸಮಗ್ರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು.

ABC juice : ABC juice is a simple yet effective way to infuse nutrients into your diet. Although it is not new to the market, it has recently gained popularity, mainly because it may help fight cancer.

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments