ಜನಸ್ಪಂದನ ನ್ಯೂಸ್, ಡೆಸ್ಕ್ : ವಾಹನ ತಪಾಸಣೆ ವೇಳೆ ಓರ್ವ ಮಹಿಳೆಯೊಂದಿಗೆ ಪೊಲೀಸ (Police) ರು ಅನುಚಿವಾಗಿ ವರ್ತಿಸಿರುವ ಘಟನೆ ನಡೆದಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ ಮೋತಿಹಾರಿಯಲ್ಲಿ ನಡೆದ ವಾಹನ ತಪಾಸಣೆ ಸಂದರ್ಭದಲ್ಲಿ ಪೊಲೀಸ (Police) ರು ಮಹಿಳೆಯೊಂದಿಗೆ ಅನಾಚಾರ ವರ್ತನೆಯ ಘಟನೆಗೆ ಸಂಬಂಧಿಸಿದಂತೆ ಚಂಪಾರಣ್ ರೇಂಜ್ ಡಿಐಜಿ ಹರ್ ಕಿಶೋರ್ ರೈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ಅವರು ಛತೌನಿ ಪೊಲೀಸ್ ಠಾಣೆಯ ಐದು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.
Yallamma : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!
ಘಟನೆ ಭಾನುವಾರ ರಾತ್ರಿ ಮೋತಿಹಾರಿ ನ್ಯಾಯಾಲಯದ ಬಳಿಯ ಸಕ್ಕರೆ ಕಾರ್ಖಾನೆ ರಸ್ತೆಯಲ್ಲಿ ಪೊಲೀಸ್ (Police) ತಪಾಸಣೆ ವೇಳೆ ಈ ಘಟನೆ ನಡೆದಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Police Sub-Inspector) ಒಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆದ ನಂತರ, ಸೋಮವಾರವೇ ಆರೋಪಿ PSI ಯನ್ನು ಅಮಾನತುಗೊಳಿಸಲಾಗಿತ್ತು.
ಡಿಐಜಿ ರೈ ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತೆಯೊಂದಿಗೆ ಮಾತುಕತೆ ನಡೆಸಿ, ಘಟನೆಯ ತನಿಖೆ ನಡೆಸಿದರು. ನಂತರ ಅವರು ಛತೌನಿ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಮರ್ಜೀತ್ ಕುಮಾರ್, ಡೆಪ್ಯೂಟಿ ಎಸ್‌ಎಚ್‌ಒ, ಇಬ್ಬರು ತರಬೇತಿ ಸಬ್ ಇನ್ಸ್‌ಪೆಕ್ಟರ್‌ಗಳು, ಒಬ್ಬ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹಾಗೂ ಒಬ್ಬ ಗೃಹ ರಕ್ಷಕ ದಳದ ಜವಾನ್‌ರನ್ನು ಅಮಾನತು ಮಾಡುವ ಆದೇಶ ಹೊರಡಿಸಿದರು.
Lion : ವ್ಯಕ್ತಿ-ಸಿಂಹ ಮುಖಾಮುಖಿ : ಇಬ್ಬರಿರೂ ಭಯ ; ಮುಂದೆನಾಯ್ತು ವಿಡಿಯೋ ನೋಡಿ.!
ಈ ಪ್ರಕರಣ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪೊಲೀಸ (Police) ರ ಅನುಚಿತ ವರ್ತನೆಯ ವಿಡಿಯೋ :
Special drive authorise Bihar Police (Motihari)men to inappropriately touch a woman and coerce her to give statement in favour of police..Shameful Act … condemnable in strong words #DGP #BiharPolice #CMOBIHAR pic.twitter.com/XDWIGkBSl7
— Kumar Amit (@KAmit_Adv) August 11, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ECL ನಲ್ಲಿ ನೇಮಕಾತಿ 2025 : 1123 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ.!

ಜನಸ್ಪಂದನ ನ್ಯೂಸ್, ನೌಕರಿ : ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (Eastern Coalfields Limited (ECL) Recruitment 2025 ) 2025 ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಒಟ್ಟು 1123 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ECL ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Belagavi : ಕಾರು ಮರಕ್ಕೆ ಡಿಕ್ಕಿ ; 2 ಜನ ಸ್ಥಳದಲ್ಲೇ ಸಾವು.!
ECL ಹುದ್ದೆಗಳ ವಿವರ :
- ಸಂಸ್ಥೆ : Eastern Coalfields Limited (ECL).
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಹುದ್ದೆಗಳ ಸಂಖ್ಯೆ : 1123.
- ಉದ್ಯೋಗ ಸ್ಥಳ : ಪಶ್ಚಿಮ ಬಂಗಾಳ.
- ಅರ್ಜಿಯ ವಿಧಾನ : ಆನ್‌ಲೈನ್.
ಶೈಕ್ಷಣಿಕ ಅರ್ಹತೆ :
- ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಡಿಪ್ಲೊಮಾ ಅಥವಾ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ :
- ವಯಸ್ಸಿನ ಅಂಶವನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?
ಆಯ್ಕೆ ಪ್ರಕ್ರಿಯೆ :
- ಅರ್ಹತೆ ಪಟ್ಟಿ.
- ದಾಖಲೆ ಪರಿಶೀಲನೆ.
- ಸಂದರ್ಶನ.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ECL ವೆಬ್‌ಸೈಟ್‌ಗೆ ಭೇಟಿ ನೀಡಿ ಹಾಗೂ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
- ಆನ್‌ಲೈನ್ ಅರ್ಜಿ ಲಿಂಕ್‌ನ್ನು ಕ್ಲಿಕ್ ಮಾಡಿ ಮತ್ತು ಫಾರ್ಮ್ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು, ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
- ಅರ್ಜಿಯನ್ನು ಸಲ್ಲಿಸಿ ಮತ್ತು ಮುದ್ರಣವನ್ನು ಸಂಗ್ರಹಿಸಿ.
VTU ನೇಮಕಾತಿ 2025 : ಗ್ರಂಥಪಾಲಕ ಮತ್ತು ಲ್ಯಾಬ್ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ : 08 ಆಗಸ್ಟ್ 2025.
- ಆನ್‌ಲೈನ್ ಅರ್ಜಿ ಕೊನೆ : 11 ಸೆಪ್ಟೆಂಬರ್ 2025.
ಮುಖ್ಯ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ : easterncoal.nic.in






