ಜನಸ್ಪಂದನ ನ್ಯೂಸ್, ಡೆಸ್ಕ್ : ಕೇರಳದ ತಿರುವನಂತಪುರದಲ್ಲಿ ರಸ್ತೆ ದಾಟುತ್ತಿದ್ದಾಗ ಕಾಡುಹಂದಿ (Wild boar) ಗಳ ಹಿಂಡು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಆಗಸ್ಟ್ 8 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದ್ದು, ಈ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಗಾಯಗೊಂಡ ಮಹಿಳೆಯನ್ನು ಪೆರಿಂಗಮ್ಮಳದ ನಿವಾಸಿ ನಿಸಾ ಎಂದು ಗುರುತಿಸಲಾಗಿದೆ. ಅವರು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹಲವಾರು ಕಾಡುಹಂದಿ (Wild boar) ಗಳು ರಸ್ತೆ ದಾಟುತ್ತಿದ್ದವು. ಅಲ್ಲಿ ಒಂದು ದೊಡ್ಡ ಕಾಡುಹಂದಿ ನೇರವಾಗಿ ಅವರ ಬೈಕ್‌ಗೆ ಡಿಕ್ಕಿ ಹೊಡೆದು, ವಾಹನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾರೆ.
Yallamma : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!
ಹೆಲ್ಮೆಟ್ ಧರಿಸಿದ್ದರೂ ಕೂಡ ಅದನ್ನು ಸರಿಯಾದ ರೀತಿಯಲ್ಲಿ ಕಟ್ಟಿಕೊಳ್ಳದ (Lock) ಕಾರಣ ಕಾಡುಹಂದಿ (Wild boar) ಗಳಿಗೆ ಡಿಕ್ಕಿ ಹೊಡೆದು ಅಪಘಾತದ ವೇಳೆ ಅದು ಬಿದ್ದುಹೋಗಿದೆ. ಘಟನೆಯ ನಂತರ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಆಟೋ ಚಾಲಕನೊಬ್ಬ ಅವರನ್ನು ಹತ್ತಿರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ನಿಸಾ ತೀವ್ರ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಕಾಡುಹಂದಿ ಕಾಡುಹಂದಿ (Wild boar) ಗಳು ಕಾಣಿಸಿಕೊಳ್ಳುವಿಕೆ ಕುರಿತು ಅಧಿಕಾರಿಗಳ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
SI ಸಾವಿನ ಪ್ರಕರಣಕ್ಕೆ ಹೊಸ ತಿರುವು ; ಮಹಿಳಾ ಇನ್ಸ್‌ಪೆಕ್ಟರ್ ಬಂಧನ.!
ಕಾಡುಹಂದಿ (Wild boar) ಗಳ ಹಿಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನದ ವಿಡಿಯೋ :
கேரளா – திருவனந்தபுரம் : சாலையின் குறுக்கே வந்த காட்டு பன்றி ஒன்று, பைக்கில் மோதியதில் பெண் கீழே விழுந்து காயம் pic.twitter.com/f9kcKMINlB
— Kᴀʙᴇᴇʀ – தக்கலை கபீர் (@Autokabeer) August 9, 2025
SI ಸಾವಿನ ಪ್ರಕರಣಕ್ಕೆ ಹೊಸ ತಿರುವು ; ಮಹಿಳಾ ಇನ್ಸ್‌ಪೆಕ್ಟರ್ ಬಂಧನ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಎಸ್‌ಐ (SI) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಇನ್ಸ್‌ಪೆಕ್ಟರ್ (Women Inspector) ಓರ್ವರನ್ನು ಅರೆಸ್ಟ್ ಮಾಡಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ SI ಅನುಜ್ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದೆ. ಸಬ್-ಇನ್ಸ್‌ಪೆಕ್ಟರ್ (SI) ಅನುಜ್ ಕಶ್ಯಪ್ ಆತ್ಮಹತ್ಯೆ ಪ್ರಕರಣ ನಡೆದು ಕೇವಲ 24 ಗಂಟೆಗಳಲ್ಲೇ ಪೊಲೀಸರು ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಕುಮಾರಿಯನ್ನು ಮಾನಸಿಕ ಕಿರುಕುಳ ಮತ್ತು ಮದುವೆಗೆ ಒತ್ತಡ ಹೇರಿದ ಆರೋಪದ ಮೇಲೆ ಬಂಧಿಸಲಾಗಿದೆ.
ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?
ಸಂಬಂಧದ ಆರಂಭ ಮತ್ತು ಬದಲಾವಣೆ :
2021ರಲ್ಲಿ ಇಮಾಮ್ಗಂಜ್ ಪೊಲೀಸ್ ಠಾಣೆಯಲ್ಲಿ ಸೇವೆ ನಿರ್ವಹಿಸುತ್ತಿದ್ದಾಗ ಅನುಜ್ ಕಶ್ಯಪ್ ಮತ್ತು ಸ್ವೀಟಿ ಕುಮಾರಿ ಮೊದಲ ಬಾರಿಗೆ ಪರಿಚಯವಾದರು. ಕೆಲಸದ ಸಂದರ್ಭದಲ್ಲಿ ಆಪ್ತತೆ ಬೆಳೆದು, ನಂತರ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ಸಾರ್ವಜನಿಕವಾಗಿ ಸಮಯ ಕಳೆಯುತ್ತಿದ್ದರೆಂಬ ಮಾಹಿತಿ ಹಿರಿಯ ಅಧಿಕಾರಿಗಳಿಗೆ ಸಿಕ್ಕ ನಂತರ, ಇವರನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಯಿತು.
ಎಸ್ಎಸ್ಪಿ ಕಚೇರಿಯ ಮೀಡಿಯಾ ವಿಭಾಗಕ್ಕೆ SI ಅನುಜ್ ಅವರನ್ನು ವರ್ಗಾಯಿಸಿದ್ದರೆ, ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಕುಮಾರಿಯನ್ನು ಬೆಳಗಂಜ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಹೀಗಾಗಿ ಇದರೊಂದಿಗೆ ಇಬ್ಬರ ನಡುವಿನ ಪ್ರೀತಿ ದೂರವಾಗಿತ್ತು.
Astrology : ಹೇಗಿದೆ ಗೊತ್ತಾ.? ಅಗಷ್ಟ 10 ರ ದ್ವಾದಶ ರಾಶಿಗಳ ಫಲಾಫಲ.!
SI ಮದುವೆ ಮತ್ತು ವೈಯಕ್ತಿಕ ಜೀವನ :
ಇದರ ನಂತರ ಅನುಜ್ ತಮ್ಮ ಕುಟುಂಬದ ಒತ್ತಾಯಕ್ಕೆ ಮಣಿದು ಜೂಹಿ ಎಂಬ ಯುವತಿಯನ್ನು ಮದುವೆಯಾದರು. ಪತ್ನಿ ಜೂಹಿ ದೆಹಲಿಯಲ್ಲಿ ಯುಪಿಎಸ್‌ಸಿ (UPSC) ತಯಾರಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಅನುಜ್ ಗಯಾದಲ್ಲಿ ಒಬ್ಬರೇ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದರು.
ಮದುವೆಗೆ ಒತ್ತಡ ಮತ್ತು ದುರ್ಘಟನೆ :
ಇತ್ತೀಚೆಗೆ ಮತ್ತೆ ಅನುಜ್ ಮತ್ತು ಸ್ವೀಟಿ ನಡುವೆ ಸಂಪರ್ಕ ಆರಂಭವಾಯಿತು. ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ, ಅನುಜ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ತಾನ್ನನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
Belagavi : ಕಾರು ಮರಕ್ಕೆ ಡಿಕ್ಕಿ ; 2 ಜನ ಸ್ಥಳದಲ್ಲೇ ಸಾವು.!
ಈ ಒತ್ತಡವನ್ನು ತಾಳಲಾರದೇ, ಗುರುವಾರ ರಾತ್ರಿ ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿಗೆ ವಿಡಿಯೋ ಕಾಲ್ ಮಾಡಿದ ವೇಳೆ SI ಅನುಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಕ್ರಮ :
ಘಟನೆಯ ನಂತರ ಮಹಿಳಾ ಇನ್ಸ್‌ಪೆಕ್ಟರ್ ಸ್ವೀಟಿ ಭಯಭೀತಳಾಗಿ ಬೆಳಗ್ಗೆ 5 ಗಂಟೆಗೆ ಅನುಜ್ರ ಬಾಡಿಗೆ ಮನೆಗೆ ಆಗಮಿಸಿದ್ದಾರೆ. ಬಾಗಿಲು ತೆಗೆಯಲು ಸಾಧ್ಯವಾಗದಿದ್ದರಿಂದ ಮನೆ ಮಾಲೀಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಬಾಗಿಲು ಒಡೆದು ಒಳ ಪ್ರವೇಶಿಸಿದ ಪೊಲೀಸರು ಅನುಜ್ ಮೃತದೇಹವನ್ನು ಪತ್ತೆಹಚ್ಚಿದರು.
SI ಅನುಜ್ ಪೋಷಕರು ಸಹ ಸ್ವೀಟಿ ಕುಮಾರಿ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ದೂರಿದ್ದಾರೆ. ಪರಿಣಾಮವಾಗಿ ಪೊಲೀಸರು ಸ್ವೀಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿ, ವಿಶೇಷ ತನಿಖಾ ದಳ ಅವಳನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.






