Monday, December 23, 2024
HomeInternationalಪಿಜ್ಜಾ, ಬರ್ಗರ್ ತಿಂದ ಮೇಲೆ ದೇಹದೊಳಗಾಗುವ ಬದಲಾವಣೆಗಳೇನು.?
spot_img

ಪಿಜ್ಜಾ, ಬರ್ಗರ್ ತಿಂದ ಮೇಲೆ ದೇಹದೊಳಗಾಗುವ ಬದಲಾವಣೆಗಳೇನು.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಸ್ಪರ್ಧಾತ್ಮಕ (Competitive) ಜೀವನದಲ್ಲಿ ಎಷ್ಟೋ ಜನರಿಗೆ ನೆಮ್ಮದಿಯಿಂದ 3 ಹೊತ್ತು ಊಟ ಮಾಡಲು ಟೈಮ್ ಸಹ ಇಲ್ಲದಂತಾಗಿದೆ. ಹೀಗಾಗಿ ಜನ ಫಾಸ್ಟ್ ಫುಡ್ ನತ್ತ ಮುಖ ಮಾಡಿದ್ದಾರೆ. ಕೆಲವರಂತೂ ರುಚಿಯಾಗಿರುತ್ತದೆ ಎಂದು ಅಧಿಕ ಪ್ರಮಾಣದಲ್ಲಿ ಫಾಸ್ಟ್ ಫುಡ್ ತಿನ್ನುತ್ತಾರೆ.

ಆದರೆ ಪಿಜ್ಜಾಗಳು (Pizza), ಬರ್ಗರ್‌ಗಳು (Burgar), ಮೊಮೊಸ್ ಮತ್ತು ಇತರ ಅನೇಕ ತ್ವರಿತ ಆಹಾರಗಳ (fast food) ಸೇವನೆಯಿಂದ ದೇಹದಲ್ಲಾಗುವ ಬದಲಾವಣೆಗಳೇನು ಅಂತ ಗೊತ್ತೇ.?

ಹಲ್ಲಿನ ಸಮಸ್ಯೆ :
ಫಾಸ್ಟ್ ಫುಡ್ ನಲ್ಲಿ ಸಕ್ಕರೆ ಮತ್ತು ಕಾರ್ಬ್ ಆಸಿಡ್ ಹೆಚ್ಚಾಗಿರುತ್ತದೆ. ಇದು ಹಲ್ಲಿನ ದಂತಕವಚದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದಲ್ಲದೇ ಹಲ್ಲಿನ ಕೊಳೆಯುವಿಕೆಗೆ (tooth decay) ಕಾರಣವಾಗುತ್ತದೆ. ಹಲ್ಲಿನ ಕುಹರದ ಸಮಸ್ಯೆ ಉಂಟಾಗಬಹುದು. ಅಲ್ಲದೇ ದೇಹದಲ್ಲಿನ ಮೂಳೆಗಳ ಬಲವನ್ನು (Bone strength) ಸಹ ಕಡಿಮೆ ಮಾಡಬಹುದು.

ಮಧುಮೇಹದ ಅಪಾಯ :
ಫಾಸ್ಟ್ ಫುಡ್ ಖಾಲಿ ಕಾರ್ಬೋಹೈಡ್ರೇಟ್‌ಗಳನ್ನು (empty carbohydrates) ಹೊಂದಿರುತ್ತವೆ. ಇದು Insulin spike ಅನ್ನು ಉಂಟು ಮಾಡಬಹುದು. ಇದರಿಂದ ಟೈಪ್ 2 ಮಧುಮೇಹದ ಅಪಾಯವು ಹೆಚ್ಚಾಗುತ್ತದೆ.

ಹೃದಯಾಘಾತಕ್ಕೆ ಕಾರಣ :
ಫಾಸ್ಟ್ ಫುಡ್ ತಿನ್ನುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು (blood pressure) ಹೆಚ್ಚು ಮಾಡುತ್ತದೆ. ಇದು ಹೃದಯಾಘಾತ ಅಥವಾ ಹೃದ್ರೋಗದ (Heart attack or heart disease) ಅಪಾಯಕ್ಕೆ ಕಾರಣವಾಗಬಹುದು.

ಉಸಿರಾಟದ ತೊಂದರೆ :
ತ್ವರಿತ ಆಹಾರವು ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಗಳನ್ನು (Extra calories) ಮತ್ತು ತೂಕವನ್ನು ಹೆಚ್ಚಿಸುತ್ತದೆ. ಈ ಕಾರಣಗಳಿಂದಾಗಿ ಉಸಿರಾಟದಲ್ಲಿ ತೊಂದರೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರೂ ಸುಸ್ತಾಗುತ್ತಾರೆ.

ತೂಕ ಹೆಚ್ಚಳ :
ತ್ವರಿತ ಆಹಾರದಲ್ಲಿ ಕ್ಯಾಲೋರಿಗಳು ತುಂಬಾ ಅಧಿಕವಾಗಿರುತ್ತದೆ. ಆದ್ದರಿಂದ ನಿಮ್ಮ ತೂಕವು ತುಂಬಾ ವೇಗವಾಗಿ ಹೆಚ್ಚಾಗುವುದು.

ಖಿನ್ನತೆ :
ತ್ವರಿತ ಆಹಾರ ಅಥವಾ ಸಂಸ್ಕರಿಸಿದ ಆಹಾರವನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಅದು ಕೇಂದ್ರ ನರಮಂಡಲದ (Nervous system) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಖಿನ್ನತೆಯ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments