ಜನಸ್ಪಂದನ ನ್ಯೂಸ್, ಡೆಸ್ಕ್ : ಅವಳಿ-ಎಂಜಿನ್ ಪ್ರೊಪೆಲ್ಲರ್ (propeller) ವಿಮಾನವು ಬುಧವಾರ ಟೆಕ್ಸಾಸ್ ಹೆದ್ದಾರಿಗೆ (Texas highway) ಅಪ್ಪಳಿಸಿತು, ಎರಡು ಭಾಗಗಳಾಗಿ ವಿಭಜನೆಯಾಗಿರುವ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಕೆಲ ಕಾರುಗಳು ಹಾನಿಗೊಳಗಾಗಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಬಿಸಿ ನ್ಯೂಸ್ ಪ್ರಕಾರ, ವಿಮಾನವು ದಕ್ಷಿಣ ಟೆಕ್ಸಾಸ್‌ನ ವಿಕ್ಟೋರಿಯಾದ ಸ್ಟೇಟ್ ಹೈವೇ ಲೂಪ್ 463 (State Highway Loop 463 in Victoria, South Texas) ನಲ್ಲಿ ಮಧ್ಯಾಹ್ನ 3 ಗಂಟೆಗೆ ಅಪಘಾತಕ್ಕೀಡಾಯಿತು. ವಿಮಾನವು ಮೂರು ಕಾರು (Car) ಗಳಿಗೆ ಹೊಡೆದು ಎರಡು ಭಾಗಗಳಾಗಿ ಹೊಳಾಗಿದೆ. ಸದ್ಯ ಘಟನೆಯ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಲಾಗಿದೆ. ವೈರಲ್ (Viral) ಆದ ವಿಡಿಯೋದ ಪ್ರಕಾರ ವಿಮಾನ ರಸ್ತೆಯಲ್ಲಿ ಇಳಿಯುವ ಮೊದಲು ತುಂಬಾ ಕೆಳಕ್ಕೆ ಹಾರುವುದನ್ನು ಕಾಣಬಹುದಾಗಿದೆ.
ಇದನ್ನು ಓದಿ : Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?
ಅಪಘಾತದಲ್ಲಿ ಮೂವರಿಗೆ ಪ್ರಾಣಾಪಾಯವಿಲ್ಲದ ಗಾಯಗಳಾಗಿವೆ ಮತ್ತು ನಾಲ್ಕನೆಯವರನ್ನು ಗಂಭೀರವಾದ ಗಾಯವಾದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ (Hospital) ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (Federal Aviation Administration) ಪ್ರಕಾರ ವಿಮಾನವು ಅವಳಿ-ಎಂಜಿನ್ ಪೈಪರ್ ಪಿಎ -31 (engine Piper PA-31) ಆಗಿದ್ದು, ಅಪಘಾತದ ಸಮಯದಲ್ಲಿ ಪೈಲಟ್ ಮಾತ್ರ ವಿಮಾನದಲ್ಲಿದ್ದರು. ಪೈಲಟ್‌ನನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಗ್ಗೆ ತನಿಖೆ ನಡೆಸುವುದಾಗಿ FAA ಹೇಳಿದೆ.
ಇದನ್ನು ಓದಿ : PDO ನೇಮಕಾತಿ : ಪ್ರಶ್ನೆಪತ್ರಿಕೆ ಸೀಲ್ ಓಪನ್ ಆಗಿರುವ ಫೋಟೋ ವೈರಲ್.!
ಪ್ರತ್ತೇಕ್ಷದರ್ಶಿಯ ಪ್ರಕಾರ, ಅಪಘಾತ ಪೂರ್ವದಲ್ಲಿ ಸಣ್ಣ ವಿಮಾನದ ಎಂಜಿನ್ನ ಶಬ್ದವು ಕೇಳಲು ಪ್ರಾರಂಭಿಸಿತು. ಅದು ನನ್ನ ಎಡಭಾಗ (Left side) ದ ಗೋಡೆಯ ಮೇಲೆ ಆ ವಿಮಾನದ ನೆರಳು ಕಾಣಿಸಲು ಪ್ರಾರಂಭಿಸಿತು. ನಂತರ ಅದು ನನ್ನ ಟ್ರಕ್‌ನ ಮೇಲ್ಭಾಗದಲ್ಲಿ ಹಾದುಹೋಯಿತು ಎಂದಿದ್ದಾರೆ.
ಅಪಘಾತದ ರಭಸಕ್ಕೆ ವಿಮಾನದ ಅವಶೇಷಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ (scattered) ಬಿದ್ದಿರುವುದಾಗಿ ವರದಿಯಾಗಿದೆ.
#WATCH : Video of the moment when plane crashes into 3 cars on highway in Victoria, Texas
Victoria Police Deputy Chief Eline Moya said four people were taken to hospitals. Three had non-life threatening injuries and one was transported to an out-of-town hospital for higher-level… pic.twitter.com/W6UfUaw3Ga
— upuknews (@upuknews1) December 12, 2024