Wednesday, September 17, 2025

Janaspandhan News

HomeViral VideoModelಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ ಯುವಕ ; ಅನಾಚಾರದ ವಿಡಿಯೋ ವೈರಲ್.!
spot_img
spot_img
spot_img

Modelಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದ ಯುವಕ ; ಅನಾಚಾರದ ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದೆಹಲಿಯ ರಾಜೀವ್ ಚೌಕ್‌ನಲ್ಲಿ ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳಾ ಮಾಡೆಲ್‌ (model) ಒಬ್ಬರಿಗೆ ಹಾಡಹಗಲೇ ಖಾಸಗಿ ಅಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘೋರ ಘಟನೆ ಬೆಳಕಿಗೆ ಬಂದಿದೆ.

ದೆಹಲಿ-ಜೈಪುರ ಹೆದ್ದಾರಿಯ ಬಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಮಾಡೆಲ್ (model) ತಾನೇ ಈ ಸಂಬಂಧ ವಿಡಿಯೋವನ್ನು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ : Affair : ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಹತ್ಯೆ : ಬಳಿಕ ಆರೋಪಿ ನೇಣಿಗೆ ಶರಣು.!

ಮಾಡೆಲ್ (model) ಹೇಳುವಂತೆ, “ನಾನು ಕ್ಯಾಬ್‌ಗಾಗಿ ಕಾಯುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ನಿರಂತರವಾಗಿ ನನ್ನ ಕಡೆ ನೋಡುತ್ತಾ, ತನ್ನ ಪ್ಯಾಂಟಿನ ಜಿಪ್‌ನ್ನು ತೆರೆದು ಅಸಭ್ಯವಾಗಿ ನಡೆದುಕೊಂಡ. ಆ ಕ್ಷಣದಲ್ಲಿ ನನಗೆ ಆಘಾತವಾಯಿತು. ನಾನು ತಕ್ಷಣವೆ ನನ್ನ ಫೋನ್‌ನಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದೆ.” ಎಂದಿದ್ದಾರೆ.

ಅವರು ಈ ವಿಡಿಯೋವನ್ನು ಪೋಸ್ಟ್ ಮಾಡುವಾಗ ದೆಹಲಿ ಪೊಲೀಸರು, ಸಂಬಂಧಿತ ಅಧಿಕಾರಿಗಳು ಹಾಗೂ ಮಹಿಳಾ ಆಯೋಗದ ಅಧಿಕಾರಿಗಳನ್ನು ಟ್ಯಾಗ್ ಮಾಡಿದರೂ ಯಾವುದೇ ಸ್ಪಂದನೆ ಬಂದಿಲ್ಲ ಎಂದು model ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯು ವಿಡಿಯೋ ಮೂಲಕ ತನ್ನ ಭಾವನೆಗಳನ್ನು ಹಂಚಿಕೊಂಡಿದ್ದು, “ಆ ಕ್ಷಣದಲ್ಲಿ ನಾನು ಬಹಳ ಭಯಗೊಂಡಿದ್ದೆ. ಜನರು ನಾನು ತಕ್ಷಣ ಪ್ರತಿಕ್ರಿಯೆ ನೀಡಬೇಕಿತ್ತು ಎಂದು ಹೇಳುತ್ತಾರೆ. ಆದರೆ, ಅಂಥ ಸಂದರ್ಭಗಳಲ್ಲಿ ಮಹಿಳೆಯೊಬ್ಬಳ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ಎಲ್ಲರಿಗೂ ಅರ್ಥವಾಗುವುದಿಲ್ಲ. ನಾನು ಸುರಕ್ಷಿತವಾಗಿರಬೇಕು ಎಂಬುದು ನನ್ನ ಪ್ರಾಥಮಿಕ ಗುರಿಯಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ : ಪತಿ ಇಲ್ಲದ ವೇಳೆ ಅತ್ತೆ ಮೇಲೆ ಅಮಾನುಷ ಹಲ್ಲೆ ನಡೆಸಿದ ಸೊಸೆ : CCTV ದೃಶ್ಯ ವೈರಲ್.!

ವಿಡಿಯೋ ವ್ಯಾಪಕವಾಗಿ ವೈರಲ್ ಆದ ನಂತರ, ಗುರ್ಗಾಂವ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 78 ಮತ್ತು 75(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗಾಗುವ ಅನಾಚಾರ ಘಟನೆಗಳಿಗೆ ಕಾನೂನು ಇಲಾಖೆ ತಕ್ಷಣ ಸ್ಪಂದಿಸುವ ಅಗತ್ಯವಿದೆ ಎಂಬ ಬೇಡಿಕೆ ಕೇಳಿಬರುತ್ತಿದೆ.

Model ವಿಡಿಯೋ : ಇಲ್ಲಿ ಕ್ಲಿಕ್‌ ಮಾಡಿ.

ಪತಿ ಇಲ್ಲದ ವೇಳೆ ಅತ್ತೆ ಮೇಲೆ ಅಮಾನುಷ ಹಲ್ಲೆ ನಡೆಸಿದ ಸೊಸೆ : CCTV ದೃಶ್ಯ ವೈರಲ್.!

CCTV

ಜನಸ್ಪಂದನ ನ್ಯೂಸ್‌, ನವದೆಹಲಿ : ಮನೆಯಲ್ಲಿ ಪತಿ ಇಲ್ಲದ ವೇಳೆ ಸೊಸೆಯೋರ್ವಳು ಅತ್ತೆ ಮೇಲೆ ಅಮಾನುಷ ಹಲ್ಲೆ ಮಾಡಿರುವ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಈ CCTV ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೊಸೆಯೊಬ್ಬಳು ತನ್ನ ಅತ್ತೆ ಹಲ್ಲೆ ನಡೆಸಿದ ಘಟನೆ ಸಿಸಿಟಿವಿ (CCTV) ಯಲ್ಲಿ ಸೆರೆಯಾಗಿದೆ. ಈ ಘಟನೆ ದೊಡ್ಡ ಚರ್ಚೆಯ ವಿಷಯವಾಗಿದ್ದು, ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹದಿಂದ ಸಂಭವಿಸಿದೆ ಎನ್ನಲಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 07 ರ ದ್ವಾದಶ ರಾಶಿಗಳ ಫಲಾಫಲ.!

ಮಾಹಿತಿಯಂತೆ, ಈ ದಂಪತಿಗೆ ಕಳೆದ ಕೆಲ ಸಮಯದಿಂದ ಪರಸ್ಪರ ಭಿನ್ನಾಭಿಪ್ರಾಯಗಳಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿ ತಾಯಿಯೊಂದಿಗೆ ವಾಸವಿದ್ದರೆ, ಪತ್ನಿ ಬೇರೆ ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದಳು. ಪತ್ನಿಗೆ ಸಾಸು ತನ್ನ ಗಂಡನಿಗೆ ತನ್ನ ವಿರುದ್ಧ ಕಿವಿಮಾತು ಹೇಳುತ್ತಿದ್ದಾಳೆ ಎಂಬ ಅನುಮಾನವಿದ್ದುದರಿಂದ, ಈ ಘಟನೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಅತ್ತೆ ಮನೆಯೊಳಗೆ ನುಗ್ಗಿದ ಸೊಸೆ :

ಪತಿ ಮನೆಯಲ್ಲಿಲ್ಲದಿದ್ದ ಸಂದರ್ಭದಲ್ಲಿ ಸೊಸೆ ತಕ್ಷಣವೇ ಅತ್ತೆ ಮನೆಗೆ ತೆರಳಿ ಬಾಗಿಲು ತಟ್ಟಿದ್ದಳು. ಅತ್ತೆ ಬಾಗಿಲು ತೆರೆದ ಕೂಡಲೇ ಸೊಸೆ ಗಾಬರಿಯಾಗಿ ಮನೆಯೊಳಗೆ ನುಗ್ಗಿದ್ದಳು. ಬಳಿಕ ಮಾತಿನ ಚಕಮಕಿ ಆರಂಭವಾಗಿ, ಅದೇ ಕ್ಷಣದಲ್ಲಿ ವಿಷಯ ಕೈಮೀರಿ ಸೊಸೆ ಹಲ್ಲೆಗೆ ಮುಂದಾಗಿದ್ದಳು.

ಇದನ್ನು ಓದಿ : Affair : ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಹತ್ಯೆ : ಬಳಿಕ ಆರೋಪಿ ನೇಣಿಗೆ ಶರಣು.!

ಅತ್ತೆಯನ್ನು ನೆಲಕ್ಕೆ ತಳ್ಳಿ ತೀವ್ರ ಗಾಯಗಳಾಗುವಂತೆ ಹಲ್ಲೆ ನಡೆಸಿದ್ದಾಳೆ. ಅತ್ತೆಯ ತಲೆಯ ಕೂದಲನ್ನು ಹಿಡಿದು ಎಳೆದು ಎಳೆದು ನೆಲದ ಮೇಲೆ ತಳ್ಳುತ್ತಿರುವ ದೃಶ್ಯಗಳು ಮನೆಯಲ್ಲಿನ ಸಿಸಿ ಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.

ಪ್ರಕರಣ ದಾಖಲಿಸಿ ತನಿಖೆ ಆರಂಭ :

ಶಬ್ದ ಕೇಳಿ ಪಕ್ಕದ ಮನೆಯವರು ಓಡಿ ಬರುತ್ತಿದಂತೆಯೇ ಸೊಸೆ ಸ್ಥಳದಿಂದ ಓಡಿ ಹೋಗಿದ್ದಾಳೆ. ಗಾಯಗೊಂಡ ಅತ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳೀಯ ನಿವಾಸಿಗಳಿಂದ ದೊರೆತ ಮಾಹಿತಿ ಹಾಗು CCTV ಯ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?

ಸದ್ಯ, ಆರೋಪಿ ಸೊಸೆಯನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಅತ್ತೆ ನೀಡಿದ ದೂರಿನ ಪ್ರಕಾರ, ಇತರೆ ಸಂದರ್ಭದಲ್ಲಿಯೂ ಸಹ ಸೊಸೆ ಹಲವಾರು ಬಾರಿ ಚುಚ್ಚುಮಾತು ಮತ್ತು ಶಾರೀರಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.

CCTV ದೃಶ್ಯಾವಳಿಯ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments