Monday, October 27, 2025

Janaspandhan News

HomeViral VideoDog : ಇದು ನಿಜವೇ.? ಮಧ್ಯರಾತ್ರಿ ಮನುಷ್ಯನಾಗಿ ಬದಲಾದ ನಾಯಿ ; ವಿಡಿಯೋ ವೈರಲ್.!
spot_img
spot_img
spot_img

Dog : ಇದು ನಿಜವೇ.? ಮಧ್ಯರಾತ್ರಿ ಮನುಷ್ಯನಾಗಿ ಬದಲಾದ ನಾಯಿ ; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯರಾತ್ರಿ ಸಮಯದಲ್ಲಿ ನಾಯಿ (Dog) ಯೊಂದು ಮನುಷ್ಯನಾಗಿ ಬದಲಾಗುವ ಭಯಾನಕ ವಿಡಿಯೋ ಒಂದು ಸದ್ಯ ಸಾಲಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆತ್ಮ, ಪ್ರೇತ (Ghost), ಭೂತಗಳು ನಿಜವಾಗಿಯೂ ಇವೆಯೆ? ಈ ಪ್ರಶ್ನೆಗೆ ಉತ್ತರ ಒಂದೇ ರೀತಿಯಲ್ಲಿಲ್ಲ. ಕೆಲವರು ತಮ್ಮ ಅನುಭವ ಆಧರಿಸಿ ಆತ್ಮಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾರೆ, ಇನ್ನು ಕೆಲವರು ಅದು ಕೇವಲ ಭ್ರಮೆ ಎಂಬುದಾಗಿ ಹೇಳುತ್ತಾರೆ.

ದೇವರು, ಭೂತ ಇತ್ಯಾದಿ ವಿಷಯಗಳು ನಂಬಿಕೆ ಮತ್ತು ವಿಶ್ವಾಸದ ಮೇಲೆ ಆಧಾರಿತವಾಗಿವೆ. ಆದರೆ ಕೆಲ ಅಲೌಕಿಕ ಘಟನೆಗಳು ವೈಜ್ಞಾನಿಕವಾಗಿ ವಿವರಿಸಲಾಗದಂತಿರುತ್ತವೆ ಎಂಬುದು ಹಲವರ ಅನುಭವ.

ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!

ಸೋಶಿಯಲ್ ಮೀಡಿಯಾದಲ್ಲಿ ಪ್ರೇತಾತ್ಮಗಳು, ಅಜ್ಞಾತ ಶಕ್ತಿಗಳು ಮತ್ತು ಭಯಾನಕ ಘಟನೆಗಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಲೇ ಇವೆ. ಇತ್ತೀಚೆಗೆ, ಇಂತಹದ್ದೇ ಒಂದು ವಿಚಿತ್ರ ಹಾಗೂ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲಾಗುತ್ತಿದೆ.

ಈ ವಿಡಿಯೋದಲ್ಲಿ ಮಧ್ಯರಾತ್ರಿಯಲ್ಲಿ ವ್ಯಕ್ತಿಯೊಬ್ಬನು ನೆಲಕ್ಕೆ ಕುಳಿತುಕೊಂಡಿದ್ದಾನೆ. ಅದೇ ವೇಳೆ ಅವನ ಹಿಂದೆ ಬರುವ ನಾಯಿ (Dod) ಯೊಂದು ಹಠಾತ್ ಮನುಷ್ಯನಾಗಿ ಪರಿವರ್ತಿತವಾಗುತ್ತಿದೆ. ಇನ್ನೊಂದು ನಾಯಿ (Dog) ಅಲ್ಲಿಯೇ ಹಾದು ಹೋಗುತ್ತದೆ. ಈ ದೃಶ್ಯವನ್ನು ಕೇವಲ ಒಬ್ಬರೇ ನೋಡಿದರೆ, ಅದು ಭಯ ಹುಟ್ಟಿಸುವಂತಾಗುತ್ತದೆ.

ಇದನ್ನು ಓದಿ : ಬೆಳಗಾವಿಯಲ್ಲಿ ಹೈಟೆಕ್ Black-magic : ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸಹಿತ ವಾಮಾಚಾರದ ವಸ್ತುಗಳು ಪತ್ತೆ!

ಈ ನಾಯಿ (Dog) ಮನುಷ್ಯನಾಗುವ ವಿಡಿಯೋ ನಿಜವೇ ಎಂಬುದರ ಬಗ್ಗೆ ಹಲವರು ಪ್ರಶ್ನೆ ಎತ್ತಿದರೂ, ಕೆಲವರು ಇದನ್ನು ನಿಜವಾದದ್ದು ಎಂದು ಪಸರಿಸುತ್ತಿದ್ದಾರೆ. ಆದರೆ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದಿಂದಾಗಿ ಹೀಗೆ ನಾಯಿ (Dog) ಮನುಷ್ಯನಾಗುವ ನಕಲಿ ವಿಡಿಯೋಗಳನ್ನು ಬಹಳ ನೈಜವಾಗಿ ತಯಾರಿಸಲಾಗುತ್ತಿರುವುದು ನಿಜ.

ಈ ಕಾರಣದಿಂದ, ಇದೂ ಕೂಡ deepfake ಅಥವಾ ಎಡಿಟೆಡ್ ವಿಡಿಯೋ ಆಗಿರುವ ಸಾಧ್ಯತೆ ಉಂಟು.

ಈ ವಿಡಿಯೋ ಸಂಬಂಧಿಸಿದಂತೆ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ತಾವು ಭೂತ ಪ್ರೇತಗಳನ್ನು ನೋಡಿದ್ದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕದ ಓಕ್‌ಬ್ರಿಡ್ಜ್ ಮಕ್ಕಳ ಆಸ್ಪತ್ರೆಗೆ ಸಂಬಂಧಿಸಿದ ಒಂದು ಘಟನೆ ಸುದ್ದಿಯಾದ್ದು. 9 ವರ್ಷದ ಬಾಲಕಿ ಎಮಿಲಿ ಹಾಲೋವೇ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಳಾಗಿದ್ದಳು.

ಇದನ್ನು ಓದಿ : Leg cramp : ರಾತ್ರಿ ವೇಳೆಯಲ್ಲಿ ಕಾಲು ಸೆಳೆತವೇ.? ಇಲ್ಲಿದೆ ನುರಿತ ನರವೈದ್ಯ ಮಾಹಿತಿ.!

ಆದರೆ ಹೃದಯ ನಿಲ್ಲಿಸಿದ ನಂತರವೂ, ಆಕೆಗೆ ಅಳವಡಿಸಿದ ಯಂತ್ರದಿಂದ ಬೀಪ್ ಶಬ್ದ ಮುಂದುವರಿದಿತ್ತು. ವಿಶೇಷವೆಂದರೆ, ಪ್ರತಿವರ್ಷ ಆಕೆಯ ಹುಟ್ಟುಹಬ್ಬದಂದು ಅದೇ ಶಬ್ದ ಕೇಳಿಸುತ್ತಿದೆ ಎಂದು ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲ ಘಟನೆಗಳು, ವಿಡಿಯೋಗಳು ಮತ್ತು ವರದಿಗಳು ಭೂತ ಪ್ರೇತಗಳ ಕುರಿತಂತೆ ನಾನಾ ಚರ್ಚೆಗಳಿಗೆ ಕಾರಣವಾಗಿವೆ. ವೈಜ್ಞಾನಿಕವಾಗಿ ಎಷ್ಟು ವಿಷಯಗಳು ನಕಾರಾತ್ಮಕವಾಗಿ ನಿರೂಪಿಸಲಾದರೂ, ಹಲವರು ತಮ್ಮ ನಂಬಿಕೆಯಿಂದಾಗಿ ಇವುಗಳ ಅಸ್ತಿತ್ವವನ್ನೇ ನಂಬುತ್ತಾರೆ.

ಮಧ್ಯರಾತ್ರಿ ಮನುಷ್ಯನಾಗಿ ಬದಲಾದ ನಾಯಿ (Dog) ಯ ವಿಡಿಯೋ :

 

View this post on Instagram

 

A post shared by @brightlife_brightlife


Leg cramp : ರಾತ್ರಿ ವೇಳೆಯಲ್ಲಿ ಕಾಲು ಸೆಳೆತವೇ.? ಇಲ್ಲಿದೆ ನುರಿತ ನರವೈದ್ಯ ಮಾಹಿತಿ.!

Leg cramp

ಜನಸ್ಪಂದನ ನ್ಯೂಸ್‌, ಆರೋಗ್ಯ : ರಾತ್ರಿ ಮಲಗುವಾಗ ಕಾಲು ಸೆಳೆತ (Leg cramp) ಮತ್ತು ಸ್ನಾಯು ಬಿಗಿತ ಅನುಭವಿಸುವುದು ಹಲವರಿಗೆ ಸಾಮಾನ್ಯ ಅನುಭವ. ಇದು ತೊಡೆ ಮತ್ತು ಕಾಲುಗಳ ಕೆಳ ಭಾಗದ ಸ್ನಾಯುಗಳಲ್ಲಿ ಹೆಚ್ಚು ಕಂಡುಬರುವ ನೋವಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಶೇ.40ರಷ್ಟು ಮಂದಿಗೆ ಈ ರೀತಿಯ ಅಸ್ವಸ್ಥತೆ ತೀವ್ರವಾಗಿ ಅನುಭವವಾಗುತ್ತದೆ.

ಈ ಕುರಿತು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಕನ್ಸಲ್ಟೆಂಟ್ ಡಾ. ರೋಹಿತ್ ಪೈ ಮಾಹಿತಿ ನೀಡಿದ್ದು, ಸ್ನಾಯು ಸೆಳೆತ ಅಥವಾ ಕ್ರ್ಯಾಂಪ್ ಅನ್ನು ಲಘುವಾಗಿ ಕಾಣಬಾರದು ಎಂದು ಎಚ್ಚರಿಸಿದ್ದಾರೆ.

ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!
ಸ್ನಾಯು ಸೆಳೆತ/ಕಾಲು ಸೆಳೆತ (Leg cramp) ಕ್ಕೆ ಕಾರಣಗಳು :
  • ದೈನಂದಿನ ಹೆಚ್ಚು ನಡೆಯುವುದು ಅಥವಾ ಓಡುವುದು.
  • ಔಷಧಿಗಳಾದ ಬಿಟಾ ಎಗೊನಿಸ್ಟ್ಸ್ ಬಳಕೆಯಾದ ಆಸ್ತಮಾ ಅಥವಾ ಡ್ಯುರೆಟಿಕ್ಸ್ ಚಿಕಿತ್ಸೆಯ ಭಾಗವಾಗಿ.
  • ನಿದ್ರಾಹೀನತೆ.
  • ದೇಹದಲ್ಲಿ ನೀರಿನ ಅಸಮತೋಲನ.
  • ಹೈಪೊಥೈರಾಯ್ಡಿಸಮ್ ಅಥವಾ ಹೈಪೊಕೆಲ್ಸೇಮಿಯಾ.
  • ಸ್ಲಿಪ್ಡ್ ಡಿಸ್ಕ್ ಸಮಸ್ಯೆ.
  • ಗರ್ಭಾವಸ್ಥೆ.
ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!

ವಾರದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಅಥವಾ ಪ್ರತಿದಿನ ಕಾಲು ಸೆಳೆತ (Leg cramp) ದ ಈ ಸಮಸ್ಯೆ ಕಾಡುತ್ತಿದರೆ, ಸರಿಯಾದ ಚಿಕಿತ್ಸೆ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಯಾವಾಗ ವೈದ್ಯರ ಸಲಹೆ ಅಗತ್ಯ?

ಸಾಮಾನ್ಯವಾಗಿ ಈ ಕಾಲು ಸೆಳೆತ (Leg cramp) ಸಮಸ್ಯೆ ಗಂಭೀರವಾಗಿಲ್ಲ. ಆದರೆ, ರಾತ್ರಿಯ ಕಾಲಿನಲ್ಲಿ ಇರುವ ಕಾಲು ನೋವು, ಮೊಟಾರ್ ನ್ಯೂರೋನ್ ರೋಗಗಳು ಅಥವಾ ಪೆರಿಫೆರಲ್ ನ್ಯೂರೋಪಥಿಯ ಮೊದಲ ಸೂಚನೆಯಾಗಿರುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ, ನಿದ್ರಾ ಸಂಬಂಧಿತ ಪಿಎಲ್‌ಎಮ್‌ಎಸ್ ಸಮಸ್ಯೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಬಹುದು. ಹೀಗಾಗಿ ನಿಖರವಾದ ನಿರ್ಧಾರಕ್ಕಾಗಿ ವೈದ್ಯರ ಸಲಹೆ ಅಗತ್ಯ.

ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಪರಿಶೋಧನೆಗಳು ಮತ್ತು ಪರೀಕ್ಷೆಗಳು :
  • ನಿದ್ರೆಯ ಗುಣಮಟ್ಟ ವಿಶ್ಲೇಷಣೆ.
  • ಕ್ಯಾಲ್ಷಿಯಮ್ ಮತ್ತು ಮ್ಯಾಗ್ನೇಶಿಯಮ್ ಮಟ್ಟ ಪರೀಕ್ಷೆ.
  • ಥೈರಾಯ್ಡ್ ಹಾರ್ಮೋನ್ ತಪಾಸಣೆ.
ಕಾಲು ಸೆಳೆತ (Leg cramp) ದ ಚಿಕಿತ್ಸೆಯು ಹೇಗೆ ಇರಬಹುದು?
  • ನಿದ್ರೆಗೂ ಮುನ್ನ ತೂಕ ಹಾಕದ ಸ್ಟ್ರೆಚಿಂಗ್ ವ್ಯಾಯಾಮಗಳು.
  • ಆಲ್ಕೋಹಾಲ್ ಮತ್ತು ಕೆಫೆನ್ ಸೇವನೆ ತಗ್ಗಿಸುವುದು.
  • ಕೆಲವೊಂದು ಔಷಧಗಳು : ವಿಟಮಿನ್ E, ಗಬಾಪೆಂಟಿನ್, ಕಾರ್ಬಾಮಜೆಪೈನ್, ಹಾಗೂ ಕಠಿಣ ಸಂದರ್ಭಗಳಲ್ಲಿ ಲಿಯೋಫೆನ್.
ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!

ಕಾಲು ಸೆಳೆತ (Leg cramp) ದ ಚಿಕಿತ್ಸೆಯ ಆಯ್ಕೆ ರೋಗಿಯ ನರವೈಜ್ಞಾನಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಬದಲಾಗದ ಕಾಯಿಲೆ ಅಥವಾ ನಿರಂತರ ಕಾಲು ಸೆಳೆತದಿಂದ ಬಳಲುತ್ತಿರುವವರು ಕಳಪೆ ನಿದ್ರೆಯಿಂದ ಬಳಲಬಹುದು. ಆದ್ದರಿಂದ, ಈ ಸಮಸ್ಯೆ ನಿರಂತರವಾಗಿದ್ದರೆ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಬಹುಮುಖ್ಯ.

Leg cramps : Leg cramps are sudden, involuntary, and painful contractions of leg muscles that can occur at any time, but are often experienced at night (nocturnal leg cramps). These cramps can be caused by various factors, including muscle fatigue, dehydration, electrolyte imbalances, nerve issues, or underlying medical conditions. Treatment options include stretching, massage, heat or ice application, and over-the-counter pain relievers.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments