ಜನಸ್ಪಂದನ ನ್ಯೂಸ್, ನೌಕರಿ : ಖಾಲಿ ಇರುವ ಹುದ್ದೆಗಳ (ನೌಕರಿ) ಭರ್ತಿಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದ್ದು, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಅಧಿಕೃತ website ಗೆ ಭೇಟಿ ಕೊಡಿ.
ಇದನ್ನು ಓದಿ : Vedio : ಗಂಡನಿಗೆ ಸರ್ಪ್ರೈಸ್ ಕೊಡಲು ಮನೆಯ ಬಾಗಿಲು ತೆರೆದ ಪತ್ನಿಗೆ ಕಾದಿತ್ತು ಬಿಗ್ ಶಾಕ್.!
ಹುದ್ದೆಗಳ ವಿವರ :
- ಅಕೌಂಟೆಂಟ್, ಸ್ಟೆನೋಗ್ರಾಫರ್, ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್, ಫೈರ್‌ಮ್ಯಾನ್, ಕುಕ್, ಎಂಟಿಎಸ್
- ಒಟ್ಟು ಹುದ್ದೆಗಳು 113.
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವಿದ್ಯಾರ್ಹತೆ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ SSLC ಅಥವಾ PUC ಉತ್ತೀರ್ಣರಾಗಿರಬೇಕು. (ಅಕೌಂಟೆಂಟ್ ಹುದ್ದೆಗೆ ಬಿಕಾಂ ಪದವಿ ಕಡ್ಡಾಯವಾಗಿದೆ ಮತ್ತು 12 ನೇ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಅನುಭವದ ಅಗತ್ಯವಿದೆ).
ಇದನ್ನು ಓದಿ : ಮಹಾಕುಂಭ ಮೇಳದಲ್ಲಿ Towel ಸುತ್ತಿಕೊಂಡು ಬಂದ ಯುವತಿ ; ಬುದ್ದಿ ಬೇಡ್ವಾ ಎಂದ ನೆಟ್ಟಿಗರು.!
ವಯೋಮಿತಿ :
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು, ಗರಿಷ್ಠ ವಯಸ್ಸಿನ ಮಿತಿಯನ್ನು 25 ರಿಂದ 30 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ .?
- ಆನ್‌ಲೈನ್‌ನಲ್ಲಿ ಅನ್ವಯಿಸು ಲಿಂಕ್ ಅನ್ನು ಕ್ಲಿಕ್ ಮಾಡಿ.
- ನೋಂದಣಿಗಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತುವ ಅದನ್ನು ಸಲ್ಲಿಸಿ.
- ಈಗ ಲಾಗಿನ್ ಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಿ.
- ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಅರ್ಜಿ ನಮೂನೆಯನ್ನು ಸಲ್ಲಿಸಿ.
- ಫಾರ್ಮ್ ಅನ್ನು ಸಲ್ಲಿಸಿದ ನಂತರ, ಅದರ ಪ್ರಿಂಟ್ ಕಾಪಿಯನ್ನು ಸುರಕ್ಷಿತವಾಗಿರಿಸಿಕೊಳ್ಳಿ.
ಪ್ರಮುಖ ದಿನಾಂಕ :
ಫೆಬ್ರವರಿ 6, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ : dgafms24.onlineapplicationform.org/DGAFMS/ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.