ಜನಸ್ಪಂದನ ನ್ಯೂಸ, ಡೆಸ್ಕ್ : ನಿಮ್ಮ ಬಳಿ ಆಧಾರ ಕಾರ್ಡ್ (Aadhaar card) ಇದೆಯೇ.? ಇದ್ದರೆ ನಿಮ್ಮ ಆಧಾರ ಕಾರ್ಡ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರದ ಪಿಎಂ ಸ್ವನಿಧಿ (PM SVANidhi ) ಯೋಜನೆಯಿಂದ ಸುಲಭವಾಗಿ ಸಾಲ ಪಡೆಯಲು ಸಾಧ್ಯವಿದೆ.
Online ಮೂಲಕ ಸ್ವಲ್ಪ ಹಣದ ಸಾಲ ಬೇಕಾದಾಗ PM SVANidhi ಯೋಜನೆಯ ಮೂಲಕ ಅರ್ಜಿ ಸಲ್ಲಿಸಬಹುದು. PM SVANidhi ಯೋಜನೆ ಮೂಲಕ ಗರಿಷ್ಠ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯವಿದೆ.
ಇದನ್ನು ಓದಿ : ಮಹಾಕುಂಭ ಮೇಳದಲ್ಲಿ Towel ಸುತ್ತಿಕೊಂಡು ಬಂದ ಯುವತಿ ; ಬುದ್ದಿ ಬೇಡ್ವಾ ಎಂದ ನೆಟ್ಟಿಗರು.!
PM SVANidhi ಹಲವರಿಗೆ ಪ್ರಯೋಜನವಾಗಲಿದ್ದು, ಕಡಿಮೆ ಬಡ್ಡಿದರ, ಸುಲಭ ಸಾಲಗಳಿಂದ ಜನರು ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಲಿದೆ.
ಪ್ರಮುಖವಾಗಿ ರಸ್ತೆ ಬದಿಯಲ್ಲಿ ಚಿಕ್ಕಪುಟ್ಟ ವ್ಯಾಪಾರ (small business on the roadside) ಮಾಡುವವರಿಗಾಗಿ ಈ ಪ್ರಧಾನಿ ಸ್ವನಿಧಿ ಯೋಜನೆ ತರಲಾಗಿದೆ. ಚಿಕ್ಕ ವ್ಯಾಪಾರಿಗಳಿಗೆ ಸಾಲದ ಸೌಲಭ್ಯ ನೀಡಲು ಬ್ಯಾಂಕ್ ಹಿಂದೇಟು ಹಾಕುತ್ತದೆ. ಬ್ಯಾಂಕ್‌ಗಳು ಕೇಳುವ ಗ್ಯಾರೆಂಟಿ, ಶ್ಯೂರಿಟಿ ಸೇರಿದಂತೆ ಇತರ ದಾಖಲೆ (guarantees, sureties and other documents) ಒದಗಿಸಲು ಸಣ್ಣ ವ್ಯಾಪಾರಿಗಳು ವಿಫಲರಾಗುವ ಹಿನ್ನಲೆಯಲ್ಲಿ ಸಾಲ ಸಿಗುವುದೇ ಇಲ್ಲ. ಆದರೆ ಪ್ರಧಾನಿ ಸ್ವನಿಧಿ ಯೋಜನೆ ಉಪಯುಕ್ತವಾಗಿದೆ.
ಇದನ್ನು ಓದಿ : ಪತಿಯ Kidney ಮಾರಿದ ಹಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಪರಾರಿ.!
2020 ರಲ್ಲಿ ವಕ್ಕರಿಸಿದ್ದ ಕೊರೋನಾ (Corona) ಸಮಯದಲ್ಲಿ ಪ್ರಧಾನಿ ಮೋದಿ ಈ ಯೋಜನೆ ಜಾರಿಗೆ ತಂದರು. ಚಿಕ್ಕ ವ್ಯಾಪಾರಿ (small traders) ಗಳಿಗೆ ಸಾಲ ಸಿಗುವಂತೆ ಮಾಡಿದರು. ಈ ಯೋಜನೆ ಮೂಲಕ ಹಲವು ಸಣ್ಣ ವ್ಯಾಪಾರಿಗಳು ಸಾಲ ಪಡೆದು ಉದ್ಯಮ ಬೆಳೆಸಿದ್ದಾರೆ. ವ್ಯಾಪಾರ ವಹಿವಾಟು (business turnover) ಹೆಚ್ಚಿಸಿದ್ದಾರೆ. ಸ್ವಾಲಂಬಿ ಬದುಕು ನಡೆಸುತ್ತಿದ್ದಾರೆ. ಸ್ವನಿಧಿ ಯೋಜನೆ ದೇಶದಲ್ಲಿನ ಆರ್ಥಿಕವಾಗಿ ಕುಗ್ಗಿಹೋದ ಸಣ್ಣ ವ್ಯಾಪಾರಿಗಳಿಗೆ ಉಪಯುಕ್ತವಾಗಿದೆ.
ಕೋರೋನಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಪಿ.ಎಂ ಸ್ವನಿಧಿ (PM SVANidhi) ಯೋಜನೆ ಸಾಲ ಸೌಲಭ್ಯದಲ್ಲಿ ಸೀಮಿತ ಮೊತ್ತವಿತ್ತು. ಆಗಾಗ 10,000 ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಬಳಿಕ ಸ್ವನಿಧಿ ಸಾಲ ಮೊತ್ತವನ್ನು ಹೆಚ್ಚಿಸಲಾಗಿದೆ.
ಇದೀಗ 10,000 ರೂಪಾಯಿ ಸಾಲ ಸೌಲಭ್ಯದಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಹಂತ ಹಂತವಾಗಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೊದಲ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಬೇಕು. ಒಂದು ವರ್ಷದೊಳಗೆ ಸಾಲ ತೀರಿಸಬೇಕು. ಬಡ್ಡಿ ದರ ಕಡಿಮೆ (low interest rate) ಇದರಿಂದ ಮತ್ತೆ ಸಾಲ ಪಡೆಯಲು ಸುಲಭವಾಗುತ್ತದೆ. ಅತೀ ಕಡಿಮೆ ಬಡ್ಡಿ ದರ ಕಾರಣ ಯಾವತ್ತೂ ಹೊರೆಯಾಗುವುದಿಲ್ಲ.
ಇದನ್ನು ಓದಿ : Strange Tradition : ಈ ರಾಜ್ಯದಲ್ಲಿ ಅಣ್ಣನನ್ನೇ ಮದುವೆಯಾಗ್ತಾಳೆ ತಂಗಿ ; ತಪ್ಪಿದರೆ ಕಟ್ಟಬೇಕಾಗುತ್ತದೆ ಭಾರೀ ದಂಡ.!
ಇನ್ನು ಈ ಪಿ.ಎಂ ಸ್ವನಿಧಿ (PM SVANidhi) ಸಾಲ ಪಡೆಯಲು ಕೇವಲ ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಇರಬೇಕು. ಇಷ್ಟಿದ್ದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು.
ನೀವು ಮಾಡಬೇಕಿರುವುದು ಇಷ್ಟೇ, ಆನ್‌ಲೈನ್ ಅಥವಾ CSC ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಬಡ್ಡಿ ದರ ಸಾಲ ಪಡೆಯುವ ಸಮಯದಲ್ಲಿ ನಿರ್ಧಾರವಾಗುತ್ತದೆ. ಆಧಾರ್ ಕಾರ್ಡ್ ಇದ್ದವರು ಯಾರೇ ಆದರೂ ಅರ್ಜಿ ಸಲ್ಲಿಸಬಹುದು. PM SVANidhi ಯೋಜನೆಯಲ್ಲಿ 12 ತಿಂಗಳುಗಳ ಅವಧಿ ಇರುತ್ತದೆ.
ಹಿಂದಿನ ಸುದ್ದಿ : ಕೇಂದ್ರ ಬಜೆಟ್ – 2025 : ರೈಲ್ವೆಗೆ ರೂ. 2.60 ಲಕ್ಷ ಕೋಟಿ ಮೀಸಲು ; ಕರ್ನಾಟಕಕ್ಕೆ ಬಂಪರ್, ಇಲ್ಲಿದೆ ಮಾಹಿತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3ನೇ ಅವಧಿಯ 2ನೇ ಬಜೆಟ್ (Budget) ಮಂಡನೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 2.60 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಮೀಸಲಿಡಲಾಗಿದೆ.
ಇದನ್ನು ಓದಿ : ಅತ್ಯಾಚಾರಿಗಳಿಗೆ ಪುರುಷತ್ವ ಹರಣ : ಕೇಂದ್ರಕ್ಕೆ 6 ವಾರಗಳ ಗಡುವು ನೀಡಿದ ಸುಪ್ರೀಂ ಕೋರ್ಟ್.!
ಈ ಬಗ್ಗೆ ಮಾತನಾಡಿರುವ ಸಚಿವ ವಿ.ಸೋಮಣ್ಣ ರೈಲ್ವೆ ಸುರಕ್ಷತೆಗೆ ಹೆಚ್ಚಿನ ಹಣ ಮೀಸಲಾಡಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳ ಪರೀಕ್ಷಾರ್ಥ ಪ್ರಯೋಗ ನಡೆಯುತ್ತೆ. ಕರ್ನಾಟಕಕ್ಕೆ ಕಳೆದ ವರ್ಷ 7,559 ಕೋಟಿ ರೂ ಮೀಸಲಾಡಲಾಗಿತ್ತು. ಈ ಬಾರಿ 7,564 ಕೋಟಿ ರೂ. ಮೀಸಲಿಡಲಾಗಿದೆ. ಸಬ್ ಅರ್ಬನ್ ರೈಲಿಗೆ ಈ ಬಾರಿಯೂ 350 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವೆಲ್ಲಾ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ :
- ಗದಗ-ವಾಡಿ ಮಾರ್ಗದ ಯೋಜನೆಗೆ 549.45 ಕೋಟಿ ರೂ.
- ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆಗೆ 549.45 ಕೋಟಿ ರೂ.
- ಬಾಗಲಕೋಟ-ಕುಡಚಿ ಮಾರ್ಗದ ಯೋಜನೆಗೆ 428.1 ಕೋಟಿ ರೂ.
- ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಿ ಗಾಮಾ (352.28 ಕಿ.ಮೀ) ರೈಲ್ವೆ ಮಾರ್ಗದ ಯೋಜನೆಗೆ 413.73 ಕೋಟಿ ರೂ.
ಹೊಟಗಿ-ಕುಡಗಿ-ಗದಗ ಮಾರ್ಗದ ಯೋಜನೆಗೆ 401.15 ಕೋಟಿ ರೂ. - ಬೆಂಗಳೂರು-ವೈಟ್‌ಫೀಲ್ಡ್-ಕೃಷ್ಣರಾಜಪುರಂ ಚತುಷ್ಪಥ ಪುಣೆ, ಮೀರಜ್-ಲೋಂಡಾ ಮಾರ್ಗದ ರೈಲ್ವೆ ಯೋಜನೆಗೆ 357.6 ಕೋಟಿ ರೂ.
- ಬೈಯಪನಹಳ್ಳಿಯಿಂದ ಹೊಸೂರು ಮಾರ್ಗಕ್ಕೆ 223.5 ಕೋಟಿ ರೂ.
- ಮುನಿರಾಬಾದ್-ಮಹಬೂಬ್ನರ ಮಾರ್ಗದ ಯೋಜನೆಗೆ 214.05 ಕೋಟಿ ರೂ.
- ಯಶವಂತಪುರದಿಂದ ಚನ್ನಸಂದ್ರ ಮಾರ್ಗ ಯೋಜನೆಗೆ 178.8 ಕೋಟಿ ರೂ.
- ತೋರಣಗಲ್ಲು-ರಂಜಿತ್‌ಪುರ ಮಾರ್ಗದ ಯೋಜನೆಗೆ 104.47 ಕೋಟಿ ರೂ.
- ದೌಂಡ್-ಕಲಬುರಗಿ ಡಬ್ಲಿಂಗ್ ಮತ್ತು ಪುಣೆ-ಗುಂತಕಲ್ ವಿದ್ಯುತೀಕರಣಕ್ಕೆ ಒಟ್ಟು 641.37 ಕಿ.ಮೀ. ಮಾರ್ಗದ ಯೋಜನೆಗೆ 84.39 ಕೋಟಿ ರೂ.
ಇದನ್ನು ಓದಿ : ಕನ್ಯಾ ತೋರಿಸುವ ನೆಪ : ವೇಶ್ಯಾವಾಟಿಕೆ ಮನೆಗೆ ಕಳುಹಿಸಿ ಯುವಕನ ಸುಲಿಗೆ.!
- ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗಕ್ಕೆ 78.4 ಕೋಟಿ ರೂ.
- ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ 64.05 ಕೋಟಿ ರೂ.
- ಕಲಬುರಗಿ-ಬೀದರ್ ಮಾರ್ಗದ ಯೋಜನೆಗೆ 38.43 ಕೋಟಿ ರೂ.
- ಹುಬ್ಬಳ್ಳಿ-ಚಿಕ್ಕಜಾಜೂರು 27.714 ಕೋಟಿ ರೂ.
- ಮಾರಿಕುಪ್ಪಂ-ಕುಪ್ಪಂ 25.62 ಕೋಟಿ ರೂ.
- ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಯೋಜನೆಗೆ 15.54 ಕೋಟಿ ರೂ.
- ರೇಣಿಗುಂಟಾ, ಗೂಟಿ, ವಾಡಿಯಲ್ಲಿ ಬೈಪಾಸ್- 15.198 ಕೋಟಿ ರೂ.
- ಅರಸೀಕೆರೆ-ತುಮಕೂರು ರೈಲ್ವೆ ಮಾರ್ಗದ ಯೋಜನೆಗೆ 13.41 ಕೋಟಿ ರೂ.
- ಕೆಂಗೇರಿ-ರಾಮನಗರ-ಮೈಸೂರು ಮಾರ್ಗದ ಯೋಜನೆಗೆ 10.728 ಕೋಟಿ ರೂ.
- ಕಂಕನಾಡಿ-ಪಣಂಬೂರು ರೈಲ್ವೆ ಮಾರ್ಗದ ಯೋಜನೆಗೆ 8.94 ಕೋಟಿ ರೂ.
- ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ಯೋಜನೆಗೆ 8.54 ಕೋಟಿ ರೂ. ಮತ್ತು
- ಯಲಹಂಕ-ಪೆನುಕೊಂಡ ರೈಲ್ವೆ ಮಾರ್ಗದ ಯೋಜನೆಗೆ 4.47 ಕೋಟಿ ರೂ.
sources : TV9 Kannada