Wednesday, February 5, 2025
HomeNational Newsಕೇಂದ್ರ ಬಜೆಟ್​ - 2025 : ರೈಲ್ವೆಗೆ ರೂ. 2.60 ಲಕ್ಷ ಕೋಟಿ ಮೀಸಲು ;...
spot_img
spot_img
spot_img
spot_img

ಕೇಂದ್ರ ಬಜೆಟ್​ – 2025 : ರೈಲ್ವೆಗೆ ರೂ. 2.60 ಲಕ್ಷ ಕೋಟಿ ಮೀಸಲು ; ಕರ್ನಾಟಕಕ್ಕೆ ಬಂಪರ್​, ಇಲ್ಲಿದೆ ಮಾಹಿತಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3ನೇ ಅವಧಿಯ 2ನೇ ಬಜೆಟ್ (Budget) ಮಂಡನೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.

ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ 2.60 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಮೀಸಲಿಡಲಾಗಿದೆ.

ಇದನ್ನು ಓದಿ : ಅತ್ಯಾಚಾರಿಗಳಿಗೆ ಪುರುಷತ್ವ ಹರಣ : ಕೇಂದ್ರಕ್ಕೆ 6 ವಾರಗಳ ಗಡುವು ನೀಡಿದ ಸುಪ್ರೀಂ ಕೋರ್ಟ್.!

ಈ ಬಗ್ಗೆ ಮಾತನಾಡಿರುವ ಸಚಿವ ವಿ.ಸೋಮಣ್ಣ ರೈಲ್ವೆ ಸುರಕ್ಷತೆಗೆ ಹೆಚ್ಚಿನ ಹಣ ಮೀಸಲಾಡಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳ ಪರೀಕ್ಷಾರ್ಥ ಪ್ರಯೋಗ ನಡೆಯುತ್ತೆ. ಕರ್ನಾಟಕಕ್ಕೆ ಕಳೆದ ವರ್ಷ 7,559 ಕೋಟಿ ರೂ ಮೀಸಲಾಡಲಾಗಿತ್ತು. ಈ ಬಾರಿ 7,564 ಕೋಟಿ ರೂ. ಮೀಸಲಿಡಲಾಗಿದೆ. ಸಬ್ ಅರ್ಬನ್ ರೈಲಿಗೆ ಈ ಬಾರಿಯೂ 350 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಯಾವೆಲ್ಲಾ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ :

  • ಗದಗ-ವಾಡಿ ಮಾರ್ಗದ ಯೋಜನೆಗೆ 549.45 ಕೋಟಿ ರೂ.
  • ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆಗೆ 549.45 ಕೋಟಿ ರೂ.
  • ಬಾಗಲಕೋಟ-ಕುಡಚಿ ಮಾರ್ಗದ ಯೋಜನೆಗೆ 428.1 ಕೋಟಿ ರೂ.
  • ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಿ ಗಾಮಾ (352.28 ಕಿ.ಮೀ) ರೈಲ್ವೆ ಮಾರ್ಗದ ಯೋಜನೆಗೆ 413.73 ಕೋಟಿ ರೂ.
    ಹೊಟಗಿ-ಕುಡಗಿ-ಗದಗ ಮಾರ್ಗದ ಯೋಜನೆಗೆ 401.15 ಕೋಟಿ ರೂ.
  • ಬೆಂಗಳೂರು-ವೈಟ್‌ಫೀಲ್ಡ್-ಕೃಷ್ಣರಾಜಪುರಂ ಚತುಷ್ಪಥ ಪುಣೆ, ಮೀರಜ್-ಲೋಂಡಾ ಮಾರ್ಗದ ರೈಲ್ವೆ ಯೋಜನೆಗೆ 357.6 ಕೋಟಿ ರೂ.
  • ಬೈಯಪನಹಳ್ಳಿಯಿಂದ ಹೊಸೂರು ಮಾರ್ಗಕ್ಕೆ 223.5 ಕೋಟಿ ರೂ.
  • ಮುನಿರಾಬಾದ್-ಮಹಬೂಬ್ನರ ಮಾರ್ಗದ ಯೋಜನೆಗೆ 214.05 ಕೋಟಿ ರೂ.
  • ಯಶವಂತಪುರದಿಂದ ಚನ್ನಸಂದ್ರ ಮಾರ್ಗ ಯೋಜನೆಗೆ 178.8 ಕೋಟಿ ರೂ.
  • ತೋರಣಗಲ್ಲು-ರಂಜಿತ್‌ಪುರ ಮಾರ್ಗದ ಯೋಜನೆಗೆ 104.47 ಕೋಟಿ ರೂ.
  • ದೌಂಡ್-ಕಲಬುರಗಿ ಡಬ್ಲಿಂಗ್ ಮತ್ತು ಪುಣೆ-ಗುಂತಕಲ್ ವಿದ್ಯುತೀಕರಣಕ್ಕೆ ಒಟ್ಟು 641.37 ಕಿ.ಮೀ. ಮಾರ್ಗದ ಯೋಜನೆಗೆ 84.39 ಕೋಟಿ ರೂ.

ಇದನ್ನು ಓದಿ : ಕನ್ಯಾ ತೋರಿಸುವ ನೆಪ : ವೇಶ್ಯಾವಾಟಿಕೆ ಮನೆಗೆ ಕಳುಹಿಸಿ ಯುವಕನ ಸುಲಿಗೆ.!

  • ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗಕ್ಕೆ 78.4 ಕೋಟಿ ರೂ.
  • ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ 64.05 ಕೋಟಿ ರೂ.
  • ಕಲಬುರಗಿ-ಬೀದರ್ ಮಾರ್ಗದ ಯೋಜನೆಗೆ 38.43 ಕೋಟಿ ರೂ.
  • ಹುಬ್ಬಳ್ಳಿ-ಚಿಕ್ಕಜಾಜೂರು 27.714 ಕೋಟಿ ರೂ.
  • ಮಾರಿಕುಪ್ಪಂ-ಕುಪ್ಪಂ 25.62 ಕೋಟಿ ರೂ.
  • ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಯೋಜನೆಗೆ 15.54 ಕೋಟಿ ರೂ.
  • ರೇಣಿಗುಂಟಾ, ಗೂಟಿ, ವಾಡಿಯಲ್ಲಿ ಬೈಪಾಸ್- 15.198 ಕೋಟಿ‌ ರೂ.
  • ಅರಸೀಕೆರೆ-ತುಮಕೂರು ರೈಲ್ವೆ ಮಾರ್ಗದ ಯೋಜನೆಗೆ 13.41 ಕೋಟಿ‌ ರೂ.
  • ಕೆಂಗೇರಿ-ರಾಮನಗರ-ಮೈಸೂರು ಮಾರ್ಗದ ಯೋಜನೆಗೆ 10.728 ಕೋಟಿ ರೂ.
  • ಕಂಕನಾಡಿ-ಪಣಂಬೂರು ರೈಲ್ವೆ ಮಾರ್ಗದ ಯೋಜನೆಗೆ 8.94 ಕೋಟಿ‌ ರೂ.
  • ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ಯೋಜನೆಗೆ 8.54 ಕೋಟಿ ರೂ. ಮತ್ತು
  • ಯಲಹಂಕ-ಪೆನುಕೊಂಡ ರೈಲ್ವೆ ಮಾರ್ಗದ ಯೋಜನೆಗೆ 4.47 ಕೋಟಿ ರೂ.

sources : TV9 Kannada

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!