Wednesday, February 5, 2025
HomeBelagavi NewsBelagavi : ಸಬ್ ರಿಜಿಸ್ಟರ್ ಸೇರಿ 2 ಕಡೆ ಲೋಕಾಯುಕ್ತ ದಾಳಿ.!
spot_img
spot_img
spot_img
spot_img

Belagavi : ಸಬ್ ರಿಜಿಸ್ಟರ್ ಸೇರಿ 2 ಕಡೆ ಲೋಕಾಯುಕ್ತ ದಾಳಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು (Lokayukta officer’s) ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಳಗಾವಿ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳು, ಬಾಗಲಕೋಟೆಯ ಗ್ರಾಮ ಪಂಚಾಯತ್ ಪಿಡಿಒ, ರಾಯಚೂರಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಪತ್ರ ಅಧಿಕಾರಿ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Alleged rape : ಪ್ರೆಸ್‌ಮೀಟ್‌ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು..!

ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿ ನಗರದ ಅನಗೋಳದಲ್ಲಿರುವ, ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟರ್ (Belagavi In-charge Sub- Registrar) ಸಚಿನ್ ಮಂಡೇದ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇನ್ನೂ ಹಾರೂಗೇರಿ ವೆಟರ್ನರಿ ಇನ್ಸ್​​ಪೆಕ್ಟರ್ (Harugeri Veterinary Inspector​​) ಸಂಜಯ್ ಮನೆ ಮೇಲೂ ದಾಳಿ ನಡೆದಿದೆ.

ಸಬ್ ರಿಜಿಸ್ಟರ್ ಸಚಿನ್ ಮಂಡೇದ್ ಅವರ ಮನೆ, ಕಚೇರಿ ಸೇರಿ 3 ಕಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಇದನ್ನು ಓದಿ : ಪ್ರೀತಿಯಿಂದ ರೊಟ್ಟಿ ಕೊಡುತ್ತಿದ್ದ ಅಜ್ಜಿ ತೀರಿಕೊಂಡಾಗ ಹಸು ಮಾಡಿದ್ದೇನು ಗೊತ್ತೇ ; ಈ Vedio ನೋಡಿ.!

ಅಲ್ಲದೇ ಹಾರೂಗೇರಿ ವೆಟರ್ನರಿ ಇನ್ಸ್​​ಪೆಕ್ಟರ್​​ ಸಂಜಯ್ ಮನೆ ಮೇಲೂ ದಾಳಿ ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಹಿಂದಿನ ಸುದ್ದಿ : ಸರ್ಕಾರಿ ನೌಕರಿ ಸಿಗುತ್ತಿದಂತೆಯೇ ಕಷ್ಟಪಟ್ಟು ಓದಿಸಿದ ಪತಿ ಬಿಟ್ಟು ಪತ್ನಿ ಎಸ್ಕೇಪ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಗಂಡ ; ಏನದು ಗೊತ್ತಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಜ್ಯೋತಿ ಮೌರ್ಯ ಪ್ರಕರಣ ಬಹಳಷ್ಟು ಜನರಿಗೆ ಗೊತ್ತಿರಬಹುದು. ಕಷ್ಟ ಪಟ್ಟು ಓದಿಸಿದ (He studied hard) ಗಂಡನನ್ನು ಬಿಟ್ಟು ಪತ್ನಿ ಜ್ಯೋತಿ ಬೇರೊಬ್ಬನನ್ನು ಮದುವೆಯಾದ ಘಟನೆ ಇದು.

ಇದನ್ನು ಓದಿ : ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ CCB ಪೊಲೀಸರ ದಾಳಿ : ಮಹಿಳೆಯರ ರಕ್ಷಣೆ ; ಇಬ್ಬರ ಬಂಧನ.!

ಫ್ಯೂನ್ ಆಗಿದ್ದ ಗಂಡ, ಜ್ಯೋತಿಗೆ ಉನ್ನತ ಶಿಕ್ಷಣ ಕೊಡಿಸಿದ, ಅದು ತುಂಬಾ ಕಷ್ಟಪಟ್ಟು. ಆದರೆ ಪತ್ನಿ ಜ್ಯೋತಿ ಗಂಡನನ್ನು ಬಿಟ್ಟು ಸರ್ಕಾರಿ ನೌಕರಿ ಸಿಕ್ಕ ನಂತರ ಬೇರೆ ಪುರುಷನನ್ನು ಮದುವೆಯಾದಳು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಇಂತದ್ದೆ ಮತ್ತೊಂದು ಘಟನೆ ವರದಿಯಾಗಿದ್ದು, ಈ ಬಾರಿ ತನ್ನನ್ನು ತೊರೆದ ಪತ್ನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟು ಹೆಂಡತಿಗೆ ಭರ್ಜರಿ ಶಾಕ್ ನೀಡಿದ್ದಾರೆ.

ಇದನ್ನು ಓದಿ : ರೈಲುಹಳಿ ಮೇಲೆ ಕುಳಿತು Mobile ನಲ್ಲಿ ಮಾತನಾಡುತ್ತಿದ್ದ ಯುವಕ : ಕೆಳಗಿಳಿದ ರೈಲು ಚಾಲಕ.!

ಗಂಡನ ಸಹಾಯ ಮತ್ತು ಸಹಕಾರದಿಂದ ಓದಿ ಉದ್ಯೋಗ (job) ಗಿಟ್ಟಿಸಿದ್ದ ಪತ್ನಿ ಉದ್ಯೋಗ ದೊರೆತ ಬಳಿಕ ಪತಿಯನ್ನೇ ತೊರೆದಿದ್ದು, ಆಕೆ ಮಾಡಿದ ಕೆಲಸಕ್ಕೆ ತಕ್ಕ ಪಾಠ ಕಲಿಸಲು ಪತಿ, ಪತ್ನಿ ಮಾಡಿದ್ದ ಎಡವಟ್ಟನ್ನು ಜಗಜ್ಜಾಹಿರು ಮಾಡಿ ಆಕೆ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ತಂದಿದ್ದಾನೆ.

ಘಟನೆಯ ವಿವರ :
ಕೆಲ ವರ್ಷಗಳ ಹಿಂದೆ ರಾಜಸ್ಥಾನದ ಕೋಟಾದ (Khota of Rajasthan) ಮನೀಶ್ ಮೀನಾ ಮತ್ತು ಸಪ್ನಾ ಮೀನಾ ಮದುವೆಯಾಗಿದ್ದರು. ಆದರೆ, ಸಪ್ನಾಗೆ ಓದುವ ಆಸೆ ಇದೆ ಎಂದು ಅರಿತ ಪತಿ ಮನೀಶ್, ಉನ್ನತ ವ್ಯಾಸಂಗ ಮಾಡಲು ನೆರವಾದರು. ಯಾವುದೇ ಬೆಲೆ ತೆತ್ತಾದರೂ ತನ್ನ ಪತ್ನಿಗೆ ಉನ್ನತ ಶಿಕ್ಷಣಕ್ಕೆ (Higher education) ಕೊಡಿಸಲು ಮನೀಶ್ ನಿರ್ಧರಿಸಿದ್ದ. ಆತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ ಆತ ಮಾತ್ರ ತನ್ನ ಹೆಂಡತಿಯನ್ನು ಓದಿಸಬೇಕು ಎಂಬ ಸಂಕಲ್ಪ (determination) ಮಾಡಿಕೊಂಡಿದ್ದ.

ಇದನ್ನು ಓದಿ : ಪ್ರಯಾಗ್‌ರಾಜ್ : ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಾಲಕಿಯರು ಸೇರಿ ನಾಲ್ಕು ಮಹಿಳೆಯರಿಗೆ ಗಾಯ.!

ಅದರಂತೆ ಆತನ ಕಷ್ಟಕ್ಕೆ ಪ್ರತಿಫಲವೆಂಬಂತೆ ರೈಲ್ವೆ ಪರೀಕ್ಷೆಯಲ್ಲಿ (Railway exam) ಪತ್ನಿ ಸಪ್ನಾ ಪಾಸ್ ಆದಳು. ಆಕೆಗೆ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಕೂಡ ಸಿಕ್ಕಿತು. ಆದರೆ ಕೆಲಸ ಸಿಕ್ಕ ಬಳಿಕ ಸಪ್ನಾ ಬದಲಾಗುತ್ತಾ ಹೋದಳು. ಅದರಲ್ಲೂ ಗಂಡನ ಕುರಿತು ಸಪ್ನಾಳ ನಡೆಯೇ ಬದಲಾಗಿತ್ತು. ಗಂಡನನ್ನು ಕೀಳಾಗಿ ಕಂಡು, ಕೊನೆಗೆ ಜಗಳ ಮಾಡಿಕೊಂಡು ಗಂಡನನ್ನೇ ಬಿಟ್ಟಳು.

ಸಪ್ನಾಳ ನಡೆಯಿಂದ ಸಿಟ್ಟಾಗಿದ್ದ ಗಂಡ ಮನೀಶ್ ಆಕೆಗೆ ಬುದ್ಧಿವಾದ ಹೇಳಿದರೂ, ಆತನ ಯಾವುದೇ ಸಂಧಾನಕ್ಕೂ (negotiation) ಒಪ್ಪದ ಸಪ್ನಾ ಆತನಿಂದ ದೂರ ಉಳಿಯಲು ನಿರ್ಧರಿಸಿದಳು.

ಇದನ್ನು ಓದಿ : “ಕೋಚಿಂಗ್ ಗುರು” ಫೆಬ್ರವರಿ 1 ಮತ್ತು 2 ರಂದು ನ್ಯೂಸ್​​ಫಸ್ಟ್​​ನಿಂದ ಮೆಗಾ Coaching Expo ಆಯೋಜನೆ.!

ಇದರಿಂದ ಆಕ್ರೋಶಗೊಂಡ ಗಂಡ ಮನೀಶ್ ರೈಲ್ವೆ ಇಲಾಖೆಗೆ ದೂರು ನೀಡಿದ್ದ. ದೂರಿನಲ್ಲಿ ಸಪ್ನಾ ತನ್ನ ಸ್ವಂತ ಪ್ರತಿಭೆಯಿಂದ ಕೆಲಸ ಪಡೆಯಲು ಸಾಧ್ಯವಿಲ್ಲ (sapna cannot get a job by your own talent) ಎಂದು ಆರೋಪಿಸಿ, ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳನ್ನು (Evidence) ಸಹ ತೋರಿಸಿದ್ದ.

ತನ್ನ ಪತ್ನಿ ಸಪ್ನಾ, ಇನ್ನೊಬ್ಬ ಅಭ್ಯರ್ಥಿಯ (ಡಮ್ಮಿ ಅಭ್ಯರ್ಥಿ) ಸಹಾಯದಿಂದ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ (Railway Recruitment Board Exam) ಪಾಸ್ ಆಗಿದ್ದಾರೆ ಎಂದು ಪ್ರೂವ್ ಮಾಡಿದ.

ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!

ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೆ ಅಂದು ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ (An investigation has been initiated against all the candidates) ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಸೌರಭ್ ಜೈನ್ (Saurabh Jain, Senior Divisional Commercial Officer, Kota Division) ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!