ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ವಸ್ತಿಕ, ಓಂ ಚಿಹ್ನೆಗಳನ್ನು ಹಿಂದೂ ಧರ್ಮದಲ್ಲಿ (Hinduism) ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಅವುಗಳನ್ನು ಜನರು ತುಳಿದುಕೊಂಡು ಹೋಗುವ ಟೈಲ್ಸ್ನಲ್ಲಿ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಆಂಧ್ರಪ್ರದೇಶದ (Andra Pradesh) ಚರ್ಚ್ ಒಂದರ ಮುಂಭಾಗದಲ್ಲಿ ಹಾಕಲಾದ ಟೈಲ್ಸ್ನಲ್ಲಿ ಓಂ ಮತ್ತು ಸ್ವಸ್ತಿಕ್ ಚಿಹ್ನೆ ಬಳಸಿರುವುದನ್ನು ಕಾಣಬಹುದು.
ಸೌರ ಚುಲ್ಹಾ ಯೋಜನೆ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ ‘ಸೋಲಾರ್ ಸ್ಟವ್’ : ಇಲ್ಲಿದೆ ಡೈರೆಕ್ಟ್ Link.!
ಇದು ರಾಜ್ಯದ ಮಂಗಳಾಪುರ ಪ್ರದೇಶದಲ್ಲಿರುವ ಚರ್ಚ್ (church) ಎಂದು ಗುರುತಿಸಲಾಗಿದೆ.
@arunpudur ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಏಪ್ರಿಲ್ 2ರಂದು ಶೇರ್ ಮಾಡಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 95 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ (view’s) ಪಡೆದಿದೆ.
Video : ಸಿನೆಮಾ ಚಿತ್ರಿಕರಣ ವೇಳೆ ಭೀಕರ ಅಪಘಾತ ; ನುಜ್ಜು ಗುಜ್ಜಾದ ಸ್ಟಾರ್ ನಟನ ಕಾರು.!
ಹಿಂದೂ ಧರ್ಮದಲ್ಲಿ ದೈವಿಕವೆಂದು ಪರಿಗಣಿಸಲಾಗಿರುವ ಓಂ ಮತ್ತು ಸ್ವಸ್ತಿಕ (Om & Swastik) ಚಿಹ್ನೆಗಳನ್ನು ಈ ರೀತಿ ಬಳಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಒಂದು ಧರ್ಮಕ್ಕೆ ಅಗೌರವ ತೋರಿರುವವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
ಸಾಕಷ್ಟು ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
A Church in Andhra uses Om 🕉️ and Swastika ࿗ as tiles for Converted Hindus to walk on.
Isn't this explicit hate?pic.twitter.com/IutDpLf6TE
— Arun Pudur (@arunpudur) April 2, 2024
ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.