Wednesday, February 5, 2025
HomeNational Newsಕುಂಭಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ ; Vedio ವೈರಲ್.!
spot_img
spot_img
spot_img
spot_img

ಕುಂಭಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ ; Vedio ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕೋಪಗೊಂಡ ಪ್ರಯಾಣಿಕರು ರೈಲಿನ ಬಾಗಿಲನ್ನು ತೆರೆಯಲಿಲ್ಲ ಎಂಬ ಕಾರಣಕ್ಕೆ ಕುಂಭಮೇಳಕ್ಕೆಂದು ಝಾನ್ಸಿಯಿಂದ ಪ್ರಯಾಗ್‌ರಾಜ್‌ (Jhansi to Prayagraj) ಗೆ ಹೋಗುತ್ತಿದ್ದ ವಿಶೇಷ ರೈಲಿ (special train) ನ ಮೇಲೆ ಕಲ್ಲು ತೂರಿದ್ದಾರೆ. ಈ ಘಟನೆ ಹರ್ಪಾಲ್ಪುರ್ (Harpalpur) ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದೆ.

ಹರ್ಪಾಲ್ಪುರ್ ರೈಲು ನಿಲ್ದಾಣಕ್ಕೆ ರೈಲು ಬಂದಾಗ ಬಾಗಿಲು ತೆರೆಯಲಾಗಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರ ಗುಂಪೊಂದು ವಿಶೇಷ ರೈಲಿನ ಮೇಲೆ ದಾಳಿ (passengers attacked the special train) ನಡೆಸಿದ್ದಾರೆ.

ಇದನ್ನು ಓದಿ : RBIನಿಂದ 350ರ ಹೊಸ ನೋಟು ಬಿಡುಗಡೆ.? ಇಲ್ಲಿದೆ ನಿಜಾಂಶ.!

ನಿನ್ನೆ ರಾತ್ರಿ 8 ಗಂಟೆಗೆ ಝಾನ್ಸಿ ಸ್ಟೇಷನ್‌ನಿಂದ ಪ್ರಯಾಗ್‌ರಾಜ್‌ಗೆ ರೈಲು ಹೊರಟಿತ್ತು. ಮಧ್ಯರಾತ್ರಿ 2 ಗಂಟೆಗೆ (8 pm last night) ಹರ್ಪಾಲ್ಪುರ್ ಸ್ಟೇಷನ್‌ಗೆ ಈ ವಿಶೇಷ ರೈಲು ಬಂದಿತ್ತು. ಆದರೆ, ರೈಲಿನ ಒಂದೇ ಒಂದು ಬೋಗಿಯ ಬಾಗಿಲು ತೆರೆಯದಿರುವ (coach of the train did not open) ಹಿನ್ನಲೆಯಲ್ಲಿ ಕೋಪಗೊಂಡ ಕೆಲವು ಪ್ರಯಾಣಿಕರು ಬಾಗಿಲಿನ ಗಾಜಿಗೆ ಕಲ್ಲು ತೂರಿ ಒಡೆದ್ದಿದ್ದಾರೆ.

ಕಲ್ಲು ತೂರಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಟ (screamed in fear) ನಡೆಸಿದರು. ಈ ಘಟನೆಯ ದೃಶ್ಯಾವಳಿಗಳು CCTV ಯಲ್ಲಿ ದಾಖಲಾಗಿದ್ದು ಸದ್ಯ ಈ ವಿಡಿಯೋ ದೃಶ್ಯಾವಳಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದನ್ನು ಓದಿ : Lokayukta : ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ.!

ನಿನ್ನೆ ಪ್ರಯಾಣಿಕರು ಪ್ರಯಾಗ್‌ರಾಜ್‌ಗೆ ಹೋಗುವ ರೈಲಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ, ಕೊನೆಗೆ ರೈಲು ಬಂದಾಗ ರೈಲಿನ ಒಂದೇ ಒಂದು ಬಾಗಿಲು ತೆರೆಯಲಾಗಲಿಲ್ಲ. ಇದರಿಂದ ಉದ್ರಿಕ್ತಗೊಂಡ ಪ್ರಯಾಣಿಕರು (enraged passengers) ರೈಲಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಹರ್ಪಾಲ್ಪುರ್ ಪೊಲೀಸ್ ಠಾಣಾ ಮುಖ್ಯಸ್ಥರು ತಿಳಿಸಿದ್ದಾರೆ. ಈ ಘಟನೆ ಕುರಿತು ಸದಯ ಪೊಲೀಸರು ಮತ್ತು ಭಾರತೀಯ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!