ಜನಸ್ಪಂದನ ನ್ಯೂಸ್, ಬೆಳಗಾವಿ : ಇಬ್ಬರು ಸಹೋದರರ ನಡುವೆ ಗಲಾಟೆ ನಡೆದು ಓರ್ವ ಮೃತಪಟ್ಟಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲ್ಲೂಕಿನ ನಿಲಜಿ (Nilaji of Belagavi Taluk) ಗ್ರಾಮದಲ್ಲಿ ನಡೆದಿದೆ.
ನಿಲಜಿ ಗ್ರಾಮದ ಸುಶಾಂತ ಸುಭಾಷ ಪಾಟೀಲ (20) ಮೃತ ಯುವಕನಾಗಿದ್ದು, ಇವರ ಅಣ್ಣ ಓಂಕಾರ ಸುಭಾಷ ಪಾಟೀಲ (23) ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Live in ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿ ಭೀಕರ ಹತ್ಯೆಗೈದು ಫ್ರಿಡ್ಜ್ನೊಳಗಿಟ್ಟ ಗೆಳೆಯ.!
ಗಾಂಜಾ ಸೇವಿಸುವ ವಿಚಾರವಾಗಿ ತಡರಾತ್ರಿ ಇಬ್ಬರ ನಡುವೆ ಜಗಳ ಶುರುವಾಗಿದೆ ಎನ್ನಲಾಗಿದೆ.
ಈ ವೇಳೆ ನೂಕಾಟ- ತಳ್ಳಾಟ ನಡೆದು ಮನೆಯ ಎರಡನೇ ಮಹಡಿಯಿಂದ ಇಬ್ಬರೂ ಕೆಳಕ್ಕೆ ಬಿದ್ದಿದ್ದರು (Both had fallen from the second floor) ಎನ್ನಲಾಗಿದೆ.
ಘಟನೆಯಲ್ಲಿ ಸುಶಾಂತ ಸ್ಥಳದಲ್ಲೇ ಕೊನೆಯುಸಿರೆಳೆದರು. ಓಂಕಾರ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?
ಗಾಂಜಾ ಸೇವಿಸುವ ಚಟ ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರಿಗೂ ಅಂಟಿಕೊಂಡಿತ್ತು ಎನ್ನಲಾಗಿದೆ. ಇಬ್ಬರಿಗೂ ತಂದೆತಾಯಿ ಬುದ್ದಿಮಾತು ಹೇಳಿ ಮನೆ ಕೆಲಸ ನೋಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ ತಡರಾತ್ರಿ ಇಬ್ಬರ ಮಧ್ಯ ಜಗಳ ನಡೆದು ಇಬ್ಬರೂ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು (Marihal Police Station) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?
ಹಿಂದಿನ ಸುದ್ದಿ : ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿ ಭೀಕರ ಹತ್ಯೆಗೈದು ; ಫ್ರಿಡ್ಜ್ನೊಳಗಿಟ್ಟ ಕಟುಕ.!
ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹಿತ ವ್ಯಕ್ತಿಯೋರ್ವ ಲಿವ್- ಇನ್ ಸಂಬಂಧದಲ್ಲಿದ್ದ (live in relationship) ಗೆಳತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿರುವ ಆಘಾತಕಾರಿ (shocking) ಘಟನೆ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!
ಉಜ್ಜಯಿನಿ ನಿವಾಸಿ ಸಂಜಯ್ ಪಾಟಿದಾರ್ ಎಂಬಾತ ಪಿಂಕಿ ಪ್ರಜಾಪತಿ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿದ್ದ ಎಂದು ವರದಿಯಾಗಿದೆ.
ಆರೋಪಿಯ ಬಾಡಿಗೆ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಸೀರೆಯುಟ್ಟು, ಆಭರಣ ಧರಿಸಿದ್ದ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಕೈಗಳನ್ನು ಕತ್ತಿಗೆ ಕಟ್ಟಿಹಾಕಲಾಗಿದೆ (The hands are tied to the sword). ಈ ಬಗ್ಗೆ ಪೊಲೀಸರು ಜೂನ್ ನಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ವೈೈರಲ್.
ಕಳೆದ ಐದು ವರ್ಷಗಳಿಂದ ಪಿಂಕಿ ಪ್ರಜಾಪತಿ ಜೊತೆ ಸಂಜಯ್ ಪಾಟಿದಾರ್ ಲಿವ್- ಇನ್ ಸಂಬಂಧದಲ್ಲಿದ್ದಳು. ಈ ನಡುವೆ ತನ್ನನ್ನು ವಿವಾಹವಾಗುವಂತೆ ಮಹಿಳೆ ಒತ್ತಾಯಿಸಿದ್ದು (forced), ಇದರಿಂದಾಗಿ ಪಾಟಿದಾರ್ ತನ್ನ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.
ಈ ಕುರಿತು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಅವರು ತಿಳಿಸಿದ್ದು, ಮನೆಯಿಂದ ದುರ್ವಾಸನೆ (stench) ಬರುವುದನ್ನು ಅರಿತ ನೆರೆಹೊರೆಯವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕ ಬಂದು ಪರಿಶೀಲನೆ ನಡೆಸಿದಾಗ ಮಹಿಳೆಯ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ. ಈ ವಿಚಾರವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಇನ್ನು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿಯನ್ನು ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ತನಗೆ ವಿವಾಹವಾಗಿದ್ದು, ಪಿಂಕಿ ತನ್ನನ್ನು ಮದುವೆಯಾಗು ಎಂದು ಪೀಡಿಸಿದ್ದಕ್ಕೆ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿದ್ದೇನೆ. ಬಳಿಕ ದೇಹವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ.
ಸದ್ಯ ಸಂಜಯ್ ಪಾಟಿದಾರ್ ಅನ್ನು ಅರೆಸ್ಟ್ ಮಾಡಿರುವ ಪೊಲೀಸರು ಈತನಿಗೆ ಸಹಾಯ ಮಾಡಿದ ಸ್ನೇಹಿತರ ಪತ್ತೆ ಕಾರ್ಯ ನಡೆಸಿದ್ದಾರೆ