Wednesday, February 5, 2025
HomeBelagavi NewsBelagavi : ಫೈರಿಂಗ್ ನಡೆಸಿ ಉದ್ಯಮಿಯ ಹತ್ಯೆಗೆ ಯತ್ನ ; ಬೆಚ್ಚಿಬಿದ್ದ ಜನರು.!
spot_img
spot_img
spot_img
spot_img

Belagavi : ಫೈರಿಂಗ್ ನಡೆಸಿ ಉದ್ಯಮಿಯ ಹತ್ಯೆಗೆ ಯತ್ನ ; ಬೆಚ್ಚಿಬಿದ್ದ ಜನರು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ತಾಲೂಕಿನ ಗಣೇಶಪುರದ (Ganeshpur in Belagavi Taluk) ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ಅಪರಿಚಿತರು ಫೈರಿಂಗ್ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಇಂದು (ಜ.10) ನಡೆದಿದೆ.

ಉದ್ಯಮಿಯ ಪ್ರಫುಲ್ ಪಾಟೀಲ್ ಹತ್ಯೆಗೆ ಯತ್ನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ : South Central Railway ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಪ್ರಫುಲ್ ಪಾಟೀಲ್ ಬೆಳಗುಂದಿ ಗ್ರಾಮದಿಂದ ಮನೆಗೆ ತೆರಳುತ್ತಿದ್ದ ವೇಳೆ (While going home from Belagundi village) ಅಪರಿಚಿತರು ಫೈರಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಈ ವೇಳೆ ಕಾರಿನ ಗಾಜುಗಳು ಮುಖ ಹಾಗೂ ತಲೆಭಾಗಕ್ಕೆ ಸಿಡಿದ ಪರಿಣಾಮ ಪ್ರಫುಲ್ ಪಾಟೀಲ್ ಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ಘಟನೆ ಕುರಿತು ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : ಅನರ್ಹರ BPL ಕಾರ್ಡ್ ರದ್ದುಗೊಳಿಸುವಂತೆ ಸಿಎಂ ಆದೇಶ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಸಿಎಂ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿರುವ ಅನರ್ಹರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವಂತೆ (Cancel ineligible BPL card) ಆಹಾರ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಪಡಿತರದಾರರನ್ನು ಕೈ ಬಿಡುವ ಕುರಿತು ಆಹಾರ ನಾಗರಿಕ ಸರಬರಾಜು ಇಲಾಖೆ Department of Food Civil Supplies ಪ್ರಗತಿ ಪರಿಶೀಲನಾ ಸಭೆ (Progress review meeting) ನಡೆಯಿತು.

ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಅನರ್ಹ ಬಿಪಿಎಲ್ ಪಡಿತರದಾರರನ್ನು ಹಂತ ಹಂತವಾಗಿ ತೆಗೆದು ಹಾಕಬೇಕು (BPL rationing should be phased out). ಆದರೆ ಒಬ್ಬನೇ ಒಬ್ಬ ಅರ್ಹ ಬಿಪಿಎಲ್‌ ಕಾರ್ಡುದಾರನ ಬಿಪಿಎಲ್‌ ಕಾರ್ಡ್‌ ರದ್ದಾಗಬಾರದು (BPL card of an eligible BPL cardholder should not be cancelled) ಎಂದು ಸೂಚನೆ ನೀಡಿದರು.

ಸ್ವಯಂ ತಮ್ಮ ಕಾರ್ಡ್‌ಗಳನ್ನು ಹಿಂತಿರುಗಿಸಲು ಅನರ್ಹ ಬಿಪಿಎಲ್‌ ಪಡಿತರದಾರರಿಗೆ ಕಾಲಾವಕಾಶ ನೀಡಬೇಕು. ನಂತರ ಅಂತವರಿಗೆ ನೊಟೀಸ್‌ ನೀಡಿ ಕಾರ್ಡ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!