Tuesday, February 4, 2025
HomeBelagavi NewsBelagavi : ತಹಶೀಲ್ದಾರ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ ದಾಳಿ.!
spot_img
spot_img
spot_img
spot_img

Belagavi : ತಹಶೀಲ್ದಾರ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ ದಾಳಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ (Khanapur Tehsildar) ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಅವರ ಮನೆ ಹಾಗೂ ಕಚೇರಿಗಳ (On their homes and offices) ಮೇಲೆ ದಾಳಿ ನಡೆಸಿದೆ.

ಖಾನಾಪುರ ತಹಶೀಲ್ದಾರ ಪ್ರಕಾಶ ಶ್ರೀಧರ ಗಾಯಕವಾಡ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ (Lokayukta officials have raid).

ಇದನ್ನು ಓದಿ : ಖ್ಯಾತ ನಟನ ಕಾರು ಭೀಕರ ಅಪಘಾತ; Shocking ವಿಡಿಯೋ ನೋಡಿ.!

ಪ್ರಕಾಶ್ ಅವರಿಗೆ ಸೇರಿದ ಬೆಳಗಾವಿಯ ಲಕ್ಷ್ಮೀ ಟೆಕ್​ನಲ್ಲಿರುವ ನಿವಾಸ, ನಿಪ್ಪಾಣಿಯ ನಿವಾಸ ಹಾಗೂ ತಹಶೀಲ್ದಾರ್ ಕಚೇರಿ ಸೇರಿ 6 ಕಡೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಬುದವಾರದಂದು ಖಾನಾಪುರ ತಹಸೀಲ್ದಾರ ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ (Eight sides of the state) ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!

ಲೋಕಾಯುಕ್ತ ಎಸ್‌ಪಿ ಹನುಮಂತರಾಯಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಹಿಂದಿನ ಸುದ್ದಿ : ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಹಲವರು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಬಂದರೆ ನೈಸರ್ಗಿಕ ಪರಿಹಾರಗಳನ್ನು (natural remedy) ಬಳಸುತ್ತಾರೆ. ಅವುಗಳಲ್ಲಿ ಮುಲೇಥಿ ಬೇರು (ಲೈಕೋರೈಸ್ ರೂಟ್) ಒಂದಾಗಿದೆ.

ಇದನ್ನು ಓದಿ : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!

ಯಷ್ಟಿಮಧು ಚೂರ್ಣ ಎಂಬ ಹೆಸರಿನಲ್ಲಿ ಈ ಬೇರಿನ ಪುಡಿ ಆಯುರ್ವೇದದ ಅಂಗಡಿಗಳಲ್ಲಿ (Ayurvedic shops) ಸಿಗುತ್ತದೆ. ಇದರ ಬೇರನ್ನು ಅಥವಾ ಈ ಚೂರ್ಣವನ್ನು ಸ್ವಲ್ಪವೇ ಸ್ವಲ್ಪ ತೆಗೆದುಕೊಂಡು ನೀರಿನಲ್ಲಿ ಹತ್ತು ನಿಮಿಷ ಕುದಿಸಿ ಊಟ ಮಾಡುವುದಕ್ಕಿಂತ ಮುಂಚೆ (Boil for ten minutes before eating) ಕುಡಿಯುವುದರಿಂದ ಜಠರದ ಒಳಭಾಗದಲ್ಲಿ (Inside the stomach) ರಕ್ಷಣಾ ಕವಚವೊಂದನ್ನು ನಿರ್ಮಿಸಿ ಉರಿ ಮತ್ತು ಎದೆಯುರಿ ಅಥವಾ ಹುಳಿತೇಗು ಆಗದಂತೆ ತಡೆಯಬಹುದು ಎಂದು ವರದಿಯಾಗಿದೆ.

ಇಂಡೊಮೆಥಾಸಿನ್- ಪ್ರೇರಿತ ಹುಣ್ಣುಗಳನ್ನು (Indomethacin- induced ulcers) ಹೊಂದಿರುವ ಇಲಿಗಳಿಗೆ ಲೈಕೋರೈಸ್ ಎಫ್‌ಟಿ (ಫಾಮೋಟಿಡಿನ್) ಸಂಯೋಜನೆಯ ಚಿಕಿತ್ಸೆಯನ್ನು ನೀಡಲಾಯಿತು. ಅಚ್ಚರಿಯ ಸಂಗತಿಯೆಂದರೆ ಇತರೆ ಚಿಕಿತ್ಸೆಗಿಂತ ಎಫ್‌ಟಿ ಮತ್ತು ಲೈಕೋರೈಸ್‌ಗಳು ಹುಣ್ಣುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಪಬ್‌ಮೆಡ್‌ನಲ್ಲಿ ಪ್ರಕಟವಾದ ಜೋರ್ಡಾನ್‌ನ ಅಲ್- ಇಸ್ರಾ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಫಾರ್ಮಸಿಯು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!

ಪ್ರಯೋಜನಗಳು :

ಮುಲೇಥಿಯಲ್ಲಿ ಫೈಟೊಈಸ್ಟ್ರೊಜೆನ್‌ಗಳು ಇದ್ದು ಅದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು (regulate hormone levels) ಸಹಾಯ ಮಾಡುತ್ತದೆ.

ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಇದು ತುಂಬಾ ಪ್ರಯೋಜನಕಾರಿ. ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸಿ (Increase the production of mucus in the stomach), ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ಅಲ್ಲದೇ ಗ್ಯಾಸ್ಟ್ರಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!

ಮುಲೇಥಿಯು ಸಕ್ಕರೆಗಿಂತ ಸಿಹಿಯಾಗಿರುತ್ತದೆ. ಹಾಗಾಗಿ ಸಿಹಿತಿಂಡಿಗಳು ಮತ್ತು ಔಷಧಿಗಳನ್ನು ತಯಾರಿಸುವಾಗ ನೈಸರ್ಗಿಕ ಸಿಹಿಕಾರಕವಾಗಿ (Natural sweetener) ಇದನ್ನು ಉಪಯೋಗಿಸಲಾಗುತ್ತದೆ.

ಸಂಧಿವಾತ, ಅಲರ್ಜಿ ಮತ್ತು ಚರ್ಮದ ಕಿರಿಕಿರಿಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : ಶಿಕ್ಷಕಿ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ; DDPI ಕಚೇರಿಯ ಅಧಿಕಾರಿ ಲೋಕಾಯುಕ್ತ ಬಲೆಗೆ.!

ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು (Immune system) ಇದು ಬಲಪಡಿಸುತ್ತದೆ.

ನೋಯುತ್ತಿರುವ ಗಂಟಲು ಮತ್ತು ಉಸಿರಾಟದ ಸೋಂಕುಗಳಿಂದ ಮುಲೇಥಿಯು ಪರಿಹಾರವನ್ನು ನೀಡುತ್ತದೆ.

ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮುಲೇಥಿ ಸಹಾಯ ಮಾಡುತ್ತದೆ.

ಇದನ್ನು ಓದಿ : ಮನೆಯ ಟೆರಸ್‌ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!

ಹಾರ್ಮೋನುಗಳ ಅಸಮತೋಲನ ಅಥವಾ ಋತುಬಂಧದ ಲಕ್ಷಣಗಳನ್ನು (Menopausal symptoms) ಅನುಭವಿಸುತ್ತಿರುವ ಮಹಿಳೆಯರಿಗೆ ಇದರಿಂದ ಪ್ರಯೋಜನ ಪಡೆಯಬಹುದು.

ಆದರೆ ಮುಲೇಥಿಯ ದೀರ್ಘಾವಧಿಯ ಸೇವನೆ ಅಥವಾ ಮಿತಿಮೀರಿದ ಬಳಕೆಯು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ (Long- term consumption or overuse can cause side effects). ಆದ್ದರಿಂದ ನೀವು ನಿಯಮಿತವಾಗಿ ಬಳಸುವ ಯೋಚನೆಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!