ಜನಸ್ಪಂದನ ನ್ಯೂಸ್, ಹಾಸನ : ಶಿಕ್ಷಣ ಇಲಾಖೆಯ ಡಿಡಿಪಿಐ ಕಚೇರಿಯ (DDPI Office) ಸೂಪರಿಡಿಯೆಂಟ್ ಲೋಕಾಯುಕ್ತ ಬಲೆಗೆ (Lokayukta trap) ಬಿದ್ದಿದ್ದಾರೆ.
ಡಿಡಿಪಿಐ ಕಚೇರಿಯ ಸೂಪರಿಡಿಯೆಂಟ್ ಎ. ಎಸ್. ವೇಣುಗೋಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
ಲಂಚ ಸ್ವೀಕರಿಸುವಾಗಲೇ ಶಿಕ್ಷಣ ಇಲಾಖೆಯ (Education department) ಡಿಡಿಪಿಐ ಹೆಚ್. ಕೆ. ಪಾಂಡು ಕಚೇರಿಯಲ್ಲಿ ಸೂಪರಿಡಿಯೆಂಟ್ ಎ. ಎಸ್. ವೇಣುಗೋಪಾಲ್ ನನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ.
ಶಿಕ್ಷಕಿಯೋರ್ವರ ವರ್ಗಾವಣೆ ಸಲುವಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು (He demanded a bribe) ಎಂದು ತಿಳಿದು ಬಂದಿದೆ.
ಇದನ್ನು ಓದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
ಇನ್ನೂ ಈ ಕುರಿತು ಶಿಕ್ಷಕಿ ಪತಿ ನೀಡಿದ್ದ ದೂರಿನನ್ವಯ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ವೇಣುಗೋಪಾಲ್ನನ್ನು ವಶಕ್ಕೆ (custody) ಪಡೆದಿದ್ದಾರೆ ಎನ್ನಲಾಗಿದೆ.
ಹಿಂದಿನ ಸುದ್ದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸುಪ್ರೀಂ ಕೋರ್ಟ್, ವಯಸ್ಸಾದ ತಂದೆ- ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ (Children who do not take care of elderly parents do not get property) ಎಂದು ಮಹತ್ವದ ತೀರ್ಪು ನೀಡಿದೆ.
ಇದನ್ನು ಓದಿ : ಮಹಿಳಾ ರೋಗಿಗಳ ಖಾಸಗಿ ಅಂಗ ಸ್ಪರ್ಶಿಸಿಸುವ Doctorನ ಹೇಯ್ ಕೃತ್ಯದ ವಿಡಿಯೋ ವೈರಲ್.!
ಉಡುಗೊರೆ ರೂಪದಲ್ಲಿ ಮಗನಿಗೆ ನೀಡಿದ್ದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಿ (cancel), ತಾಯಿಗೆ ಆಸ್ತಿಯನ್ನು ವಾಪಸ್ಸು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸಿ. ಟಿ. ರವಿಕುಮಾರ್ ಅವರ ನ್ಯಾಯಪೀಠವು ಈ ತೀರ್ಪು ನೀಡಿದೆ. ಮಕ್ಕಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲರಾದರೆ (If children fail to cope with their responsibilities), ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ರಚಿಸಲಾದ ನ್ಯಾಯ ಮಂಡಳಿಗಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳು ಆಸ್ತಿಯನ್ನು ಹಿಂದಿರುಗಿಸಬೇಕು ಎಂದು ತಿಳಿಸಿದೆ.
ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ- ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?
ವ್ಯಕ್ತಿಯೋರ್ವ, ತನ್ನ ತಂದೆ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಷರತ್ತಿನೊಂದಿಗೆ (condition) ಆಸ್ತಿ ವರ್ಗಾವಣೆ ಮಾಡಿಸಿಕೊಂಡಿದ್ದ. ಆದರೆ ಆತ ತನ್ನ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ.
ಹೀಗಾಗಿ ಸಂತ್ರಸ್ತೆ ಡಿಸೆಂಬರ್ 24, 2020 ರಂದು ಛತ್ತರ್‌ಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಕಾಯಿದೆಯ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಮಕ್ಕಳು ತಮ್ಮ ತಂದೆತಾಯಿಯನ್ನು ನೋಡಿಕೊಳ್ಳಲು ವಿಫಲವಾದರೆ ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ (Parents and Senior Citizens Welfare Act) ಪೋಷಕರು ನೀಡಿದ ಆಸ್ತಿ ಮತ್ತು ಉಡುಗೊರೆಗಳನ್ನು ಹಿಂತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ಆದೇಶಿಸಿರುವ ಈ ತೀರ್ಪು, ಮಕ್ಕಳು ಪೋಷಕರಿಂದ ಪಡೆದ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ (Do not abuse), ಅವರ ಹಿತಾಸಕ್ತಿಗಳ ಪಾಲನೆಯನ್ನು ಖಚಿತಪಡಿಸಲು, ಹಿರಿಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.