ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ದವಸ, ಧಾನ್ಯ, ಹಣ್ಣುಗಳ ಜೊತೆಗೆ ಹಸಿರು ತರಕಾರಿಗಳನ್ನು ಸಹ ಸೇರಿಸಬೇಕಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ (winter) ಹೆಚ್ಚಾಗಿ ದೊರಕುವ ಮೆಂತ್ಯೆ ಸೊಪ್ಪನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.
ಮೆಂತ್ಯ ಸೊಪ್ಪಿನಲ್ಲಿ ಪೊಟಾಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ (Calcium), ವಿಟಮಿನ್ ಎ, ವಿಟಮಿನ್ ಸಿ, ಸೆಲೆನಿಯಂ, ವಿಟಮಿನ್ ಸಿ ಯಂತಹ ಪೋಷಕಾಂಶಗಳು ಕಂಡುಬರುತ್ತವೆ.
ಕೂದಲನ್ನು ಆರೋಗ್ಯಕರವಾಗಿಡಲು ಮೆಂತ್ಯ ಸೊಪ್ಪು (Fenugreek) ಸಹಾಯ ಮಾಡುವುದು. ಮೆಂತ್ಯದಲ್ಲಿರುವ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸಾರಜನಕವು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇನ್ನೂ ಈ ಸೊಪ್ಪನ್ನು ಜಗಿದು ತಿನ್ನುವುದರಿಂದ (By chewing and eating) ಕೂದಲುಗಳು ಬಲಗೊಳ್ಳುತ್ತವೆ.
ಇದನ್ನು ಓದಿ : Tea ಕುಡಿಯಲು ಮನೆಗೆ ಬನ್ನಿ ಎಂದು ಅಂಕಲ್‌ನ ಕರೆದ ಯುವತಿ ; ಮುಂದೆನಾಯ್ತು.?
ಚಳಿಗಾಲ ಬಂತೆಂದರೆ ಸಾಕು ಅನೇಕ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆ (Digestive problem) ಪೀಡಿಸಲು ಶುರುವಾಗುತ್ತದೆ. ಅಂಥವರಿಗೆ ಮೆಂತ್ಯ ಸೊಪ್ಪು ಪ್ರಯೋಜನಕಾರಿ.
ಮೆಂತ್ಯ ಸೊಪ್ಪು ಉತ್ತಮ ಪ್ರಮಾಣದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು (Fiber and antioxidants) ಹೊಂದಿದೆ.
ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣದಿಂದ ಬಳಲುತ್ತಿರುವ ಜನರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಸೊಪ್ಪು ಸಹಾಯ ಮಾಡುತ್ತದೆ.
ಅನಾದಿ ಕಾಲದಿಂದಲೂ ನಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ (Kidney disease) ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ.
ಇದನ್ನು ಓದಿ : ಕಾಂಗ್ರೆಸ್ ಮುಖಂಡನ ಧಮ್ಕಿಗೆ ಅಂಜಿ ಆ*ತ್ಮಹ*ತ್ಯೆಗೆ ಶರಣಾದ್ರಾ School ಮುಖ್ಯ ಶಿಕ್ಷಕ.?
ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತಾ ಬಂದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ (Consuming it regularly will strengthen the immune system). ಇದರಿಂದಾಗಿ ನೆಗಡಿ, ಶೀತದಂತಹ ಅಪಾಯ ಕಡಿಮೆಯಾಗುತ್ತದೆ.
ಮೆಂತ್ಯ ಸೊಪ್ಪು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಮೆಂತ್ಯ ಸೊಪ್ಪಿನಲ್ಲಿ ಅಮೈನೋ ಆಮ್ಲಗಳಿದ್ದು (Amino acid), ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಹಿಂದಿನ ಸುದ್ದಿ : Special News : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನದಲ್ಲಿ ಎಷ್ಟೇ ಕಷ್ಟಗಳು (Problems) ಬಂದರೂ ಅದನ್ನು ಎದುರಿಸಿ ಮುಂದೆ ಬರುವ ಕೆಲವು ಜನರು ಎಲ್ಲರಿಗೂ ಸ್ಪೂರ್ತಿ ಇದ್ದಂತೆ. ಯಾವುದೇ ಸಮಸ್ಯೆ ಇರಲಿ ಎಲ್ಲಿಲ್ಲದ ಆತ್ಮವಿಶ್ವಾಸ (Confidence) ಮತ್ತು ಮುಖದಲ್ಲಿ ಮಂದಹಾಸ ಇದ್ದೇ ಇರುತ್ತದೆ. ಅವರು ಮಾನಸಿಕವಾಗಿ ಧೈರ್ಯವಂತರಾಗಿದ್ದರೆ (mentally brave) ಯಾವುದೇ ಸಮಸ್ಯೆಗಳನ್ನು ತುಂಬಾ ಸರಳವಾಗಿ ನಿಭಾಯಿಸುವ ಶಕ್ತಿ ಅವರಲ್ಲಿರುತ್ತದೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
* ಹೆಚ್ಚಿನ ಆಂತರಿಕ ಶಕ್ತಿ ಹೊಂದಿರುವ ಜನರು (People with high inner strength) ದುರ್ಬಲರಾಗಿರುವುದು ಎಂದರೆ ಹೇಡಿತನದ ಲಕ್ಷಣವಲ್ಲ ಎಂಬುದನ್ನು ಅರಿತುಕೊಂಡಿರುತ್ತಾರೆ. ಇವರು ತಮ್ಮ ದುರ್ಬಲತೆಯನ್ನು (weak) ಸ್ವೀಕರಿಸುತ್ತಾರೆ. ಇದು ಧೈರ್ಯ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿ ಎನ್ನಬಹುದು.
* ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಈ ಜನರ ಉತ್ತಮ ಅಭ್ಯಾಸವಾಗಿದೆ.ಇವರು ಸಂಪರ್ಕಗಳನ್ನು ಬೆಳೆಸಿಕೊಂಡು, ತಮ್ಮ ಸಂಬಂಧಗಳನ್ನು ಗೌರವಿಸುತ್ತಾರೆ. ಅಲ್ಲದೇ ಅದನ್ನು ಉಳಿಸಿಕೊಳ್ಳಲು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುತ್ತಾರೆ (expends energy). ಕುಟುಂಬ ಹಾಗೂ ಸ್ನೇಹಿತರ ಬಾಂಧವ್ಯ ಬೆಳೆಸಿಕೊಳ್ಳುವುದರಿಂದ ಅವರಲ್ಲಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯು ಹೆಚ್ಚುತ್ತದೆ.
* ಆಂತರಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಅನಾನುಕೂಲತೆಯ ಬಗ್ಗೆ ತಲೆನೆ ಕೆಡಿಸಿಕೊಳ್ಳುವುದಿಲ್ಲ. ಎಂತಹ ಪರಿಸರಗಳಲ್ಲಿಯೂ ಅವರು ಹೊಂದಿಕೊಂಡು ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಕಷ್ಟವೆಂದು ಹೇಳುತ್ತಾ ಕುಳಿತುಕೊಳ್ಳದೇ ಅದನ್ನು ಹಿಮ್ಮೆಟ್ಟಿಸುವುದು (reversing) ಹೇಗೆಂದು ಯೋಚಿಸಿ, ಪರಿಹಾರ ಕಂಡುಕೊಳ್ಳುತ್ತಾರೆ.
* ಹೆಚ್ಚಿನ ಆಂತರಿಕ ಶಕ್ತಿಯನ್ನು ಹೊಂದಿರುವವರು ಸಾವಧಾನವಾಗಿರುತ್ತಾರೆ. ತಮ್ಮ ಭಾವನೆಗಳು, ಆಲೋಚನೆಗಳು ಮತ್ತು ಕ್ರಿಯೆಗಳ (feelings, thoughts and actions) ಬಗ್ಗೆ ತಿಳಿದುಕೊಂಡಿರುತ್ತಾರೆ. ಅಂತಹವರು ತಮ್ಮೊಳಗೆ ಶಾಂತ ಮನೋಭಾವ ಬೆಳೆಸಿಕೊಂಡಿರುತ್ತಾರೆ.
ಇದನ್ನು ಓದಿ : Special news : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?
* ಈ ಜನರು ಕೃತಜ್ಞತೆಯ ಭಾವವನ್ನು (A sense of gratitude) ಹೊಂದಿರುತ್ತಾರೆ. ಕೃತಜ್ಞತೆಯು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಸರಳ ಸಂತೋಷಗಳನ್ನು ಹುಡುಕುತ್ತಾರೆ. ತಮ್ಮಲ್ಲಿಲ್ಲ ಎಂದು ತಲೆಕೆಡಿಕೊಳ್ಳುವುದರ ಬದಲಿಗೆ ತಮ್ಮಲ್ಲಿ ಏನಿದೆಯೋ ಅದರಲ್ಲಿ ಸಂತೋಷವನ್ನು ಕಾಣುತ್ತಾರೆ.
* ಆಂತರಿಕವಾಗಿ ಗಟ್ಟಿಯಾಗಿರುವುದು ಇವರ ಇನ್ನೊಂದು ಗುಣ. ತಮ್ಮ ಮಾನಸಿಕ ಗಟ್ಟಿತನವನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ. ಇದು ವಿಫಲತೆಗಳನ್ನು ಹಿಮ್ಮೆಟ್ಟಿಸಲು ಹಾಗೂ ತೊಂದರೆಗಳನ್ನು ಎದುರಿಸಲು ಧೈರ್ಯ ನೀಡುತ್ತದೆ.
* ಆಂತರಿಕ ಶಕ್ತಿಯನ್ನು ಹೊಂದಿರುವ ಜನರು ಆಳವಾದ ಆಂತರಿಕ ಶಕ್ತಿಯನ್ನು (Deep inner strength) ಹೊಂದಿರುತ್ತಾರೆ. ಈ ಜನರು ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಾರೆ. ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಗಟ್ಟಿಯಾಗಿರುತ್ತಾರೆ.