Wednesday, February 5, 2025
HomeViral Videoನಗ್ನವಾಗಿ ರೈಲು ಹತ್ತಿದ ವ್ಯಕ್ತಿ : ಶಾಕ್‌ ಆದ ಮಹಿಳಾ ಪ್ರಯಾಣಿಕರು ; ವಿಡಿಯೋ ವೈರಲ್.!
spot_img
spot_img
spot_img
spot_img

ನಗ್ನವಾಗಿ ರೈಲು ಹತ್ತಿದ ವ್ಯಕ್ತಿ : ಶಾಕ್‌ ಆದ ಮಹಿಳಾ ಪ್ರಯಾಣಿಕರು ; ವಿಡಿಯೋ ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಮವಾರ ಸಂಜೆ ಮುಂಬೈ ಲೋಕಲ್ ರೈಲಿನ ಮಹಿಳಾ ವಿಭಾಗಕ್ಕೆ ಬೆತ್ತಲೆ ವ್ಯಕ್ತಿಯೊಬ್ಬ (naked man) ನುಗ್ಗಿದ್ದು, ಪ್ರಯಾಣಿಕರಲ್ಲಿ ಭಯ ಮತ್ತು ಕೋಪವನ್ನುಂಟು (fear and anger) ಮಾಡಿದೆ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಂದ ಕಲ್ಯಾಣ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಎಸಿ ಲೋಕಲ್ ರೈಲು (AC local train) ಯಲ್ಲಿ ಈ ಘಟನೆ ಸಂಭವಿಸಿದೆ.

ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು (mentally ill), ತಪ್ಪಾಗಿ ರೈಲು ಹತ್ತಿದ್ದಾನೆ ಎಂದು ರೈಲ್ವೆ ಸಿಬ್ಬಂದಿ ಹೇಳುತ್ತಾರೆ. ಡಿಸೆಂಬರ್ 16, ಸೋಮವಾರ ಸಂಜೆ 4.11 ರ ಸುಮಾರಿಗೆ ಆ ಬೆತ್ತಲೆ ವ್ಯಕ್ತಿ ಸೆಂಟ್ರಲ್ ರೈಲ್ವೇಸ್ (Central Railways) ಲೋಕಲ್‌ನ ಮಹಿಳಾ ವಿಭಾಗದ ಡಬ್ಬಿಯಲ್ಲಿ ಹತ್ತಿದ್ದಾನೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ (According to the Times of India), ರೈಲು ಘಾಟ್ಕೋಪರ್ ನಿಲ್ದಾಣದಲ್ಲಿ ನಿಂತಾಗ ಅವನು ಅದರೊಳಗೆ ಪ್ರವೇಶಿಸಿದ್ದಾನೆ.

ಇದನ್ನು ಓದಿ : Warning : ಮೈ ಕೊರೆಯುವ ಚಳಿಯಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ.!

ಆತ ರೈಲಿನಲ್ಲಿ ಬಂದ ಪರಿಣಾಮ ಕೋಪ ಮತ್ತು ಗದ್ದಲವನ್ನು ಉಂಟಾಗಿತ್ತು ಮತ್ತು ಕಂಪಾರ್ಟ್‌ಮೆಂಟ್‌ (compartment) ನಲ್ಲಿದ್ದ ಮಹಿಳೆಯರು ಅವನನ್ನು ಹೊರಗೆ ಹೋಗಲು ಕೇಳಿಕೊಂಡರು. ಆದರೆ ಆ ವ್ಯಕ್ತಿ ಹೊರಗೆ ಹೊರಡಲು ನಿರಾಕರಿಸಿದ್ದಾನೆ. ಆದಾಗ್ಯೂ, ಕೂಗು ಮತ್ತು ಗದ್ದಲವನ್ನು ಕೇಳಿದ ಮೋಟಾರ್‌ಮ್ಯಾನ್ ರೈಲನ್ನು ನಿಲ್ಲಿಸಿದನು. ಇದೇ ವೇಳ ಪಕ್ಕದ ಬೋಗಿಯಲ್ಲಿದ್ದ ಟಿಸಿ (TC) ಗೆ ಮಹಿಳೆಯರು ಕರೆ ಮಾಡಿದ್ದಾರೆ.

ಅಂತಿಮವಾಗಿ ಟಿಸಿ ಆ ವ್ಯಕ್ತಿಯನ್ನು ಮುಂದಿನ ನಿಲ್ದಾಣ (Next station) ದಲ್ಲಿ ಇಳಿಯುವಂತೆ ಮಾಡಿದ್ದಾರೆ. ಘಟನೆಯ ವಿಡಿಯೋ Onlinನಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಇದರಲ್ಲಿ ಮಹಿಳೆಯರು ಬೆತ್ತಲೆ ವ್ಯಕ್ತಿಯನ್ನು ರೈಲಿನಿಂದ ಇಳಿಯುವಂತೆ ಕೇಳುತ್ತಿರುವುದನ್ನು ನೋಡಬಹುದಾಗಿದೆ. “नीचे उत्तर है (ಕೆಳಗಿಳಿಯಿರಿ)” ಎಂಬ ಕೂಗಿದ ದೃಶ್ಯಗಳಲ್ಲಿ ಕೇಳಿಬರುತ್ತಿವೆ, ಇನ್ನು ಆ ವ್ಯಕ್ತಿ ಬಾಗಿಲಿನ ಬಳಿ ನಿಂತಿರುವುದನ್ನು ಕಾಣುತ್ತದೆ.\

ಇದನ್ನು ಓದಿ : Triangle Love story : ಪ್ರಿಯಕರನಿಗಾಗಿ ನದಿ ಪಾಲಾದ ಗೃಹಿಣಿ ; ನೇಣಿಗೆ ಶರಣಾದ ಪ್ರಿಯಕರ.!

ರೈಲ್ವೆ ಸಿಬ್ಬಂದಿಯೊಬ್ಬರು ಆ ವ್ಯಕ್ತಿಯನ್ನು ಹೊರಗೆ ತಳ್ಳುತ್ತಿರುವುದನ್ನು ಸಹ ವಿಡಿಯೋದಲ್ಲಿ ತೋರಿಸುತ್ತಿದ್ದು, ಇದು ಸಾಮಾಜಿಕ ಮಾಧ್ಯಮ (Social media) ದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ಕೆಲವರು ಆ ವ್ಯಕ್ತಿ ಮಾನಸಿಕ ಆರೋಗ್ಯ (mental health) ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು ಸಹಾಯ ಪಡೆಯಬೇಕಿತ್ತು ಎಂದು ಹೇಳಿದ್ದಾರೆ.

ಆ ವ್ಯಕ್ತಿ ಮಾನಸಿಕವಾಗಿ ಅಸ್ಥಿರನಾಗಿದ್ದ ಎಂದು ರೈಲ್ವೆ ಅಧಿಕಾರಿಗಳು (Railway officers) ಹೇಳುತ್ತಾರೆ. ಸರ್ಕಾರಿ ರೈಲ್ವೆ ಪೊಲೀಸರು (GRP) ತಕ್ಷಣ ಆತನನ್ನು ಹಿಡಿದು, ಬಟ್ಟೆ ಧರಿಸಲು ಸಹಾಯ ಮಾಡಿ ನಿಲ್ದಾಣದ ಹೊರಗೆ ಬಿಟ್ಟರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!