ಜನಸ್ಪಂದನ ನ್ಯೂಸ್, ಹಾವೇರಿ : ಹಾವೇರಿ ಜಿಲ್ಲೆಯ ರಾಣೆಬೆನ್ನೂರು (Ranebennur) ಜೆಎಂಎಫ್ಸಿ ನ್ಯಾಯಾಲಯವು (JMFC Court), ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದ ತಂದೆಗೆ 27,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ರಾಣೆಬೆನ್ನೂರಿನ ದಿಳ್ಳೆಪ್ಪ ಕಾಟಿ ಎಂಬುವವರು ತಮ್ಮ ಅಪ್ರಾಪ್ತ ಮಗನಿಗೆ (minor son) ಬೈಕ್ ಚಲಾಯಿಸಲು ಕೊಟ್ಟಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಘಟನೆಯ ಕುರಿತು ರಾಣೆಬೆನ್ನೂರು ಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ (Traffic police station) ಅಪಘಾತ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : KSFES : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು (The judge heard the argument) ಶುಕ್ರವಾರ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದಕ್ಕೆ ತಂದೆಗೆ ದಂಡ (penalty) ವಿಧಿಸಿದೆ. ಇದೇ ವೇಳೆ ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡದಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನಲೆ :
ಜುಲೈ 30, 2024 ರಂದು ರಾಣೆಬೇನ್ನೂರು ನಗರದ ಹಲಗೇರಿ ಕ್ರಾಸ್ ಸಮೀಪ ಬೈಕ್ ಅಪಘಾತವಾಗಿತ್ತು.
ಇದನ್ನು ಓದಿ : ಅಳುವಾಗ ಮೂಗು ಸೋರುತ್ತದೆ ಏಕೆ ಗೊತ್ತಾ.? ಇಲ್ಲಿದೆ ಅಚ್ಚರಿಯ ಮಾಹಿತಿ.!
ಈ ಅಪಘಾತದಲ್ಲಿ ಜಾಕಿರ್ ಜಮಾಲುದಿನ್ ಕಮದೋಡ ಎಂಬುವವರು ಗಾಯಗೊಂಡಿದ್ದರು. ಆದರೆ ಬೈಕ್ನ್ನು ಅಪ್ರಾಪ್ತ ಹುಡುಗ ಚಲಾಯಿಸುತ್ತಿದ್ದನು ಮತ್ತು ಆ ಹುಡುಗನಿಗೆ ಅವರ ಅಪ್ಪ ಬೈಕ್ ಚಲಾಯಿಸಲು ನೀಡಿದ್ದನು.
ಈ ಅಪಘಾತದ ಕುರಿತು 1-07-2024ರಂದು ರಾಣೆಬೇನ್ನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಅಪರಾಧವಾಗಿದ್ದು,@CPBlr @Jointcptraffic @blrcitytraffic #FollowTrafficRules#BengaluruTrafficPolice#DcpTrafficWest pic.twitter.com/ni4SIrjTSN
— DCP TRAFFIC WEST (@DCPTrWestBCP) December 13, 2024
ಹಿಂದಿನ ಸುದ್ದಿ : ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದ Goa ಪೊಲೀಸ್ ಅಧಿಕಾರಿ.!
ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿ (Hubli) ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ನಟೋರಿಯಸ್ ಕ್ರಿಮಿನಲ್ (Notorious criminal) ಒಬ್ಬನನ್ನು ಜೈಲಿನಿಂದ ಪರಾರಿಯಾಗುವಂತೆ ಮಾಡಿ, ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಬಂಧಿತನನ್ನು (arrested) ಅಮಿತ್ ನಾಯಕ್ ಎಂದು ತಿಳಿದು ಬಂದಿದೆ. ಈತ ಗೋವಾ ಕ್ರೈಂ ಬ್ರ್ಯಾಂಚ್ನಲ್ಲಿ (In Goa Crime Branch) ಕೆಲಸ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.
ಪೊಲೀಸ್ ಅಧಿಕಾರಿ ಅಮಿತ್ ನಾಯಕ್ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕ್ಕಿ ಎಂಬಾತನನ್ನು ಜೈಲಿನಿಂದ ಎಸ್ಕೇಪ್ ಮಾಡಿಸಿದ್ದು (He escaped from jail), ಬಳಿಕ ಆತನೊಂದಿಗೆ ಹುಬ್ಬಳ್ಳಿಗೆ ಬಂದಿದ್ದ.
ಸದ್ಯ ಈತನನ್ನು ಗೋವಾದ ಕಾರಾಗೃಹದಲ್ಲಿ ಇರಿಸಲಾಗಿತ್ತು. ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಅರೆಸ್ಟ್ ಮಾಡಿ ಗೋವಾ ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು. ಈತನ ಕಾವಲಿಗೆ ಅಮಿತ್ನನ್ನು ನೇಮಿಸಲಾಗಿತ್ತು.
ಇದನ್ನು ಓದಿ : KSFES : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಆದರೆ, ಕಾವಲಿಗಿದ್ದ (was on guard) ಅಮಿತ್, ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ (ಡಿ.13) ಮಧ್ಯರಾತ್ರಿ ಕಸ್ಟಡಿಯಿಂದ ಎಸ್ಕೇಪ್ ಮಾಡಿಸಿ ಬಳಿಕ ಆರೋಪಿಯೊಂದಿಗೆ ತಾನೂ ಕೂಡ ಪರಾರಿಯಾಗಿದ್ದ.