ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಮನಸ್ಸಿಗೆ ನೋವಾದರೆ (mind hurts), ಸ್ನೇಹಿತರು ದುಃಖ ಪಡುತ್ತಿದ್ದರೆ ಅಥವಾ ಯಾರಾದರೂ ಮೃತಪಟ್ಟರೆ ನಾವು ಕಂಬನಿ ಮಿಡಿಯುತ್ತೇವೆ.
ನಾವು ಜೋರಾಗಿ ಅತ್ತರೆ (cry) ನಮ್ಮ ಕಣ್ಣಿನಲ್ಲಿ ನೀರು ಬರುತ್ತದೆ. ಅದರ ಬೆನ್ನಲ್ಲೇ ಮೂಗು ಕೂಡ ಸೋರಲು ಶುರುವಾಗುತ್ತದೆ (The nose also starts running).
ಇದನ್ನು ಓದಿ : Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?
ಮೂಗು ಸೋರಲು ಅಸಲಿಗೆ ಶೀತವೇನು ಆಗಿರುವುದಿಲ್ಲ (It’s not cold). ಆದ್ರೂ ಸಹ ಮೂಗಿನ ಹೊಳ್ಳೆಯಿಂದ ನೀರು ಬರುತ್ತದೆ. ಆದ್ರೆ ಹೀಗೆಕೆ ಆಗುತ್ತದೆ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಜನರು ಕಣ್ಣೀರು ಒರೆಸಿಕೊಳ್ಳುವಂತೆ, ಅಳುತ್ತ ಅಳುತ್ತ ಮೂಗನ್ನು ಸಹ ಒರೆಸಿಕೊಳ್ಳಲು ಪ್ರಾರಂಭಿಸುತ್ತೇವೆ.
ನಾವು ಅತ್ತಾಗಲೆಲ್ಲಾ ಮೂಗು ಸೋರುವುದಕ್ಕೆ ಕಾರಣ ‘ಲ್ಯಾಕ್ರಿಮಲ್ ಪಂಕ್ಟಮ್ (Lachrymal punctum)’. ನೀವು ನಿಮ್ಮ ಕಣ್ಣನ್ನು ಸೂಕ್ಷ್ಮವಾಗಿ ನೋಡಿದರೆ ಇದೇನು ಅಂತ ನಿಮಗೆ ಗೊತ್ತಾಗುತ್ತದೆ.
ಇದನ್ನು ಓದಿ : ಸ್ಮಾರ್ಟ್‌ಫೋನ್‌ಲ್ಲಿ ಇರುವ aeroplane ಮೋಡ್’ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?
ಕಣ್ಣಿನ ರೆಪ್ಪೆಯ ಕೆಳಭಾಗದಲ್ಲಿ (Bottom of the eyelid) ಒಂದು ಚಿಕ್ಕ ರಂಧ್ರವಿರುತ್ತದೆ. ಬಹುಶಃ ಇದನ್ನು ಅನೇಕರು ಗಮನಿಸಿರುವುದಿಲ್ಲ. ಗಮನಿಸಿದ್ದರೂ ಏನಿದು ಎಂದು ತಿಳಿದುಕೊಳ್ಳುವ ಪ್ರಯತ್ನ ಸಹ ಮಾಡಿರುವುದಿಲ್ಲ ಬಿಡಿ.
ನಮ್ಮ ಕಣ್ಣಿನ ಕೆಳಗಿರುವ ಈ ರಂಧ್ರವು, ನಿಮ್ಮ ಕಣ್ಣಿನಿಂದ ಹೊರ ಹೊಮ್ಮುವ (Extruded) ನೀರನ್ನು ಬರಿದಾಗಿಸಿ, ಅದನ್ನು ಮೂಗಿನ ನಾಳಕ್ಕೆ ಹರಿಸುತ್ತದೆ. ಇದರಿಂದಲೇ ಕಣ್ಣಲ್ಲಿ ನೀರು ಬಂದ ಕ್ಷಣವೇ, ಮೂಗಿನಿಂದಲೂ ನೀರು ಸೋರಿಕೆಯಾಗುತ್ತದೆ. ಗೊತ್ತಾಯ್ತಾ.?
ಹಿಂದಿನ ಸುದ್ದಿ : PDO ನೇಮಕಾತಿಯಲ್ಲಿ ಅಕ್ರಮ ಆರೋಪ; ಪ್ರಶ್ನೆಪತ್ರಿಕೆ ಸೀಲ್ ಓಪನ್ ಆಗಿರುವ ಫೋಟೋ ವೈರಲ್.!
ಜನಸ್ಪಂದನ ನ್ಯೂಸ್, ಧಾರವಾಡ : ಡಿಸೆಂಬರ್ 8ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (Panchayat Development Officer) ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿ ಬಂದಿದೆ.
ಇದನ್ನು ಓದಿ : ಜೈಲಿನಲ್ಲಿ ಗಾಂಜಾ, ಸಿಗರೇಟು ಸೇದುತ್ತ ಇಸ್ಪೀಟ್ ಆಡುತ್ತಿರುವ ಕೈದಿಗಳ ವಿಡಿಯೋ Viral.!
ಅಂತೆಯೇ ಧಾರವಾಡದಲ್ಲಿ (Dharwad) ಪ್ರಶ್ನೆ ಪತ್ರಿಕೆಗಳ ಮೇಲಿನ ಸೀಲ್ ಓಪನ್ ಮಾಡಲಾಗಿದೆ (seal on the question papers has been opened) ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಡಿಸೆಂಬರ್ 8ರಂದು ಪಿಡಿಒ ನೇಮಕಾತಿಗೆ ಸಂಬಂಧಿಸಿ ನಡೆದಿತ್ತು. ಹೀಗಾಗಿ ತಪ್ಪಿತಸ್ಥರನ್ನು (guilty) ಶಿಕ್ಷಿಸಿ ಮರುಪರೀಕ್ಷೆಗೆ ಆದೇಶ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಸಾಮಾನ್ಯವಾಗಿ ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು (PDO Recruitment Exam Question Papers) ಮೂರು ಹಂತದ ಸೀಲ್ ಭದ್ರತೆಯನ್ನು (Three -level seal security) ಹೊಂದಿರುತ್ತವೆ. ಪರೀಕ್ಷಾ ಕೇಂದ್ರದ ಪ್ರಶ್ನೆ ಪತ್ರಿಕೆಗಳ ಬಂಡಲ್‌ಗೆ ಸಮಗ್ರವಾಗಿ (Comprehensive) ಪ್ಲಾಸ್ಟಿಕ್ ಕವರ್ನ ಸೀಲ್ ಹಾಕಿರಲಾಗುತ್ತದೆ.
ಬಳಿಕ ಆಯಾ ಪರೀಕ್ಷಾ ಕೊಠಡಿಯ (exam hall) ಪ್ರಶ್ನೆ ಪತ್ರಿಕೆಗಳಿಗೆ ಕಾಗದದ ಕವರ್ನ ಜೊತೆಗೆ ಸೀಲ್ ಹಾಕಿರುತ್ತಾರೆ. ಕೊನೆಗೆ ಪ್ರತಿಯೊಂದು ಪ್ರಶ್ನೆ ಪತ್ರಿಕೆಗೂ ಪ್ರತ್ಯೇಕ ಸೀಲ್ ಇರುತ್ತದೆ. ಆದರೆ, ಪ್ರಶ್ನೆ ಪತ್ರಿಕೆಯ ಮೇಲಿನ ಸೀಲ್ ಓಪನ್ ಮಾಡಿ ಮತ್ತೆ ಅಂಟಿಸಿದ್ದಾರೆಂದು (gum) ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಕೆಪಿಎಸ್‌ಸಿ ಸರಿಯಾಗಿ ಪರೀಕ್ಷೆ ನಡೆಸಿಲ್ಲವೆಂದು ಅಭ್ಯರ್ಥಿಗಳು ಆರೋಪ ಮಾಡಿದ್ದು, ಮರು ಪರೀಕ್ಷೆ (Re- examination) ನಡೆಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಜೈಲಿಗಟ್ಟಿ, ಮರು ಪರೀಕ್ಷೆ ನಡೆಸುವಂತೆ KPSC ಗೆ ಆದೇಶಿಸಬೇಕೆಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ) ವಿದ್ಯಾರ್ಥಿ ಘಟಕದ ಕಾಂತಕುಮಾರ್ ಆರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆಗ್ರಹಿಸಿದ್ದಾರೆ.
X ಸಂದೇಶದ ಮೂಲಕ ಪ್ರಶ್ನೆ ಪತ್ರಿಕೆ ಸೀಲ್ ಓಪನ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.