Sunday, December 22, 2024
HomeSpecial NewsSpecial news : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!
spot_img

Special news : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ದೆ ಮಾಡುತ್ತಾರೆ (Men sleep more than women) ಎಂದು ಬಹಿರಂಗ ಪಡಿಸಿದೆ. ಪುರುಷರ ಮತ್ತು ಮಹಿಳೆಯರ ನಿದ್ರೆಯ ಮಾದರಿಗಳನ್ನು (Sleep patterns) ಗಮನಿಸಿದ್ದು, ಇದರಲ್ಲಿ ಹಲವು ವ್ಯತ್ಯಾಸಗಳನ್ನು ಈ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ (Researchers found in the study).

ಯಾಕೆ ಮಹಿಳೆಯರು ಪುರುಷರಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ?

ನಿದ್ರೆಯು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ (main objective of the research is). ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಗಿದೆ. ನಿದ್ರೆಯ ಮೇಲೆ ದೀರ್ಘಕಾಲದ ಕಾಯಿಲೆಗಳಾದ (Chronic diseases) ಬೊಜ್ಜು, ಮಧುಮೇಹ, ಅಲ್ಝೈಮರ್ ಕಾಯಿಲೆಯ ಅಪಾಯವು ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು

ಅಲ್ಟ್ರಾ- ಸೆನ್ಸಿಟಿವ್ ಸೆನ್ಸರ್ ಗಳನ್ನು (Ultra- sensitive sensors) ಈ ಅಧ್ಯಯನದಲ್ಲಿ ಬಳಸಲಾಗಿದ್ದು, ವಿಶೇಷ ಪಂಜರಗಳಲ್ಲಿ 267 ಇಲಿಗಳ ಮೇಲೆ ಈ ಸಂಶೋಧನೆ ನಡೆಸಲಾಯಿತು. ಪೂರ್ತಿ ದಿನ ಅಥವಾ 24 ಗಂಟೆಗಳಲ್ಲಿ, ಗಂಡು ಇಲಿಗಳು (Male rats) ಸುಮಾರು 670 ನಿಮಿಷಗಳ ಕಾಲ ನಿದ್ರಿಸಿದವು. ಆದರೆ ಹೆಣ್ಣು ಇಲಿಗಳು (female rats) 1 ಗಂಟೆಗಿಂತಲೂ ಕಡಿಮೆ ಸಮಯ ಮಲಗಿರುವುದನ್ನು ಸಂಶೋಧಕರು ಕಂಡುಕೊಂಡರು.

ಮಹಿಳೆಯರಲ್ಲಿ ಹಾರ್ಮೋನುಗಳು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆ (Hormones in women change from month to month). ಹೀಗಾಗಿ ಮಹಿಳೆಯರು ನಿದ್ರೆಯನ್ನು ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿ ಅತಿಯಾದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆಯು ತನ್ನ ವರದಿಯಲ್ಲಿ ತಿಳಿಸಿದೆ.

ಋತುಚಕ್ರದ ವೇಳೆ ಮಹಿಳೆಯರು ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ತೊಂದರೆಯನ್ನು ಅನುಭವಿಸುತ್ತಾರೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ನಿದ್ರೆಗೆ ಭಂಗ ತರಬಹುದು.

ಇದನ್ನು ಓದಿ : Belagavi : ಸಿಪಿಐ ವಿರುದ್ಧ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್.!

ಈ ಋತು ಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ಹೊಟ್ಟೆನೋವು, ಸೆಳೆತ ಮತ್ತು ಬೆವರುವಿಕೆಯಂತಹ (Abdominal pain, cramps and sweating) ಕೆಲವು ಅಹಿತಕರ ದೈಹಿಕ ರೋಗ ಲಕ್ಷಣಗಳನ್ನು ಅನುಭವಿಸುತ್ತಾರೆ. ಈ ಅಹಿತಕರ ದೈಹಿಕ ರೋಗ ಲಕ್ಷಣಗಳ ಕಾರಣಗಳಿಗಾಗಿ, ಮಹಿಳೆಯರು ಜೀವನದ ಈ ಹಂತಗಳಲ್ಲಿ ನಿದ್ರಾಹೀನತೆ, ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಂತಹ ಕೆಲವು ನಿದ್ರೆಯ ಅಸ್ವಸ್ಥತೆಗಳಿಂದ (from sleep disorders) ಬಳಲುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.

 

ಹಿಂದಿನ ಸುದ್ದಿ : ಬೆಳಗಾವಿ : ಸಿಪಿಐ ವಿರುದ್ಧ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದ ಉದ್ಯಮಬಾಗ ಪೊಲೀಸ್ ಠಾಣೆಯ (Udhyamabag Police Station) ಸಿಪಿಐ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಯತ್ನಿಸಿದ್ದು (Attempted suicide), ಅವರನ್ನು ರಕ್ಷಣೆ ಮಾಡಲಾಗಿದೆ.

ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಉದ್ಯಮಬಾಗ ಪೊಲೀಸ್ ಠಾಣೆಯ ಸಿಪಿಐ ಧರೇಗೌಡ ಪಾಟೀಲ ವಿರುದ್ಧ ಇಂತದ್ದೊಂದು ಆರೋಪ ಕೇಳಿ ಬಂದಿದೆ.

ಕಾನ್ಸ್‌ಟೇಬಲ್ ವಿಠ್ಠಲ ಮುನ್ನಾಳ ಎಂಬುವವರು ಐದು ಪುಟಗಳ ಪತ್ರ ಬರೆದು (Write a five page letter) ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!

ಸಿಪಿಐ ಅವರು ರಜೆ (leave) ವಿಷಯದಲ್ಲಿ ತಾರತಮ್ಯ (Discrimination) ಮಾಡುತ್ತಾರೆ, ಠಾಣೆಯಲ್ಲಿ ವಿಪರೀತವಾಗಿ ಜಾತೀಯತೆ (casteism) ಮಾಡುತ್ತಾರೆ, ಹಫ್ತಾ ವಸೂಲಿ ಮಾಡಿ ಕೊಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯಕ್ಕೆ ಹಾಕಲ್ಲ, ಕರ್ತವ್ಯದಲ್ಲಿದ್ದರೂ ಗೈರು ಹಾಜರಾತಿ ಎಂದು ತೋರಿಸಿ ಪುಸ್ತಕದಲ್ಲಿ ಬರೆಯಲು ಹೇಳುತ್ತಾರೆ, ಅಲ್ಲದೇ ಮಹಿಳಾ ಸಿಬ್ಬಂದಿಯನ್ನು ನಿಂದಿಸುತ್ತಾರೆ (Abuses women staff), ತಾನು ಕಾರ್ಯಾಂಗದ ಅಧಿಕಾರಿಯೆಂಬುದನ್ನು ಮರೆತು ಸರ್ವಾಧಿಕಾರಿ (Dictator) ಎಂಬಂತೆ ವರ್ತಿಸುತ್ತಾರೆ ಎಂದು ಕಾನ್ಸ್‌ಟೇಬಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ (Mentioned).

ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳ ಸಮೇತ 5 ಪುಟಗಳ ಪತ್ರವನ್ನು ಬರೆದಿರುವ ಕಾನ್ಸ್‌ಟೇಬಲ್ ಅವರು, ಡಿಜಿ ಐಜಿಪಿ, ಬೆಳಗಾವಿ ನಗರ ಪೊಲೀಸ್ ಆಯುಕ್ತರು (Belagavi City Police Commissioner), ಖಡೇ ಬಜಾರ್ ಎಸಿಪಿ, ಗೃಹ ಸಚಿವರ ಕಚೇರಿ, ಮಾನವ ಹಕ್ಕು ಆಯೋಗ (Human Rights Commission), ಪೊಲೀಸ್ ದೂರುಗಳ ಪ್ರಾಧಿಕಾರ ಘಟಕಕ್ಕೆ (Police Complaints Authority Unit) ಪತ್ರ ರವಾನೆ ಮಾಡಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments