ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿರುತ್ತದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 23-04-2024 ಆಗಿದೆ. ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿ ಖಾಲಿ ಇರುವ SDA & FDA ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ/Post Details :
ಹುದ್ದೆಗಳ ಹೆಸರು (SDA & FDA) :
ರಾಜ್ಯ ವೃಂದದಲ್ಲಿ ಖಾಲಿ ಹುದ್ದೆಗಳು : 18 ಹುದ್ದೆಗಳು.
ಸ್ಥಳೀಯ ವೃಂದದಲ್ಲಿ ಖಾಲಿ ಹುದ್ದೆಗಳು : 07 ಹುದ್ದೆಗಳು.
ವೇತನ (Salary) :
ದ್ವಿತೀಯ ದರ್ಜೆ ಸಹಾಯಕರು : ರೂ. 21,400-42,000.
ಪ್ರಥಮ ದರ್ಜೆ ಸಹಾಯಕರು : ರೂ. 27,650-52,650.
Apex : ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಶೈಕ್ಷಣಿಕ ಅರ್ಹತೆಗಳು/Educational Qualification:
ದ್ವಿತೀಯ ದರ್ಜೆ ಸಹಾಯಕರು : ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಟಟ್ಟ ಯಾವುದೇ ಸಂಸ್ಥೆಯಿಂದ 12ನೇ ತರಗತಿ ಅಥವಾ ಪಿಯುಸಿ ಅಥವಾ ಡಿಪ್ಲೋಮಾ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.
ಪ್ರಥಮ ದರ್ಜೆ ಸಹಾಯಕ : ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು.
ಅರ್ಜಿ ಶುಲ್ಕ/ Application Fees :
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ : ರೂ. 750/-
ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ : ರೂ. 750/-
ಪ.ಜಾ/ಪಪಂ/C-1 ಸೇರಿದ ಅಭ್ಯರ್ಥಿಗಳಿಗೆ : 500/-
ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 500/- (ಪ್ರಕ್ರಿಯೆ ಶುಲ್ಕ ಮಾತ್ರ)
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್/ಆಫ್ಲೈನ್ ಮುಖಾಂತರ ಪಾವತಿ ಮಾಡಬಹುದು.
ವಯೋಮಿತಿ/Age limit (23-04-2024ಕ್ಕೆ) :
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಭಾರತೀಯ ರೈಲ್ವೆ : SSLC ಆದವರಿಗೆ ಉದ್ಯೋಗವಕಾಶ ; ಇಂದೇ ಅರ್ಜಿ ಸಲ್ಲಿಸಿ.!
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ :
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) : 05 ವರ್ಷ.
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ.
ಅಂಗವಿಕಲ (PWD) : ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/Selection procedure :
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/Application Submission Method :
ಈ ನೇಮಕಾತಿಗಾಗಿ ಆನ್ಲೈನ್ ಅರ್ಜಿಗಳನ್ನು ದಿನಾಂಕ 24.03.2024 ರಿಂದ 23.04.2024 ವರೆಗೆ ಸಲ್ಲಿಸಬಹುದಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಈ ಕೆಳಗೆ ನೀಡಲಾಗಿದೆ.