ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳ (Various posts ) ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಈ ಮೂಲಕ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಈ ವರ್ಷದ ಮೂರನೇ ಅಧಿಸೂಚನೆಯಾಗಿದೆ.
ತಾವೇನಾದರು ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವವರಾಗಿದ್ದರೆ, ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ನೇಮಕಾತಿ ಸಂಪೂರ್ಣ ವಿವರ ಈ ಕೆಳಕಂಡಂತಿದೆ.
Health : ಹೊಕ್ಕಳಿಗೆ ಬೇವಿನ ಎಣ್ಣೆ ಹಚ್ಚುವುದರಿಂದ ಏನಾಗುತ್ತದೆ.?
ಭಾರತೀಯ ರೈಲ್ವೆ ಇಲಾಖೆ (Indian Railway Department ) ವ್ಯಾಪ್ತಿಯಲ್ಲಿ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
- ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್ಇನ್ಸ್ಪೆಕ್ಟರ್ ಮತ್ತು
- ರೈಲ್ವೆ ಕಾನ್ಸ್ಟೇಬಲ್
ಈ ಎರಡು ಹುದ್ದೆಗಳು ಸೇರಿ ಒಟ್ಟು 4,660 ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ಆರ್ಬಿ, ಆರ್ಪಿಎಫ್ನ ಎಸ್ಐ, ಕಾನ್ಸ್ಟೇಬಲ್ ಹುದ್ದೆಗಳ ಕುರಿತು ಆಸಕ್ತಿ ಇರುವವರು ಈ ಕೆಳಕಂಡ ಮಾಹಿತಿಯಲ್ಲಿ ತಿಳಿಯಬಹುದಾಗಿದೆ.
Astrology : ಫೆ. 27ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ನೇಮಕಾತಿ ವಿವರ :
ಸಂಸ್ಥೆ ಹೆಸರು : ಭಾರತೀಯ ರೈಲ್ವೆ (RRB).
ಹುದ್ದೆ ಹೆಸರು : ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಹಾಗು ಆರ್ಪಿಎಸ್ ಕಾನ್ಸ್ಟೇಬಲ್.
ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಸಂಖ್ಯೆ : 452.
ರೈಲ್ವೆ ಕಾನ್ಸ್ಟೇಬಲ್ ಹುದ್ದೆಗಳ ಸಂಖ್ಯೆ : 4,208.
ಖಾಲಿ ಹುದ್ದೆ ಒಟ್ಟು ಸಂಖ್ಯೆ : 4,660.
ಮಾಸಿಕ ವೇತನ : 21700 ರಿಂದ 35,400 ರೂ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ : ಮೇ. 14
ಪೋಸ್ಟಿಂಗ್ : ದೇಶದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ (ಎಲ್ಲಿಯಾದರೂ).
ವಿದ್ಯಾರ್ಹತೆ : ಸಬ್ಇನ್ಸ್ಪೆಕ್ಟರ್ ಹುದ್ದೆಗೆ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು.
ಕಾನ್ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣಗೊಳಿಸಿರಬೇಕು ಎಂದು ಅಧಿಸೂಚನೆ ನೀಡಲಾಗಿದೆ.
Cinema : ಸೆ*ಕ್ಸ್ಗೋಸ್ಕರ ಯಾರೋ ಒಬ್ಬನನ್ನು ಮದುವೆಯಾಗೋದಿಲ್ಲ ; ಹಲ್ ಚಲ್ ಸೃಷ್ಟಿಸಿದ ನಟಿಯ ಮಾತು.!
ವಯೋಮಿತಿ : ಸಬ್ಇನ್ಸ್ಪೆಕ್ಟರ್ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಜುಲೈ 01ಕ್ಕೆ 20-28 ವರ್ಷವಾಗಿರಬೇಕು. ಉಳಿದಂತೆ ಕಾನ್ಸ್ಟೇಬಲ್ ಹುದ್ದೆಯ ಅಭ್ಯರ್ಥಿಗಳಿಗೆ ಅದೇ ದಿನಾಂಕಕ್ಕೆ 18-28 ವರ್ಷ ವಯಸ್ಸಾಗಿರಬೇಕು.
ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು, ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ: 500 ರೂ.
ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ: 250 ರೂ.
ಪ್ರಮುಖ ದಿನಾಂಕಗಳು :
ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ : 15-04-2024 .
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 14-05-2024.
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಲಿಂಕ್ ಅನ್ನು 2024ರ ಏಪ್ರಿಲ್ 15 ರಂದು ಆಯಾ ರೈಲ್ವೆ ವಲಯಗಳ ಪ್ರಾದೇಶಿಕ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಈ ಲಿಂಕ್’ಗೆ ಭೇಟಿ ಗೆ ನೀಡಿ ಪಡೆದುಕೊಳ್ಳಬೇಕು.